`ಹೈ ಶುಗರ್` ಅನ್ನು ಸಹ ತ್ವರಿತವಾಗಿ ಕಂಟ್ರೋಲ್ ಮಾಡಬಲ್ಲ ಮಸಾಲೆ ಪದಾರ್ಥಗಳಿವು
Diabetes Diet: ಡಯಾಬಿಟಿಸ್ ಅಥವಾ ಮಧುಮೇಹ ಇದ್ದವರು ತಮ್ಮ ಆಹಾರ-ಪಾನೀಯಗಳ ಬಗ್ಗೆ ನಿಗಾವಹಿಸಬೇಕು. ಆಹಾರದಲ್ಲಿ ಸ್ವಲ್ಪ ಹೆಚ್ಚು-ಕಡಿಮೆ ಆದರೂ ಕೂಡ ದೇಹದಲ್ಲಿ ಶುಗರ್ ಲೆವೆಲ್ ಹೆಚ್ಚಾಗುತ್ತದೆ.
ಬೆಂಗಳೂರು: ಮಧುಮೇಹಿಗಳು ಶಿಸ್ತುಬದ್ಧ ಜೀವನಶೈಲಿಯ ಜೊತೆಗೆ ಉತ್ತಮ ಆಹಾರ ಕ್ರಮ ಸರಿಸುವುದು ಅತ್ಯಗತ್ಯ. ಇಲ್ಲದಿದ್ದರೆ, ಶುಗರ್ ಲೆವೆಲ್ ಹೆಚ್ಚಾಗುತ್ತದೆ. ಮಧುಮೇಹ ಅಧಿಕಗೊಂಡಾಗ ಇದು ಇತರ ಕಾಯಿಲೆಗಳಿಗೂ ಆಹ್ವಾನವಿದ್ದಂತೆ ಎನ್ನಬಹುದು. ಆದರೆ, ನಿಮ್ಮ ದೈನಂದಿನ ಆಹಾರದಲ್ಲಿ ಕೆಲವು ಮಸಾಲೆ ಪದಾರ್ಥಗಳನ್ನು ಬಳಸಿ ಸುಲಭವಾಗಿ ಬ್ಲಡ್ ಶುಗರ್ ನಿಯಂತ್ರಿಸಬಹುದು.
ಹೈ ಬ್ಲಡ್ ಶುಗರ್ ನಿಯಂತ್ರಿಸಲು ತುಂಬಾ ಲಾಭದಾಯಕ ಈ ಭಾರತೀಯ ಮಸಾಲೆಗಳು:
ಆರೋಗ್ಯ ತಜ್ಞರ ಪ್ರಕಾರ, ಕೆಲವು ಭಾರತೀಯ ಮಸಾಲೆಗಳು ಔಷಧೀಯ ಗುಣಗಳಿಂದ ಕೂಡಿವೆ. ಇದರಿಂದಾಗಿ, ಮಸಾಲೆಗಳ ಬಳಕೆಯಿಂದಲೂ ಸಹ ಬ್ಲಡ್ ಶುಗರ್ ಅನ್ನು ಸುಲಭವಾಗಿ ಕಂಟ್ರೋಲ್ ಮಾಡಬಹುದು. ಅಂತಹ ಮಸಾಲೆಗಳೆಂದರೆ...
ಇದನ್ನೂ ಓದಿ- ಒಂದು ಗ್ಲಾಸ್ ನೀರಿನಲ್ಲಿ ಇದೊಂದು ಪದಾರ್ಥ ಬೆರೆಸಿ ಕುಡಿದ್ರೆ ಕೇವಲ ಎರಡೇ ವಾರದಲ್ಲಿ ಡೊಳ್ಳು ಹೊಟ್ಟೆ ಕರಗಿ ಸ್ಲಿಮ್ ಆಗ್ತೀರಾ..!
ಅರಿಶಿನ:
ಅರಿಶಿನದಲ್ಲಿ ಕರ್ಕ್ಯುಮೀನ್ ಸಂಯುಕ್ತವಿದ್ದು ಇದು ಉರಿಯೂತವನ್ನು ಕಡಿಮೆ ಮಾಡಿ, ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಹಾಲಿನಲ್ಲಿ ಅರಿಶಿನ ಬೆರೆಸಿ ಕುಡಿಯುವುದರಿಂದ ಶುಗರ್ ಹೆಚ್ಚಾಗುವುದನ್ನು ತಪ್ಪಿಸಬಹುದು.
ಮೆಂತ್ಯ ಬೀಜಗಳು:
ಕರಗುವ ಫೈಬರ್ನಲ್ಲಿ ಹೇರಳವಾಗಿರುವ ಮೆಂತ್ಯ ಬೀಜಗಳು ದೇಹದಲ್ಲಿ ಗ್ಲೂಕೋಸ್ ಹೀರುವಿಕೆಯನು ನಿಧಾನಗೊಳಿಸಿ ಇನ್ಸುಲಿನ್ ಕಾರ್ಯವನ್ನು ಸುಧಾರಿಸುತ್ತದೆ. ಇದರಿಂದ ಡಯಾಬಿಟಿಸ್ ರೋಗಿಗಳಲ್ಲಿ ಬ್ಲಡ್ ಶುಗರ್ ಹೈ ಆಗುವುದನ್ನು ತಪ್ಪಿಸಲು ಸಹಾಯಕವಾಗಿದ್.ಎ ರಾತ್ರಿ ವೇಳೆ ಒಂದು ಲೋಟ ನೀರಿನಲ್ಲಿ 2 ಸ್ಪೂನ್ ಮೆಂತ್ಯ ಬೀಜಗಳನ್ನು ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
ಇದನ್ನೂ ಓದಿ- ಕಾಂತಿಯುತವಾದ ಉದ್ದ ಕೂದಲಿಗೆ ನೈಸರ್ಗಿಕ ಪರಿಹಾರ ರೋಸ್ ವಾಟರ್...
ಕರಿಮೆಣಸು:
ಕರಿಮೆಣಸಿನಲ್ಲಿ ಪೈಪರಿನ್ ಎಂಬ ಸಂಯುಕ್ತವಿದ್ದು ಇದು ಗ್ಲೂಕೋಸ್ ಚಯಾಪಚಯವನ್ನು ಹೆಚ್ಚಿಸುತ್ತದೆ. ಆಹಾರದಲ್ಲಿ ಕರಿ ಮೆಣಸನ್ನು ಬಳಸುವುದರಿಂದ ಶುಗರ್ ಕಂಟ್ರೋಲ್ ಮಾಡುವುದು ಸುಲಭವಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.