Coffee Benefits: ಪ್ರತಿದಿನ 2 ಕಪ್ ಕಾಫಿ ಕುಡಿಯುವುದರಿಂದ ಹೃದಯ ವೈಫಲ್ಯದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧನೆ ತೋರಿಸುತ್ತದೆ. ಹೀಗಾಗಿ, ಕಾಫಿ ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಬ್ರಿಟನ್‌ ಕ್ವೀನ್ ಮೇರಿ ಯೂನಿವರ್ಸಿಟಿ ಆಫ್ ಲಂಡನ್‌ ಸಂಶೋಧಕರು 8,000 ಕ್ಕೂ ಹೆಚ್ಚು ಜನರ ಮೇಲೆ ನಡೆಸಿದ ಸಂಶೋಧನೆಯಲ್ಲಿ ಕಾಫಿ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಕಂಡುಹಿಡಿದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಖ್ಯಾತ ನಟಿಯ ಮನೆಯಲ್ಲಿ ನಾಯಿಗೆ ಹಾಕೋ ಚಿಕನ್ ತಿಂದ ಆಂಕರ್ ಅನುಶ್ರೀ! ಸಿಕ್ಕಿಬಿದ್ದಿದ್ದು ಹೇಗೆ?


ಸಾಮಾನ್ಯವಾಗಿ, ಜನರು ಕಾಫಿಯ ಬಗ್ಗೆ ವಿಭಿನ್ನ ಗ್ರಹಿಕೆಗಳನ್ನು ಹೊಂದಿದ್ದಾರೆ. ಕೆಲವರು ತುಂಬಾ ಒಳ್ಳೆಯದು ಎಂದರೆ, ಇನ್ನೂ ಕೆಲವರೂ ಅಪಾಯ ಎಂದು ಪರಿಗಣಿಸುತ್ತಾರೆ.  


3 ರಿಂದ 5 ಕಪ್ ಕಾಫಿ ಕುಡಿಯುವುದರಿಂದ ಹೃದ್ರೋಗದ ಅಪಾಯವು 15% ರಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ತೋರಿಸುತ್ತವೆ. ಅಂದರೆ ಕಾಫಿ ಕುಡಿಯುವುದು ನಿಮ್ಮ ಹೃದಯಕ್ಕೆ ಪ್ರಯೋಜನಕಾರಿ. ದಿನಕ್ಕೆ 25 ಕಪ್ ಕಾಫಿ ಕುಡಿದರೂ ಅಪಧಮನಿಗಳು ಗಟ್ಟಿಯಾಗುವುದಿಲ್ಲ ಎಂದು ಕೆಲವು ಸಂಶೋಧನೆಗಳು ಕಂಡುಕೊಂಡಿವೆ. ಕಾಫಿ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಮಾನ್ಯವಾಗಿ ಜನರು ನಂಬುತ್ತಾರೆ. ಆದರೆ ಈ ಸಂಶೋಧನೆಯು ಆ ಗ್ರಹಿಕೆಗಳು ತಪ್ಪು ಎಂದು ಸಾಬೀತುಪಡಿಸಿದೆ.


ಬೊಜ್ಜು ಕಡಿಮೆ ಮಾಡಲು ಸಹಾಯ!


ಕಾಫಿ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳು ತೋರಿಸುತ್ತವೆ. ಒಂದು ಕಪ್ ಕಾಫಿ ಕೂಡ ನಿಮ್ಮ ಮೆದುಳಿನ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ. ಆಲ್ಝೈಮರ್ನಂತಹ ಕಾಯಿಲೆಗಳಿಗೆ ಸಂಬಂಧಿಸಿದ ಹಾನಿಕಾರಕ ಪ್ರೋಟೀನ್ಗಳನ್ನು ತಡೆಗಟ್ಟಲು ಇದು ಕಾರ್ಯನಿರ್ವಹಿಸುತ್ತದೆ.


ಕಾಫಿ ಯಕೃತ್ತಿಗೂ ಸಹಾಯ ಮಾಡುತ್ತದೆ. ಯಕೃತ್ತಿನ ಕಾಯಿಲೆಗಳಾದ ಸಿರೋಸಿಸ್ ಮತ್ತು ಫೈಬ್ರೋಸಿಸ್ ಅನ್ನು ತಡೆಯಲು ಕಾಫಿ ಉತ್ತಮ. ಆದ್ದರಿಂದ ಮುಂದಿನ ಬಾರಿ ನೀವು ಒಂದು ಕಪ್ ಕಾಫಿಯನ್ನು ತೆಗೆದುಕೊಂಡರೆ, ಅದು ರುಚಿಕರ ಮಾತ್ರವಲ್ಲದೆ ನಿಮ್ಮ ದೇಹಕ್ಕೆ ಪ್ರಯೋಜನಕಾರಿಯಾಗಿದೆ ಎಂಬುದನ್ನು ನೆನಪಿಡಿ.


ಇದನ್ನೂ ಓದಿ:  16 ರನ್’ಗೆ ಇಡೀ ತಂಡ ಆಲೌಟ್! ಕ್ರಿಕೆಟ್ ಚರಿತ್ರೆಯಲ್ಲೇ ಕಳಪೆ ದಾಖಲೆ ಸೃಷ್ಟಿ


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ