ನೀರಿಗೆ ಈ ಪುಟ್ಟ ಬೀಜಗಳನ್ನು ಹಾಕಿ ಕುಡಿದರೆ ಮುಂದಕ್ಕೆ ಚಾಚಿಕೊಂಡಿರುವ ಹೊಟ್ಟೆ ಒಳಗೆ ಹೋಗುವುದು !ಅದು ಕೂಡಾ ಏಳೇ ದಿನಗಳಲ್ಲಿ
Belly Fat Reduction Home Remedy:ತಜ್ಞರ ಪ್ರಕಾರ ಹೊಟ್ಟೆ ಮತ್ತು ಸೊಂಟ ಅಥವಾ ಹೊಟ್ಟೆಯ ಸುತ್ತ ಸಂಗ್ರಹವಾದ ಕೊಬ್ಬು ವ್ಯಕ್ತಿಯ ಜೀವನವನ್ನು 5 ವರ್ಷಗಳವರೆಗೆ ಕಡಿಮೆ ಮಾಡುತ್ತದೆ.
Belly Fat Reduction Home Remedy : ದಪ್ಪಗಾಗುವುದು ಇತ್ತೀಚಿಗೆ ಬಹಳಷ್ಟು ಮಂದಿ ಎದುರಿಸುತ್ತಿರುವ ಸಮಸ್ಯೆ. ಕೆಲವರು ದಪ್ಪಗಾದ ಕೂಡಲೇ ಅವರ ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿಯೇ ಬೊಜ್ಜು ಸೇರಿಕೊಳ್ಳಲು ಆರಂಭವಾಗುತ್ತದೆ. ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಹೇಳುವಷ್ಟು ಸುಲಭವಲ್ಲ.ಈ ಭಾಗದಲ್ಲಿ ಬೊಜ್ಜು ಸೇರಿಕೊಂಡ ತಕ್ಷಣ ದೇಹದ ಸೌಂದರ್ಯ ಹಾಳಾಗಿ ಬಿಡುತ್ತದೆ. ಯಾವ ರೀತಿಯ ಬಟ್ಟೆ ತೊಡಬೇಕಾದರೂ ಯೋಚನೆ ಮಾಡಬೇಕಾಗುತ್ತದೆ. ಅಲ್ಲದೆ, ಇದು ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಹೃದಯಾಘಾತ ಮತ್ತು ಅಕಾಲಿಕ ಮರಣದ ಅಪಾಯವನ್ನು ಕೂಡಾ ಹೆಚ್ಚಿಸುತ್ತದೆ.ತಜ್ಞರ ಪ್ರಕಾರ ಹೊಟ್ಟೆ ಮತ್ತು ಸೊಂಟ ಅಥವಾ ಹೊಟ್ಟೆಯ ಸುತ್ತ ಸಂಗ್ರಹವಾದ ಕೊಬ್ಬು ವ್ಯಕ್ತಿಯ ಜೀವನವನ್ನು 5 ವರ್ಷಗಳವರೆಗೆ ಕಡಿಮೆ ಮಾಡುತ್ತದೆ.
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ ? :
ಹೊಟ್ಟೆಯ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡಲು ಜೀವನಶೈಲಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಬೇಕಾಗಬಹುದು. ಕ್ರಿಯಾಶೀಲರಾಗಿರುವ ಮತ್ತು ವ್ಯಾಯಾಮ ಮಾಡುವ ಅಭ್ಯಾಸವನ್ನು ಅಳವಡಿಸಿಕೊಳ್ಳಬೇಕು.ಇದಲ್ಲದೆ,ಹೆಚ್ಚಿನ ಪ್ರಮಾಣದ ಎಣ್ಣೆ ಅಥವಾ ಇತರ ಯಾವುದೇ ರೀತಿಯ ಕೊಬ್ಬನ್ನು ಒಳಗೊಂಡಿರುವ ಆಹಾರದಿಂದ ದೂರವಿರಬೇಕು.
ಇದನ್ನೂ ಓದಿ : ಲಿವರ್ ಆರೋಗ್ಯ ಕೆಡುತ್ತಿದೆ ಎನ್ನುವುದನ್ನು ಖಚಿತವಾಗಿ ತೋರಿಸುತ್ತದೆ ಈ ಲಕ್ಷಣಗಳು! ನಿರ್ಲಕ್ಷ್ಯ ಬೇಡವೇ ಬೇಡ
1.ಸಂಸ್ಕರಿಸಿದ, ಕಡಿಮೆ ನಾರಿನಂಶವಿರುವ ಆಹಾರಗಳು ಮತ್ತು ಹೆಚ್ಚಿನ ಸಕ್ಕರೆ ಅಂಶವಿರುವ ಆಹಾರಗಳನ್ನು ಸೇವಿಸಬಾರದು.
2.ಹೊಟ್ಟೆ ಉಬ್ಬರವನ್ನು ಹೆಚ್ಚಿಸುವ ಆಹಾರಗಳ ಸೇವನೆಯನ್ನು ಕಡಿಮೆ ಮಾಡಬೇಕು.
3.ಆಹಾರ ಸೇವಿಸಿದ ತಕ್ಷಣ ಮಲಗಬಾರದು.
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮನೆಮದ್ದುಗಳು :
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಉತ್ತಮ ಮಾರ್ಗವೆಂದರೆ ಅಡುಗೆಮನೆಯಲ್ಲಿ ಇರುವ ಮಸಾಲೆಗಳನ್ನು ಬಳಸುವುದು.ನಿಮ್ಮ ಅಡುಗೆಮನೆಯಲ್ಲಿ ಕಂಡುಬರುವ ಕೆಲವು ಮಸಾಲೆಗಳು ತೂಕವನ್ನು ಕಳೆದುಕೊಳ್ಳಲು ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಅಂತಹ ಒಂದು ಮಸಾಲೆ ಜೀರಿಗೆ.ಈ ಕಂದು-ಕಪ್ಪು ಬೀಜಗಳು ನಿಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಲು ಮತ್ತು ಹೊರಹಾಕಲು ಸಹಾಯ ಮಾಡುತ್ತದೆ.ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಜೀರಿಗೆಯನ್ನು ಹೇಗೆ ಸೇವಿಸಬೇಕು ಎಂದು ತಿಳಿಯೋಣ.
ಇದನ್ನೂ ಓದಿ : ಕಿಡ್ನಿ ಸ್ಟೋನ್ ಇದ್ದರೆ ಮನೆಯಂಗಳದಲ್ಲೇ ಸಿಗುವ ಈ ಎಲೆಯ ರಸ ಕುಡಿಯಿರಿ: ಕಲ್ಲು ಸರಾಗವಾಗಿ ಹೊರಬರುತ್ತೆ! ನೋವು ಕೂಡ ಇರಲ್ಲ
೧.ಒಂದು ಕಪ್ ನೀರನ್ನು ಕುದಿಸಿ.
೨.ಈಗ ಅದರಲ್ಲಿ ಅರ್ಧ ಅಥವಾ ಒಂದು ಚಮಚ ಜೀರಿಗೆ ಸೇರಿಸಿ.
೩.ಜೀರಿಗೆ ನೀರನ್ನು 6-7 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಚೆನ್ನಾಗಿ ಕುಡಿಸಿ.
೪. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಚಹಾದಂತೆ ಕುಡಿಯಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ