BIG SUCCESS: ಕೊನೆಗೂ ಈ ಮಾರಕ ಕಾಯಿಲೆಗೆ ಮೊಟ್ಟಮೊದಲ ಸ್ವದೇಶಿ ವ್ಯಾಕ್ಸಿನ್ ಬಿಡುಗಡೆ ಮಾಡಿದ Serum Institute Of India
Pneumosil vaccine: ಈ ಅಗ್ಗದ ಮತ್ತು ಉತ್ತಮ ಗುಣಮಟ್ಟದ ವ್ಯಾಕ್ಸಿನ್ ಮಕ್ಕಳನ್ನು ನ್ಯೂಮೊಕಾಕಲ್ ಕಾಯಿಲೆಗಳಿಂದ ರಕ್ಷಿಸುವುದನ್ನು ಸುನಿಶ್ಚಿತಗೊಳಿಸಲಿದೆ.
Pneumosil vaccine:ಕಳೆದ ಹಲವು ದಿನಗಳಿಂದ ನೀವು ಕೊವಿಡ್ -19 ವ್ಯಾಕ್ಸಿನ್ ಗೆ ಸಂಬಂಧಿಸಿದ ಸುದ್ದಿಗಳನ್ನು ಕೇಳುತ್ತಿರುವಿರಿ. ಈ ವ್ಯಾಕ್ಸಿನ್ ಯಾವಾಗ ಜನರಿಗೆ ತಲುಪಲಿದೆ ಎಂಬ ಊಹಾಪೋಹಗಳಿವೆ ಸ್ವಲ್ಪ ವಿರಾಮ ನೀಡಿ, ಈ ಒಳ್ಳೆಯ ಸುದ್ದಿಯೊಂದನ್ನು ಓದಿರಿ. ನ್ಯೋಮೋನಿಯಾ ರೋಗಕ್ಕೆ ವ್ಯಾಕ್ಸಿನ್ ಕಂಡುಹಿಡಿಯುವ ದಿಕ್ಕಿನಲ್ಲಿ ಭಾರತ ಬಹುದೊಡ್ಡ ಯಶಸ್ಸನ್ನು ಸಾಧಿಸಿದೆ. ಹೌದು, ಪುಣೆ ಮೂಲದ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಭಾರತದ ಮೊಟ್ಟಮೊದಲ ಸ್ವದೇಶಿ ನಿರ್ಮಿತ ನ್ಯೋಮೋಕಾಕಲ್ ವ್ಯಾಕ್ಸಿನ್ ನ್ಯೂಮೊಸಿಲ್ (Pneumosil vaccine) ವ್ಯಾಕ್ಸಿನ್ ಅನ್ನು ಇಂದು ಬಿಡುಗಡೆ ಮಾಡಿದೆ. IANS ಸುದ್ದಿ ಸಂಸ್ಥೆ ಪ್ರಕಟಿಸಿರುವ ವರದಿಯೊಂದರ ಪ್ರಕಾರ, ಈ ಸಂದರ್ಭದಲ್ಲಿ ಕೇಂದ್ರ ಅರೋಗ್ಯ ಸಚಿವ ಡಾ. ಹರ್ಷವರ್ಧನ್ ಉಪಸ್ಥಿತರಿದ್ದರು ಎನ್ನಲಾಗಿದೆ. ಅವರ ಉಪಸ್ಥಿತಿಯಲ್ಲಿಯೇ ಕಂಪನಿ ಈ ವ್ಯಾಕ್ಸಿನ್ ಬಿಡುಗಡೆ ಮಾಡಿದೆ. ಈ ಕುರಿತು ಅಧಿಕೃತ ಮಾಹಿತಿ ನೀಡಿರುವ SII ಸಂಪೂರ್ಣ ಸ್ವದೇಶಿ ನಿರ್ಮಿತ ನ್ಯೋಮೊಸಿಲ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದೆ.
ರಂಗು ಪಡೆದ 10 ವರ್ಷಗಳ ಕಠಿಣ ಪರಿಶ್ರಮ
ಸೀರಮ್ ಇನ್ಸ್ಟಿಟ್ಯೂಟ್ (SII), PATH ಮತ್ತು ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ಸಹಯೋಗದೊಂದಿಗೆ ನುಮೋಸಿಲ್ ಲಸಿಕೆಯನ್ನು ಅಭಿವೃದ್ದಿಪಡಿಸಲು ಒಂದು ದಶಕಗಳ ಕಾಲವೇ ಸಂದಿದೆ. ಇದು ಒಂದು ಪ್ರಮುಖ ಮೈಲಿಗಲ್ಲು ಎಂದು ಪರಿಗಣಿಸಲ್ಪಟ್ಟಿದೆ, ಇದು ನ್ಯುಮೋಕೊಕಲ್ ಕಾಂಜುಗೇಟ್ ಲಸಿಕೆ ಸಾಮರ್ಥ್ಯವನ್ನು ಸುಧಾರಿಸುತ್ತದೆ ಮತ್ತು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಿಗೆ ಸುಸ್ಥಿರ ಪ್ರವೇಶ ಖಚಿತಪಡಿಸಲಿದೆ. ಈ ಲಸಿಕೆ ಮಕ್ಕಳಲ್ಲಿ ನ್ಯುಮೋಕೊಕಲ್ ಕಾಯಿಲೆಗಳ (ನ್ಯುಮೋನಿಯಾ) ಅಪಾಯದಿಂದ ದೀರ್ಘಕಾಲದ ರಕ್ಷಣೆ ನೀಡಲಿದೆ.
ಇದನ್ನು ಓದಿ- Serum Institute Corona ಲಸಿಕೆಗೆ ಸರಕಾರ ಅನುಮತಿ ನೀಡಿಲ್ಲವೆ? ಇಲ್ಲಿದೆ ವಾಸ್ತವಿಕತೆ
ಶ್ಲಾಘನೆ ವ್ಯಕ್ತಪಡಿಸಿದ ಆರೋಗ್ಯ ಸಚಿವರು
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್, ದೇಶದ ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ಇದೊಂದು ಪ್ರಮುಖ ಮೈಲಿಗಲ್ಲು ಮತ್ತು ಕೈಗೆಟುಕುವದರದಲ್ಲಿ, ಉತ್ತಮ ಗುಣಮಟ್ಟದ ಲಸಿಕೆಯಾಗಿರುವ ಇದು ಮಕ್ಕಳನ್ನು ನ್ಯೂಮೊಕಾಕಲ್ ಕಾಯಿಲೆಗಳಿಂದ ರಕ್ಷಣೆ ಒದಗಿಸಲಿದೆ ಎಂದು ಹೇಳಿದ್ದಾರೆ.
Corona Vaccine ತುರ್ತು ಬಳಕೆಗಾಗಿ ಅನುಮತಿ ಕೋರಿದ ಮೊದಲ ಭಾರತೀಯ ಕಂಪನಿ
ಉತ್ತಮ ರೋಗ ನಿರೋಧಕ ಕ್ಷಮತೆ ಒದಗಿಸುತ್ತದೆ
ನ್ಯೂಮೊಸಿಲ್ ಲಸಿಕೆ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿರುವ ಸಿರಮ್ ಇನ್ಸ್ಟಿಟ್ಯೂಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದರ ಪೂನಾವಾಲಾ ," ನಿರಂತರ ಸಪ್ಲೈ ಜೊತೆಗೆ ಒಂದು ಉತ್ತಮ ಗುಣಮಟ್ಟದ ವ್ಯಾಕ್ಸಿನ್ ಅಭಿವೃದ್ಧಿ ಪಡೆಸಲು ನಾವು ಕಳೆದ ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿದ್ದೆವು. ಇದು ವಿಶ್ವಾದ್ಯಂತ ಇರುವ ಮಕ್ಕಳಿಗೆ ಹಾಗೂ ಕುಟುಂಬಗಳಿಗೆ ಉತ್ತಮ ರೋಗನಿರೋಧಕ ಕ್ಷಮತೆ ಸುನಿಶ್ಚಿತಗೊಳಿಸುತ್ತದೆ " ಎಂದು ಹೇಳಿದ್ದಾರೆ. ಜೊತೆಗೆ ಮಕ್ಕಳನ್ನು ನ್ಯೂಮೊಕಾಕಲ್ ಕಾಯಿಲೆಗಳಿಂದ ರಕ್ಷಣೆ ಒದಗಿಸಲು ಇದೊಂದು ಆದರ್ಶ ವಿಕಲ್ಪ ಎಂದು ಸಾಬೀತಾಗಲಿದೆ ಎಂದು ಪೂನಾವಾಲಾ ಹೇಳಿದ್ದಾರೆ.
Side Effect ಆರೋಪ, Serum Instituteನಿಂದ 100 ಕೋಟಿ ರೂ.ಮಾನಹಾನಿ ಬೆದರಿಕೆ
ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇದು ವರದಾನ
ನ್ಯೂಮೋನಿಯಾ ಕಾಯಿಲೆಯಿಂದ ವಿಶ್ವಾದ್ಯಂತ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಅಪಾಯ ಎದುರಾಗುತ್ತದೆ. 2018 ರಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿಯೇ ಈ ಕಾಯಿಲೆಯಿಂದ ಸುಮಾರು 67,800 ಮಕ್ಕಳು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ರಕ್ಷಿಸಲು ಈ ವ್ಯಾಕ್ಸಿನ್ ಪರಿಣಾಮಕಾರಿ ಸಾಬೀತಾಗಲಿದೆ ಎಂದು ಅದರ ಪೂನಾವಾಲಾ ಹೇಳಿದ್ದಾರೆ. ಭಾರತದಲ್ಲಿ ಆಕ್ಸ್ಫರ್ಡ್ ಸಹಯೋಗದೊಂದಿಗೆ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೊವಿಡ್-19 ಲಸಿಕೆಯ ಟ್ರಯಲ್ ಹಾಗೂ ಉತ್ಪಾದನೆಯನ್ನು ಮಾಡುತ್ತಿದೆ ಎಂಬುದು ಇಲ್ಲಿ ಗಮನಾರ್ಹ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.