RO Water: ಆರೋಗ್ಯಕ್ಕೆ ಆರ್‌ಓ ವಾಟರ್ ಬಳಕೆ ಎಷ್ಟು ಉತ್ತಮ? ತಜ್ಞರು ಹೇಳಿದ್ದೇನು?
RO Water: ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಹೆಚ್ಚಾಗಿ ಆರ್‌ಓ ವಾಟರ್ ಕುಡಿಯಲು ಇಚ್ಚಿಸುತ್ತಾರೆ. ಆರ್‌ಓ ವಾಟರ್ ಅನ್ನು ಹೆಚ್ಚು ಶುದ್ಧ ನೀರು ಎಂದು ಪರಿಗಣಿಸಲಾಗಿದೆ. ಆದರೆ, ಇಂತಹ ನೀರು ಆರೋಗ್ಯಕ್ಕೆ ನಿಜವಾಗಿಯೂ ಒಳ್ಳೆಯದೇ? ಈ ಬಗ್ಗೆ ತಜ್ಞರು ಹೇಳಿದ್ದೇನು?
RO Water For Health: ಆರ್‌ಓ ವಾಟರ್, ಫಿಲ್ಟರ್ ಮಾಡಿದ ನೀರು ನಿಮ್ಮ ಆರೋಗ್ಯಕ್ಕೆ ಉತ್ತಮ ಎಂದು ನೀವು ಸಹ ಭಾವಿಸಿದ್ದಾರೆ ನಿಮಗಿದೆ ಒಂದು ಶಾಕಿಂಗ್ ಸುದ್ದಿ. ಸಾಮಾನ್ಯವಾಗಿ, ಆರ್‌ಓ ವಾಟರ್ ಅನ್ನು ಹೆಚ್ಚು ಶುದ್ಧವಾದ ನೀರು, ಹಾಗಾಗಿ ಈ ನೀರನ್ನು ಕುಡಿಯುವುದರಿಂದ ನಾವು ರೋಗಗಳಿಂದ ಹೊರಗುಳಿಯಬಹುದು ಎಂದು ಹೆಚ್ಚಿನ ಜನ ಭಾವಿಸುತ್ತಾರೆ. ಆದರೆ, ಇಂತಹ ತುಂಬಾ ಶುದ್ಧವಾದ ನೀರು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.
ವಾಸ್ತವವಾಗಿ, ನೀರಿನಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸೇರಿದಂತೆ ಎಲ್ಲಾ ಅಗತ್ಯ ಖನಿಜಗಳು ಇರುತ್ತವೆ. ಆದರೆ, ನಾವದನ್ನು ಸಂಪೂರ್ಣವಾಗಿ ಶುದ್ಧೀಕರಿಸಿದಾಗ ನಮ್ಮ ದೇಹಕ್ಕೆ ಅಗತ್ಯವಿರುವ ಖನಿಜಗಳು ಲಭ್ಯವಾಗುವುದಿಲ್ಲ. ಹಾಗಾಗಿ ಇದು ಭವಿಷ್ಯದಲ್ಲಿ ಆರೋಗ್ಯಕ್ಕೆ ಹಾನಿಕಾರಕ ಎಂದು ತಜ್ಞರು ಎಚ್ಚರಿಸಿದ್ದಾರೆ.
ಆರ್‌ಒ ವಾಟರ್ ಫಿಲ್ಟರ್ (RO Water Filter) ಅನ್ನು ಸ್ಥಾಪಿಸಬೇಕಾದರೆ, ನೀರಿನಲ್ಲಿ ಒಟ್ಟು ಕರಗಿದ ಘನವಸ್ತುಗಳು (ಟಿಡಿಎಸ್) ಲೀಟರ್‌ಗೆ 200-250 ಮಿಗ್ರಾಂ ಆಗಿರಬೇಕು ಎಂದು ಖಚಿತಪಡಿಸಿಕೊಳ್ಳಬೇಕು. ಇದರಿಂದ ನಾವು ಕುಡಿಯುವ ನೀರಿನಲ್ಲಿ ನಮ್ಮ ಆರೋಗ್ಯಕ್ಕೆ ಮುಖ್ಯವಾಗಿ ಬೇಕಾಗಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸೇರಿದಂತೆ ಎಲ್ಲಾ ಅಗತ್ಯ ಖನಿಜಗಳು ಇರುತ್ತವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ- Weight Loss: ಹೊಟ್ಟೆ ಸುತ್ತಲಿನ ಕೊಬ್ಬನ್ನು ನೈಸರ್ಗಿಕವಾಗಿ ಕರಗಿಸುತ್ತೆ ಈ 5 ಹಸಿರು ಆಹಾರಗಳು
ಆರ್‌ಓ ವ್ಯವಸ್ಥೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಆಯೋಜಿಸಲಾಗಿದ್ದ ವೆಬ್‌ನಾರ್‌ನಲ್ಲಿ ಭಾಗವಹಿಸಿ ಮಾತನಾಡಿದ, ಪ್ರಮುಖ ವಿಜ್ಞಾನಿ ಡಾ. ಅತುಲ್ ವಿ ಮಾಲ್ಧುರೆ ಅವರು ಆರ್‌ಓ ನೀರಿನಿಂದ ಕಲ್ಮಶಗಳನ್ನು ತೆಗೆದು ಹಾಕುವುದರ ಜೊತೆಗೆ ದೇಹಕ್ಕೆ ಅಗತ್ಯವಿರುವ ಪ್ರಯೋಜನಕಾರಿ ಖನಿಜಗಳನ್ನು ಸಹ ತೆಗೆದುಹಾಕಬಹುದು ಎಂದು ಹೇಳಿದರು.
ಸರ್ ಗಂಗಾ ರಾಮ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ.ಅನಿಲ್ ಅರೋರಾ ಮಾತನಾಡಿ, ಆರ್‌ಒ ನೀರಿನ ಬದಲು ನೈಟ್ರೇಟ್‌ನಂತಹ ಕಲ್ಮಶಗಳನ್ನು ಫಿಲ್ಟರ್ ಮಾಡಿ ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಜನರಿಗೆ ಆರೋಗ್ಯಕ್ಕೆ ಒಳ್ಳೆಯದು. ನೀರನ್ನು ಕುದಿಸುವುದರಿಂದ ಇದು ಬ್ಯಾಕ್ಟೀರಿಯಾ, ವೈರಸ್ ಮತ್ತು ಶಿಲೀಂಧ್ರಗಳನ್ನು ಮಾತ್ರ ಕೊಲ್ಲುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೇದಾಂತ ಆಸ್ಪತ್ರೆಯ ಹಿರಿಯ ಸಲಹೆಗಾರ (ಗ್ಯಾಸ್ಟ್ರೋಎಂಟರಾಲಜಿ) ಡಾ ಅಶ್ವಿನಿ ಸೇಥಿಯಾ ಅವರ ಪ್ರಕಾರ, ಆರ್‌ಓ ವಾಟರ್ ಫಿಲ್ಟರ್‌ಗಳು ರೋಗ-ಉಂಟುಮಾಡುವ ಬ್ಯಾಕ್ಟೀರಿಯಾ, ವೈರಸ್‌ಗಳು, ಫಂಗಸ್ ಮತ್ತು ಕೊಳಕುಗಳನ್ನು ಫಿಲ್ಟರ್ ಮಾಡುತ್ತವೆ. ಮಾತ್ರವಲ್ಲ, ಇದು ದೇಹಕ್ಕೆ ಅಗತ್ಯವಾದ ಖನಿಜಗಳನ್ನು ಸಹ ನಾಶ ಪಡಿಸುವುದರಿಂದ ದೀರ್ಘಾವಧಿಯಲ್ಲಿ ಆರ್‌ಓ ವಾಟರ್ ಬಳಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿಸಿದ್ದಾರೆ.
ಅಧ್ಯಯನವೊಂದರ ಪ್ರಕಾರ, ಜೆಕೊಸ್ಲೊವಾಕಿಯಾ ಮತ್ತು ಸ್ಲೋವಾಕಿಯಾದಲ್ಲಿ ಐದು ವರ್ಷಗಳ ಕಾಲ ಆರ್‌ಒ ನೀರನ್ನು ಕಡ್ಡಾಯಗೊಳಿಸಿದ ನಂತರ, ಅಲ್ಲಿನ ಅಧಿಕಾರಿಗಳು ಸ್ನಾಯುಗಳ ಆಯಾಸ, ಸೆಳೆತ, ಮೈ-ಕೈ ನೋವು, ಜ್ಞಾಪಕ ಶಕ್ತಿಯ ಕೊರತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳ ಬಗ್ಗೆ ದೂರು ನೀಡಿದ್ದರು. ಇದಕ್ಕೆ ದೇಹದಲ್ಲಿ ಖನಿಜಗಳ ಕೊರತೆಯೇ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ಇದನ್ನೂ ಓದಿ- ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳ ಸೇವಸಿದರೆ ತಪ್ಪಿದ್ದಲ್ಲ ಸಮಸ್ಯೆ
ಆರ್‌ಓ ಫಿಲ್ಟರ್‌ಗಳ ಬಳಕೆಯ ವಿರುದ್ಧ ಡಬಲ್ಯುಎಚ್‌ಓ ಎಚ್ಚರಿಕೆ:
2019ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬಲ್ಯುಎಚ್‌ಓ) (World Health Organization) ,ಆರ್‌ಓ ಯಂತ್ರಗಳು ನೀರನ್ನು ಶುದ್ಧೀಕರಿಸುವಲ್ಲಿ ಬಹಳ ಪರಿಣಾಮಕಾರಿ. ಆದರೆ, ಅವು ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅನ್ನು ತೆಗೆದುಹಾಕುತ್ತವೆ. ಇವು ನಮ್ಮ ದೇಹದಲ್ಲಿ ಶಕ್ತಿ-ಉತ್ಪಾದಿಸುವ ಅಂಶಗಳಾಗಿವೆ. ಆದ್ದರಿಂದ, ಆರ್‌ಒ ಫಿಲ್ಟರ್‌ಗಳಿಂದ ಉತ್ಪತ್ತಿಯಾಗುವ ಅಗತ್ಯ ಅಂಶಗಳಿಲ್ಲದೆ ಆಮ್ಲೀಯ ನೀರನ್ನು ದೀರ್ಘಕಾಲದವರೆಗೆ ಸೇವಿಸುವುದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ಆರ್‌ಓ ಫಿಲ್ಟರ್‌ಗಳ ಬಳಕೆಯ ವಿರುದ್ಧ ಎಚ್ಚರಿಕೆಯನ್ನು ನೀಡಿದೆ. ವಾಸ್ತವವಾಗಿ, ಡಬಲ್ಯುಎಚ್‌ಓ ಪ್ರತಿ ಲೀಟರ್ ನೀರಿಗೆ 30 mg ಕ್ಯಾಲ್ಸಿಯಂ, 30 mg ಬೈಕಾರ್ಬನೇಟ್ ಮತ್ತು 20 mg ಮೆಗ್ನೀಸಿಯಮ್ ಅನ್ನು ಶಿಫಾರಸು ಮಾಡುತ್ತದೆ.
ನಿರಂತರವಾಗಿ ಆರ್‌ಓ ವಾಟರ್ ಬಳಕೆಯಿಂದ ಉಂಟಾಗಬಹುದಾದ ಸಮಸ್ಯೆಗಳು?
ಆರ್‌ಓ ವಾಟರ್ ಸೇವನೆಯಿಂದ ಮಾನವನ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮಗಳು ಎಂಬ ಶೀರ್ಷಿಕೆಯ ಅಧ್ಯಯನವು, ಆರ್‌ಓ ವಾಟರ್ ಬಳಕೆಯೂ ದೀರ್ಘಾವಧಿಯಲ್ಲಿ ಆಸ್ಟಿಯೊಪೊರೋಸಿಸ್, ಸಂಧಿವಾತ, ಖಿನ್ನತೆ, ಮನಸ್ಥಿತಿ ಬದಲಾವಣೆಗಳು, ಕಿರಿಕಿರಿ, ಮೂಳೆ ನಷ್ಟ ಮತ್ತು ಕೂದಲು ಉದುರುವಿಕೆಗೆ ಕಾರಣವಾಗಬಹುದು ಎಂದು ಉಲ್ಲೇಖಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.