ಖಾಲಿ ಹೊಟ್ಟೆಯಲ್ಲಿ ʼಸೇಬು ಹಣ್ಣುʼ ತಿನ್ನಬಹುದಾ..!? ಈ ಅಭ್ಯಾಸ ಒಳ್ಳೆಯದೋ.. ಕೆಟ್ಟದ್ದೋ..
Apple health benefits : ʼದಿನಕ್ಕೆ ಒಂದು ಸೇಬು ವೈದ್ಯರನ್ನು ದೂರವಿಡುತ್ತದೆʼ ಅಂತ ನಮ್ಮ ಹಿರಿಯರು ಹೇಳುತ್ತಿದ್ದ ಮಾತು ನಿಮಗೆ ನೆನಪಿದೆಯೇ..? ಹೌದು.. ಈ ಮಾತು ಸತ್ಯ, ಆದ್ರೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕಾ.. ಅಥವಾ ಊಟ ಮಾಡಿದ ಮೇಲೆ ತಿನ್ನಬೇಕಾ ಎನ್ನವುದು ಹಲವರ ತಲೆಯಲ್ಲಿರುವ ಪ್ರಶ್ನೆ.. ಬನ್ನಿ ಈ ಕುರಿತು ತಿಳಿದುಕೊಳ್ಳೋಣ..
How to eat Apple : ಸೇಬು ಹಣ್ಣು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ತುಂಬಾ ರುಚಿಕರವಾಗಿರುವ ಈ ಹಣ್ಣು ಕರುಳಿನ ಆರೋಗ್ಯ ಮತ್ತು ಪಾರ್ಶ್ವವಾಯು, ಅಧಿಕ ರಕ್ತದೊತ್ತಡ, ಮಧುಮೇಹ, ಹೃದ್ರೋಗ, ಸ್ಥೂಲಕಾಯತೆ ಮತ್ತು ಕೆಲವು ಬಗೆಯ ಕ್ಯಾನ್ಸರ್ ಸೇರಿದಂತೆ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ.
ಸೇಬು ಹಣ್ಣಿನಲ್ಲಿ ನಾರಿನಾಂಶ ಮತ್ತು ಪೆಕ್ಟಿನ್ ಸಮೃದ್ಧವಾಗಿದೆ. ಅಲ್ಲದೆ, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಪೊಟಾಶಿಯಂ ಇದೆ. ಇದು ಆಂಟಿಆಕ್ಸಿಡೆಂಟ್ ಹೊಂದಿರುವ ಅಗ್ರ 12 ಆಹಾರಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಅಲ್ಲದೆ, ಸೇಬ ಹಣ್ಣನ್ನು ಸಿಪ್ಪೆ ಸಹಿತ ತಿಂದರೆ ಹೆಚ್ಚಿನ ಲಾಭಗಳು ದೇಹಕ್ಕೆ ಲಭ್ಯವಾಗುತ್ತವೆ ಅಂತ ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ಕೇವಲ ಎರಡು ಚಿಟಿಕೆ ಏಲಕ್ಕಿ ಪುಡಿಯಿಂದ BP ಕಂಟ್ರೋಲ್ ಮಾಡಬಹುದು..! ಹೇಗೆ ಗೊತ್ತೆ
ಪ್ರತಿದಿನ ಸೇಬು ತಿನ್ನುವುದರಿಂದ ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ಬಿಪಿಯನ್ನು ಕಡಿಮೆಯಾಗುತ್ತದೆ. ಜೀರ್ಣಕ್ರಿಯೆ ಉತ್ತಮವಾಗಿ ನಡೆಯುತ್ತದೆ. ನೀವು ಟೈಪ್ 2 ಡಯಾಬಿಟಿಸ್ ಹೊಂದಿದ್ದರೆ ಸೇಬು ತಿನ್ನುವುದು ಉತ್ತಮ. ಅಲ್ಲದೆ, ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸೇಬುಗಳು ಸಹಾಯ ಮಾಡಬಹುದು.
ಖಾಲಿ ಹೊಟ್ಟೆಯಲ್ಲಿ ಮತ್ತು ಊಟದ ನಂತರ ಸೇಬು ತಿನ್ನುವ ಬಗ್ಗೆ ವಿಭಿನ್ನ ಅಭಿಪ್ರಾಯಗಳು ಇವೆ. ಊಟದೊಂದಿಗೆ ಅಥವಾ ಊಟದ ನಂತರ ಸೇಬು ತಿಂದರೆ ಜೀರ್ಣಕ್ರಿಯೆ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಆಹಾರವು ಹೊಟ್ಟೆಯಲ್ಲಿ ದೀರ್ಘಕಾಲ ಉಳಿಯುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಗ್ಯಾಸ್ ಉತ್ಪತ್ತಿ ಆಗಿ ಹೊಟ್ಟೆ ನೋವು ಸಹ ಕಾಣಿಸಿಕೊಳ್ಳಬಹುದು.
ಇದನ್ನೂ ಓದಿ:ಯುವತಿಯರೇ ಎಚ್ಚರ..! ಈ 3 ರೀತಿಯ ಕ್ಯಾನ್ಸರ್ ವಕ್ಕರಿಸಬಹುದು..
ಇನ್ನು ಕೆಲವರು ಈ ವಿಚಾರವನ್ನು ಅಲ್ಲಗಳೆಯುತ್ತಾರೆ. ತಿಂಡಿಯ ಸಮಯದಲ್ಲಿ ಹಣ್ಣನ್ನು ಸೇವಿಸಬಹುದು ಅಂತ ಸಲಹೆ ನೀಡುತ್ತಾರೆ. ಇನ್ನೊಂದು ಮುಖ್ಯವಾದ ಮಾಹಿತಿ ಅಂದ್ರೆ ಖಾಲಿ ಹೊಟ್ಟೆಯಲ್ಲಿ ಸೇಬು ತಿಂದರೆ, ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ ಅಂತ ಹೇಳಲಾಗುತ್ತದೆ. ಆದ್ರೆ ಈ ಕುರಿತು ಸ್ಪಷ್ಟವಾದ ಮಾಹಿತಿ ಇಲ್ಲ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.