ಡಯಾಬಿಟಿಸ್ ರೋಗಿಗಳು ಬೆಲ್ಲ ತಿನ್ನಬಹುದೇ? ಸಕ್ಕರೆ ಬದಲಿಗೆ ಬೆಲ್ಲ ಬಳಕೆ ಬಗ್ಗೆ ತಜ್ಞರು ಹೇಳುವುದೇನು ?
ಸಕ್ಕರೆ ಬದಲಿಗೆ ಬೆಲ್ಲ ಸೇವಿಸುವುದು ಎಷ್ಟು ಸರಿ ? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ನೀವು ಕೂಡಾ ಮಧುಮೇಹಿಗಳಾಗಿದ್ದು, ಸಕ್ಕರೆಯ ಬದಲು ಬೆಲ್ಲವನ್ನು ಸೇವಿಸುತ್ತೀರಾ? ಹಾಗಿದ್ದರೆ ಈ ವಿಷಯವನ್ನು ತಿಳಿದುಕೊಳ್ಳುವುದು ಸೂಕ್ತ.
ಬೆಂಗಳೂರು : ಮಧುಮೇಹ ಎನ್ನುವುದು ಪುಟ್ಟ ಮಕ್ಕಳನ್ನು ಕೂಡಾ ಕಾಡುವ ಕಾಯಿಲೆಯಾಗಿದೆ. ಮಧುಮೇಹದ ಸಮಸ್ಯೆ ಇದ್ದವರು ತಮ್ಮ ಊಟ ತಿಂಡಿಯ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕಾಗುತ್ತದೆ. ಕೈಗೆ ಸಿಕ್ಕ ಸಿಕ್ಕ ಪದಾರ್ಥಗಳನ್ನು ತಿನ್ನುತ್ತಾ ಹೋದರೆ ಮಧುಮೇಹದ ಜೊತೆಗೆ ಅನೇಕ ಕಾಯಿಲೆಗಳು ಉಚಿತವಾಗಿ ಬಂದು ಬಿಡುತ್ತವೆ.ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕವಿರುವ ಆಹಾರವನ್ನು ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
ಸಾಮಾನ್ಯವಾಗಿ ಮಧುಮೇಹ ರೋಗಿಗಳು ಸಕ್ಕರೆ ಸೇವಿಸಬಾರದು ಎಂದು ಹೇಳಲಾಗುತ್ತದೆ. ಹಾಗಾಗಿ ಸಿಹಿಯಿಂದ ಮಧುಮೇಹಿಗಳು ದೂರವೇ ಉಳಿಯುತ್ತಾರೆ. ಇದು ಸರಿಯಾದ ಕ್ರಮ ಕೂಡಾ. ಆದರೆ ಸಕ್ಕರೆ ಬದಲು ಬೆಲ್ಲ ಸೇವಿಸಬಹುದು ಎನ್ನುವ ವಾದ ಅನೇಕರಲ್ಲಿದೆ. ಹಾಗಾಗಿ ಸಕ್ಕರೆ ಬದಲಿಗೆ ಬೆಲ್ಲ ಸೇವಿಸುವುದು ಎಷ್ಟು ಸರಿ ? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ನೀವು ಕೂಡಾ ಮಧುಮೇಹಿಗಳಾಗಿದ್ದು, ಸಕ್ಕರೆಯ ಬದಲು ಬೆಲ್ಲವನ್ನು ಸೇವಿಸುತ್ತೀರಾ? ಹಾಗಿದ್ದರೆ ಈ ವಿಷಯವನ್ನು ತಿಳಿದುಕೊಳ್ಳುವುದು ಸೂಕ್ತ.
ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ಈ 2 ಬೀಜಗಳನ್ನು ಜಗಿದು ತಿಂದ್ರೆ ಹೈ ಶುಗರ್ ಕೂಡ ಕೆಲ ಹೊತ್ತಲ್ಲೇ ಕಂಟ್ರೋಲ್ ಆಗುತ್ತೆ!
ಬೆಲ್ಲವು ಹಾನಿಕಾರಕವಾಗಬಹುದು :
ಆಯುರ್ವೇದದ ಪ್ರಕಾರ ಮಧುಮೇಹ ರೋಗಿಗಳು ಬೆಲ್ಲವನ್ನು ತಿನ್ನಬಾರದು. ಶ್ವಾಸಕೋಶದ ಸೋಂಕು, ಗಂಟಲು ನೋವು, ಮೈಗ್ರೇನ್ ಮತ್ತು ಅಸ್ತಮಾ ಸಮಸ್ಯೆಯಲ್ಲಿ ಬೆಲ್ಲದ ಸೇವನೆ ಪ್ರಯೋಜನಕಾರಿಯಾಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಮಧುಮೇಹದ ಸಮಸ್ಯೆಯಲ್ಲಿ ಬೆಲ್ಲ ಸೇವನೆ ಸರಿಯಲ್ಲ. ಬೆಲ್ಲದಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಸತು, ಮೆಗ್ನೀಸಿಯಮ್, ಪೊಟ್ಯಾಸಿಯಮ್, ತಾಮ್ರ ಮತ್ತು ರಂಜಕದಂತಹ ಅನೇಕ ಪೋಷಕಾಂಶಗಳಿವೆ.ಆದರೆ ಇದು ಮಧುಮೇಹ ರೋಗಿಗಳಿಗೆ ಸೂಕ್ತವಲ್ಲ.
ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕ :
ಬೆಲ್ಲದಲ್ಲಿ ಶೇಕಡಾ 65 ರಿಂದ 85 ರಷ್ಟು ಸುಕ್ರೋಸ್ ಇರುತ್ತದೆ. ಮಧುಮೇಹ ರೋಗಿಗಳಿಗೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವ ಆಹಾರವನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. ಆದರೆ ಬೆಲ್ಲದ ಗ್ಲೈಸೆಮಿಕ್ ಇಂಡೆಕ್ಸ್ ತುಂಬಾ ಹೆಚ್ಚಾಗಿರುತ್ತದೆ. ಹಾಗಾಗಿ ಇದರ ಸೇವನೆಯು ಮಧುಮೇಹ ರೋಗಿಗಳಿಗೂ ಅಪಾಯಕಾರಿ.
ಬೆಲ್ಲದ ಬದಲಿಗೆ ಜೇನುತುಪ್ಪ:
ಆರೋಗ್ಯ ತಜ್ಞರ ಪ್ರಕಾರ, ಮಧುಮೇಹ ರೋಗಿಗಳು ಸಕ್ಕರೆ, ಬೆಲ್ಲ ಎರಡನ್ನೂ ಸೇವಿಸುವಂತಿಲ್ಲ.ಸಕ್ಕರೆ ಮತ್ತು ಬೆಲ್ಲದ ಬದಲು ಸಾವಯವ ಜೇನುತುಪ್ಪವನ್ನು ಸೇವಿಸಬಹುದು. ಆದರೆ ಇದು ತಪ್ಪು ತಿಳುವಳಿಕೆ. ಒಂದು ವೇಳೆ ನಿಮಗೆ ಮಧುಮೇಹವಿಲ್ಲದಿದ್ದರೆ, ಸಕ್ಕರೆ ಬದಲು ಬೆಲ್ಲ ತಿನ್ನಬಹುದು. ಮಧುಮೇಹವಿದ್ದಾಗ ಮಾತ್ರ ಸಕ್ಕರೆಯಂತೆ ಬೆಲ್ಲದಿಂದಲೂ ದೂರವಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.