ಚಂಡಿಗಡ್: Is Alcohol Protect Against Coronavirus Infection? - ಕೊರೊನಾ ವೈರಸ್ (Covid-19) ಸೋಂಕು ಎಷ್ಟೊಂದು ವೇಗವಾಗಿ ಹರಡುತ್ತಿದೆಯೋ ಅಷ್ಟೇ ವೇಗವಾಗಿ ಅದಕ್ಕೆ ಸಮಬಂಧಿಸಿದ ವಿವಿಧ ಮನೆಮದ್ದುಗಳು ಕೂಡ ವೇಗವಾಗಿ ವೈರಲ್ ಆಗುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಕೊರೊನಾದಿಂದ ಪಾರಾಗುವ ಇಂತಹುದೇ ಒಂದು ಉಪಾಯ ಇದೀಗ ಭಾರಿ ವೈರಲ್ ಆಗುತ್ತಿದೆ. ಈ ವೈರಲ್ (Viral News) ಸಂದೇಶದಲ್ಲಿ Alcohol ಕೊರೊನಾ ಸೊಂಕಿನಿಂದ ರಕ್ಷಿಸಲಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಪಂಜಾಬ್ ನಲ್ಲಿರುವ ಕೊರೊನಾ ರೋಗ ತಜ್ಞರ ಸಮೀತಿಯ ಮುಖ್ಯಸ್ಥ ಡಾ. ಕೆ. ಕೆ. ತಳವಾರ್ ಸ್ಥಿತಿಯನ್ನು ಸ್ಪಷ್ಟಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ತಜ್ಞರ ಎಚ್ಚರಿಕೆ
ಪಂಜಾಬ್ ನ ರೋಗ ತಜ್ಞರ (Corona Expert) ಸಮಿತಿಯ ಮುಖ್ಯಸ್ಥರಾಗಿರುವ ಡಾ. ಕೆ. ಕೆ. ತಲವಾರ್ ಜನರಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮದ್ಯ ಕೊರೊನಾ ಸೋಂಕಿನಿಂದ ರಕ್ಷಣೆ ನೀಡುತ್ತದೆ ಎನ್ನಲಾಗುತ್ತಿರುವ ವದಂತಿಗಳಿಗೆ ಸೊಪ್ಪು ಹಾಕದಿರಲು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ  Covid-19 ನಿಂದ ಸುಮಾರು ನಾಲ್ಕು ಲಕ್ಷ ಜನರು ಸೊಂಕಿತರಾಗಿದ್ದಾರೆ.


ಇದನ್ನೂ ಓದಿ- ಕರೋನಾ ಲಸಿಕೆಯ ಸೈಡ್ ಅಫೆಕ್ಟ್ ಬಗ್ಗೆ ಆತಂಕ ಬೇಡ..! ಡಾಕ್ಟರ್ಸ್ ಹೇಳಿದ್ದೇನು ಗೊತ್ತಾ..?


ಇಮ್ಮುನಿಟಿ ಮೇಲೆ ವಿಪರೀತ ಪ್ರಭಾವ ಉಂಟಾಗುತ್ತದೆ
ಅತಿ ಹೆಚ್ಚು ಮದ್ಯ ಸೇವನೆಯಿಂದ ಜನರ ರೋಗ ಪ್ರತಿರೋಧಕ ಶಕ್ತಿಯ (Immunity) ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಹಾಗೂ ಇದರಿಂದ ಅವರು ಬೇಗ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಮಧ್ಯ ಸೇವನೆಯಿಂದ ಕೊರೊನಾ (Covid-19) ಸೋಂಕಿನಿಂದ ರಕ್ಷಣೆ ಒದಗಿಸುತ್ತದೆ ಎಂದು ತಾವು ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಓದಿರುವುದಾಗಿ ಹೇಳಿದ್ದಾರೆ. ಆದರೆ, ಈ ರೀತಿಯ ತಪ್ಪು ಕಲ್ಪನೆನಿಂದ  ಗಂಭೀರ ಸಮಸ್ಯೆಗಳು ಎದುರಾಗುತ್ತವೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ- Corona Variant: ಕರೋನಾ ರೂಪಾಂತರದ ಮೊದಲ ಫೋಟೋ ಬಹಿರಂಗ, ಇದು ಭಾರತದ ಎರಡನೇ ತರಂಗಕ್ಕೆ ಕಾರಣ


ಹೆಚ್ಚು ಮದ್ಯ ಸೇವನೆಯಿಂದ ಸೋಂಕಿನ ಅಪಾಯ ಹೆಚ್ಚು
ಈ ಕುರಿತು ಮಾತನಾಡಿರುವ ಅವರು' ಒಂದು ವೇಳೆ ಜನರು ಹೆಚ್ಚಿನ ಪ್ರಮಾಣದಲ್ಲಿ ಮದ್ಯವನ್ನು ಸೇವಿಸಿದರೆ ಅವರಿಗೆ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗುತ್ತದೆ' ಎಂದು ಹೇಳಿದ್ದಾರೆ. ಸಾರಾಯಿ ಸೇವನೆಯಿಂದ ಕೊರೊನಾ ಸಾಯುತ್ತದೆ ಎಂಬ ಸಲಹೆ ತಪ್ಪಾಗಿದೆ. ಆದರೆ, ಕಡಿಮೆ ಪ್ರಮಾಣದಲ್ಲಿ ಸಾರಾಯಿ ಸೇವನೆಯಿಂದ ಯಾವುದೇ ಹಾನಿ ಇಲ್ಲ ಎಂದು ಅವರು ಇದೆ ವೇಳೆ ಸ್ಪಷ್ಟಪಡಿಸಿದ್ದಾರೆ. ವಿಜ್ಞಾನಿಗಳ ಸಂಶೋಧನೆಯ ಆಧಾರದ ಮೇಲೆ ಕಾರೋನಾ ವ್ಯಾಕ್ಸಿನ್ (Corona Vaccine) ಹಾಕಿಸಿಕೊಳ್ಳುವ ಎರಡು ದಿನ ಮುನ್ನ ಮತ್ತು ಎರಡು ದಿನ ನಂತರ ಮದ್ಯ ಸೇವನೆಯಿಂದ ದೂರ ಉಳಿಯಬೇಕು ಎಂದು ತಳವಾರ್ ಹೇಳಿದ್ದಾರೆ.


ಇದನ್ನೂ ಓದಿ- Deepika Padukoneಗೆ ಕರೋನಾ ಸೋಂಕು, ಆತಂಕದಲ್ಲಿ ರಣವೀರ್ ಸಿಂಗ್ ಅಭಿಮಾನಿಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ