ಬೆಂಗಳೂರು : ಬೆಲ್ಲ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ.ಬೆಲ್ಲ ಸ್ವಭಾವದಲ್ಲಿ ಬಿಸಿಯಾಗಿರುತ್ತದೆ.ಇದರಿಂದಾಗಿ ಶೀತ ಮತ್ತು ಕೆಮ್ಮಿನ ಸಮಸ್ಯೆಗಳನ್ನು ನಿವಾರಿಸಬಹುದು.ಬೆಲ್ಲದಿಂದ ತಯಾರಿಸಿದ ಕಷಾಯವನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಅನೇಕ ಅನುಕೂಲಕರವಾಗಿದೆ. 


COMMERCIAL BREAK
SCROLL TO CONTINUE READING

ರಕ್ತಹೀನತೆಯ ಸಮಸ್ಯೆ ನಿವಾರಣೆ :
ರಕ್ತಹೀನತೆಯ ಸಮಸ್ಯೆಯನ್ನು ಹೋಗಲಾಡಿಸಲು,ಬೆಲ್ಲದ ಕಷಾಯವನ್ನು ಕುಡಿಯಬಹುದು.ಬೆಲ್ಲವು ಉತ್ತಮ ಪ್ರಮಾಣದ ಕಬ್ಬಿಣವನ್ನು ಹೊಂದಿರುತ್ತದೆ.ಇದು ರಕ್ತಹೀನತೆಯನ್ನು ನಿಭಾಯಿಸಲು ಸಹಾಯ ಮಾಡುತ್ತದೆ.ಇದಲ್ಲದೆ,ಇದು ರಕ್ತವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.  


ಇದನ್ನೂ ಓದಿ : Home Remedies: ಮಧುಮೇಹ ನಿಯಂತ್ರಣಕ್ಕೆ ಬೇವಿನ ಸೊಪ್ಪಿನ ರಸದ ಜೊತೆ ಈ ಪದಾರ್ಥ ಬಳಸಿ, ಆಗ ಈ ಚಮತ್ಕಾರ ನೋಡಿ..!


ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ : 
ದೇಹದ ಶಕ್ತಿಯನ್ನು ಹೆಚ್ಚಿಸಲು ಬೆಲ್ಲದ ಕಷಾಯವನ್ನು ಕುಡಿಯಬಹುದು.ಇದು ನಿಮ್ಮ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸಬಹುದು.ಇದರಿಂದ ದೇಹದ ಎನರ್ಜಿಯನ್ನು  ಹೆಚ್ಚಿಸಬಹುದು.ಇದು ದೇಹದಲ್ಲಿನ ಆಯಾಸವನ್ನು ಕಡಿಮೆ ಮಾಡುವ ಮೂಲಕ ಶಕ್ತಿಯನ್ನು ಹೆಚ್ಚಿಸುತ್ತದೆ.  


ದೇಹದ ತೂಕವನ್ನು ಕಡಿಮೆ ಮಾಡುತ್ತದೆ : 
ಬೆಲ್ಲ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ.ಇದು ಚಯಾಪಚಯವನ್ನು ಹೆಚ್ಚಿಸುತ್ತದೆ.  ಇದರಿಂದಾಗಿ ದೇಹದ ಹೆಚ್ಚುವರಿ ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು.ನೀವು ತೂಕ ಇಳಿಸಿಕೊಳ್ಳುವುದಾದರೆ ಬೆಲ್ಲದಿಂದ ತಯಾರಿಸಿದ ಚಹಾವನ್ನು ಸೇವಿಸಬಹುದು.


ಮೂಳೆಗಳನ್ನು ಸದೃಢಗೊಳಿಸಬಹುದು :   
ಬೆಲ್ಲದಿಂದ ತಯಾರಿಸಿದ ಕಷಾಯವನ್ನು ಕುಡಿಯುವುದರಿಂದ ಮೂಳೆಗಳನ್ನು ಸದೃಢಗೊಳಿಸಬಹುದು.ಬೆಲ್ಲದಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಹೊಂದಿರುತ್ತದೆ.  ಇದು ಮೂಳೆಗಳ ಬಲವನ್ನು ಸುಧಾರಿಸುತ್ತದೆ.


ಇದನ್ನೂ ಓದಿ : ಈ ಕೆಂಪು ಹಣ್ಣು ಸೇವಿಸಿದರೆ ಸಾಕು ಬ್ಲಡ್ ಶುಗರ್ ಅನ್ನು ಶಾಶ್ವತವಾಗಿ ನಾರ್ಮಲ್ ಆಗುವುದು ! ದಿನಕ್ಕೊಂದು ತಿಂದು ನೋಡಿ !


ಶೀತ ಮತ್ತು ಕೆಮ್ಮಿನಿಂದನಿವಾರಣೆ :
ಬದಲಾಗುತ್ತಿರುವ ಋತುವಿನಲ್ಲಿ ಶೀತ ಮತ್ತು ಕೆಮ್ಮಿನಿಂದ ಬಳಲುವುದು ಸಾಮಾನ್ಯವಾಗಿದೆ.ಈ ಸಮಸ್ಯೆಯನ್ನು ಕಡಿಮೆ ಮಾಡಲು ಬೆಲ್ಲದಿಂದ ತಯಾರಿಸಿದ ಕಷಾಯವನ್ನು ಸೇವಿಸಬಹುದು.ಕೆಮ್ಮಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.


ಬೆಲ್ಲದ ಕಷಾಯ ಮಾಡುವುದು ಹೇಗೆ ? : 
ಮೊದಲು ಬಾಣಲೆಯಲ್ಲಿ 2 ಕಪ್ ನೀರು ಹಾಕಿ 4 ರಿಂದ 5 ತುಳಸಿ ಎಲೆಗಳು, 1 ಇಂಚು ತುಂಡು ಶುಂಠಿ ಮತ್ತು ಕರಿಮೆಣಸು ಹಾಕಿ ಚೆನ್ನಾಗಿ ಕುದಿಸಿ.ನೀರಿನ ಬಣ್ಣ ಬದಲಾಗುತ್ತಿದ್ದ ಹಾಗೆ ಬೆಲ್ಲವನ್ನು ಸೇರಿಸಿ ಕುದಿಸಿ. ನಂತರ, ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ.ಇದು ಅನೇಕ ಸಮಸ್ಯೆಗಳನ್ನು ಪರಿಹರಿಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.