Home Remedies For Burnt Tongue: ಕೆಲವೊಮ್ಮೆ ಆತುರಾತುರವಾಗಿ ಬಿಸಿಯಿರುವ ಆಹಾರವನ್ನು ಸೇವಿಸುವಾಗ ನಾಲಿಗೆ ಸುಡುತ್ತದೆ. ಹೀಗಾದಾಗ ನಾಲಿಗೆ ಸುಟ್ಟುಹೋಗುವುದು ಮಾತ್ರವಲ್ಲದೆ ಬಾಯಿಯ ರುಚಿಯೂ ಹಾಳಾಗುತ್ತದೆ. ಈ ಸಂದರ್ಭದಲ್ಲಿ ನಾಲಿಗೆ ಹೆಚ್ಚಾಗಿ ಉರಿಯುತ್ತದೆ, ಏನನ್ನೂ ತಿನ್ನಲು ಸಹ ಸಾಧ್ಯವಾಗುವುದಿಲ್ಲ. ಆದರೆ, ನಿಮ್ಮ ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಬಳಸಿ ಈ ಸಮಸ್ಯೆಯಿಂದ ಬಹಳ ಸುಲಭವಾಗಿ ಪರಿಹಾರ ಪಡೆಯಬಹುದು. 


COMMERCIAL BREAK
SCROLL TO CONTINUE READING

ನಾಲಿಗೆ ಸುಟ್ಟಿದ್ದರೆ ತ್ವರಿತ ಪರಿಹಾರಕ್ಕಾಗಿ ಮನೆಮದ್ದುಗಳು: 
ಜೇನುತುಪ್ಪ

ಒಂದೊಮ್ಮೆ ನಾಲಿಗೆ ಸುಟ್ಟಿದ್ದರೆ  ತ್ವರಿತ ಪರಿಹಾರಕ್ಕಾಗಿ ಜೇನುತುಪ್ಪ (Honey) ಅತ್ಯುತ್ತಮ ಪರಿಹಾರವಾಗಿದೆ. ಆಯುರ್ವೇದ ಗುಣಗಳಿಂದ ಸಮೃದ್ಧವಾಗಿರುವ ಜೇನುತುಪ್ಪವನ್ನು ನಾಲಿಗೆಗೆ ಅನ್ವಯಿಸುವುದರಿಂದ ನಾಲಿಗೆ ಉರಿಯಿಂದ ಪರಿಹಾರ ದೊರೆಯುತ್ತದೆ.


ಇದನ್ನೂ ಓದಿ- ನಿಮಗೂ ಆಗಾಗ್ಗೆ ಕಣ್ಣು ಕೆಂಪಾಗುತ್ತಾ! ಈ ಮನೆಮದ್ದುಗಳನ್ನೊಮ್ಮೆ ಪ್ರಯತ್ನಿಸಿ


ಮೊಸರು: 
ಹಾಲಿನ ಉತ್ಪನ್ನಗಳು (Dairy Products) ನಾಲಿಗೆ ಸುಡುವಿಕೆಗೆ ಅತ್ಯುತ್ತಮ ಮತ್ತು ನೈಸರ್ಗಿಕ ಪರಿಹಾರವಾಗಿದೆ. ನಾಲಿಗೆ ಸುಟ್ಟಿದ್ದರೆ ತಕ್ಷಣ ಮೊಸರನ್ನು ಬಾಯಿಗೆ ಹಾಕಿ ಕೊಳ್ಳುವುದರಿಂದ ಕೂಡಲೇ ಪರಿಹಾರ ಪಡೆಯಬಹುದು. 


ಪುದೀನಾ ಚೂಯಿಂಗ್ ಗಮ್: 
ಬಿಸಿ ಆಹಾರ ಸೇವಿಸುವಾಗ ನಾಲಿಗೆ ಸುಟ್ಟಿದ್ದರೆ (Burnt Tongue) ಪುದೀನಾ ಚೂಯಿಂಗ್ ಗಮ್ ಕೂಡ ಅತ್ಯುತ್ತಮ ಮದ್ದು. ಚೂಯಿಂಗ್ ಗಮ್ ಜಗಿಯುವಾಗ ಬಾಯಿಯಲ್ಲಿ ಹೆಚ್ಚು ಲಾಲಾರಸ ಉತ್ಪತ್ತಿಯಾಗುತ್ತದೆ. ಇದರಿಂದ ನಾಲಿಗೆ ತೇವವಾಗಿರುವುದರಿಂದ ನಿಧಾನವಾಗಿ ನಾಲಿಗೆಯಲ್ಲಿ ಸುಡುವ ಸಂವೇದನೆ ಕಡಿಮೆಯಾಗುತ್ತದೆ. 


ಇದನ್ನೂ ಓದಿ- 


ಐಸ್ ಕ್ರೀಂ: 
ಬಿಸಿ ಆಹಾರ, ಇಲ್ಲವೇ ಪಾನೀಯಗಳಿಂದ ನಾಲಿಗೆ ಸುಟ್ಟಿದ್ದರೆ ಕೂಡಲೇ ಐಸ್ ಕ್ರೀಂ ಸೇವಿಸಿ. ಇದು ನಾಲಿಗೆಯಲ್ಲಿ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.