Cotton buds side effects : ಕಿವಿಯನ್ನು ಸ್ವಚ್ಛಗೊಳಿಸಲು ನಾವು ಬಳಸುವ ಹತ್ತಿ ಬಡ್ಸ್‌ ಶ್ರವಣ ದೋಷಕ್ಕೆ ಕಾರಣವಾಗುತ್ತವೆ ಎಂದು ಸಂಶೋಧಕರು ಹೇಳುತ್ತಾರೆ. ಕಾಟನ್‌ ಬಡ್ಸ್‌ ಬಳಸುವುದನ್ನು ತಪ್ಪಿಸಿ. ಏಕೆಂದರೆ, ಅವು ತಾತ್ಕಾಲಿಕ ಪರಿಹಾರವನ್ನು ಮಾತ್ರ ನೀಡುತ್ತವೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಇದನ್ನು ಬಳಸುತ್ತಾರೆ, ಇದು ನಾನಾ ಸಮಸ್ಯೆಗಳು ತರಬಹುದು ಎನ್ನುವುದನ್ನು ಮರೆಯಬಾರದು..


COMMERCIAL BREAK
SCROLL TO CONTINUE READING

ಸ್ನಾನ ಮುಗಿಸಿ ಹೊರಬಂದ ತಕ್ಷಣ ಕಿವಿಗೆ ಹಾಕಿಕೊಳ್ಳಲು ಬಡ್ಸ್‌ ಹುಡುಕುತ್ತೇವೆ. ಸ್ನಾನ ಮಾಡುವಾಗ ನೀರು ಒಳಗೆ ಹೋದ ಕಾರಣ ಅದನ್ನು ಸ್ವಚ್ಛಗೊಳಿಸಲು ಕಿವಿಯಲ್ಲಿ ಹತ್ತಿ ಬಡ್ಸ್‌ ಬಳಸುತ್ತೇವೆ. ನಮ್ಮ ಕಿವಿಗಳು ಸ್ವಾಭಾವಿಕವಾಗಿ ಶುಚಿಯಾಗುವುದರಿಂದ ಇಂತಹ ವಸ್ತುಗಳನ್ನು ಬಳಸುವುದನ್ನು ತಪ್ಪಿಸುವಂತೆ ವೈದ್ಯರು ಹೇಳಿದರೂ ನಾವು ಕೇಳುವುದಿಲ್ಲ.  


ಇದನ್ನೂ ಓದಿ:ಈ ಎಲೆಯನ್ನು ಜಗಿದು ರಸವನ್ನಷ್ಟೇ ಸೇವಿಸಿ! ಕಿಡ್ನಿ ಸ್ಟೋನ್ ಆಗಿದ್ದರೆ ಸುಲಭವಾಗಿ ಕರಗಿ ಹೋಗುತ್ತೆ


ಕಿವಿನೋವು, ಊತ, ಶ್ರವಣ ದೋಷ ಮುಂತಾದ ಹಲವಾರು ಸಮಸ್ಯೆಗಳಿಂದ ತಾತ್ಕಾಲಿಕ ಉಪಶಮನ ನೀಡಲು ಹತ್ತಿ ಬಡ್ಸ್ ಬಳಸುತ್ತಿದ್ದೇವೆ. ಈ ಬಡ್ಸ್‌ನಲ್ಲಿ ಬ್ಯಾಕ್ಟೀರಿಯಾಗಳು ಅಧಿಕವಾಗಿದ್ದು, ಇದು ಕಿವಿಯ ಸೋಂಕಿಗೆ ಕಾರಣವಾಗಬಹುದು. ಕಿವಿಯೊಳಗೆ ಹತ್ತಿ ಬಡ್ಸ್‌ ಹಾಕಿಕೊಳ್ಳುವುದರಿಂದ ಕೆಲವೊಂದು ಸಾರಿ ತುದಿಗೆ ಸುದ್ದಿ ಹತ್ತಿ ಸರಿದು ಚರ್ಮಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ, ಊತ, ನೋವು ಮತ್ತು ರಕ್ತಸ್ರಾವಕ್ಕೆ ಕಾರಣವಾಗಬಹುದು ಎಂದು ಕಿವಿ ವೈದ್ಯರು ಹೇಳುತ್ತಾರೆ. ಅಂತಹ ಸಮಸ್ಯೆಗಳ ಸಂದರ್ಭದಲ್ಲಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.