ನವದೆಹಲಿ: Johnson And Johnson Single Dose Vaccine - ಜಾನ್ಸನ್ ಮತ್ತು ಜಾನ್ಸನ್ (Johnson and Johnson) ಕಂಪನಿಯ ಒಂದೇ ಡೋಸ್ ಕೊರೊನಾ (Covid-19) ಲಸಿಕೆಗೆ (Vaccine) ಭಾರತದಲ್ಲಿ (India) ತುರ್ತು ಬಳಕೆಗಾಗಿ ಅನುಮೋದನೆ ನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Union Health Minister Hasmukh Mandavia) ಈ ಮಾಹಿತಿಯನ್ನು ನೀಡಿದ್ದಾರೆ.


Kerala : ವ್ಯಾಕ್ಸಿನ್ ಪಡೆದ 39 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್!


COMMERCIAL BREAK
SCROLL TO CONTINUE READING

ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ತನ್ನ ಒಂದೇ ಡೋಸ್ ಕೋವಿಡ್ -19 ಕರೋನಾ ವೈರಸ್ ವಿರುದ್ಧ ಶೇ.85 ರಷ್ಟು ಪರಿಣಾಮಕಾರಿಯಾಗಿದೆ ಎಂದು ಹೇಳಿಕೊಂಡಿದೆ.


ಭಾರತದಲ್ಲಿ ಇದುವರೆಗೆ 50,10,09,609 ಜನರಿಗೆ ಕರೋನಾ ಲಸಿಕೆಯ ಡೋಸ್ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 49,55,138 ಜನರಿಗೆ ಕರೋನಾ ಲಸಿಕೆ ನೀಡಲಾಗಿದೆ.


ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 38,628 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ ಮತ್ತು 40,017 ಸೋಂಕಿತರನ್ನು ಗುಣಪಡಿಸಲಾಗಿದೆ. ಈ ಅವಧಿಯಲ್ಲಿ ಸುಮಾರು 617 ಜನರು ಕರೋನಾದಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.


ಇದನ್ನೂ ಓದಿ-Corona Vaccine: ಲಸಿಕೆಯ ಕೊರತೆ ನೀಗಿಸಲು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ ಈ ಸಲಹೆ


ಜಾನ್ಸನ್ ಮತ್ತು ಜಾನ್ಸನ್ ಅವರ ಈ ಲಸಿಕೆಯ ಬಳಕೆಗೆ ಅನುಮೋದನೆ ದೊರೆದ ಬಳಿಕ ಇದು ಭಾರತದಲ್ಲಿ ಕೊರೊನಾ ವಿರುದ್ಧದ ಮೊದಲ ಸಿಂಗಲ್ ಡೋಸ್ ಲಸಿಕೆಯಾಗಿದೆ. ಈ ಹಿಂದೆ ಭಾರತದಲ್ಲಿ ಕೋವಾಕ್ಸಿನ್, ಕೋವಿಶೀಲ್ಡ್ ಮತ್ತು ಸ್ಪುಟ್ನಿಕ್-ವಿ ಅನ್ನು ತುರ್ತು ಬಳಕೆಗಾಗಿ ಅನುಮೊದಿಸಲಾಗಿದ್ದು,  ಈ ಮೂರು ಲಸಿಕೆಗಳು ಡಬಲ್ ಡೋಸ್ ಲಸಿಕೆಗಳಾಗಿವೆ. ಅಂದರೆ, ಜನರು ಈ ವ್ಯಾಕ್ಸಿನ್ ಗಳ ಎರಡೆರಡು ಪ್ರಮಾಣ ತೆಗೆದುಕೊಳ್ಳಬೇಕು.


ಇದನ್ನೂ ಓದಿ-Corona: ಸಂಪೂರ್ಣ ಸುರಕ್ಷಾ ಕವಚವಾಗಿ ಸಾಬೀತಾಯಿತು ಈ ಲಸಿಕೆ ; ಡೆಲ್ಟಾ ರೂಪಾಂತರದ ವಿರುದ್ದವೂ ಪರಿಣಾಮಕಾರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ