How To Reduce Belly Fat: ಪ್ರಸ್ತುತ ತೂಕ ಹೆಚ್ಚಳ ಪ್ರತಿಯೊಬ್ಬರ ಬಹುದೊಡ್ಡ ಸಮಸ್ಯೆ ಆಗಿದೆ. ಹಲವು ಪ್ರಯತ್ನಗಳ ಹೊರತಾಗಿಯೂ ಹೊಟ್ಟೆ ಮತ್ತು ಸೊಂಟದ ಸುತ್ತಲಿನ ಕೊಬ್ಬು ಮಾತ್ರ ಕಡಿಮೆಯಾಗುವುದಿಲ್ಲ. ಇದಕ್ಕೆ ನಮ್ಮ ಕಳಪೆ ಜೀವನಶೈಲಿ ಸೇರಿದಂತೆ ಹಲವು ಕಾರಣಗಳಿವೆ. ಭಾರತದ ಖ್ಯಾತ ಪೌಷ್ಟಿಕ ತಜ್ಞರಾದ ನಿಖಿಲ್ ವ್ಯಾಟ್ಸ್ ಅವರ ಪ್ರಕಾರ, ತೂಕವನ್ನು ಕಡಿಮೆ ಮಾಡಲು ಬಯಸುವವರು ಪ್ರತಿ ದಿನ ರಾತ್ರಿ ಊಟವಾದ ಎರಡು ಗಂಟೆಗಳ ನಂತರವೇ ಮಲಗಬೇಕು. ಏಕೆಂದರೆ ಊಟವಾದ ತಕ್ಷಣ ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.  


COMMERCIAL BREAK
SCROLL TO CONTINUE READING

ಆಹಾರ ತಜ್ಞರ ಪ್ರಕಾರ, ನಿತ್ಯ ರಾತ್ರಿ ಭೋಜನದಲ್ಲಿ  ಪೂರ್ಣ ಅಥವಾ ಹೆಚ್ಚಿನ ಕ್ಯಾಲೋರಿ ಆಹಾರವನ್ನು ಸೇವಿಸುವುದು ಸಹ ಇದಕ್ಕೆ ಮುಖ್ಯ ಕಾರಣವಾಗಿದೆ. ಆದರೆ, ರಾತ್ರಿ ಮಲಗುವ ಮೊದಲು ಸುಲಭವಾಗಿ ತಯಾರಿಸಬಹುದಾದ ಪಾನೀಯಗಳನ್ನು ಕುಡಿಯುವುದರಿಂದಲೂ ನಿಮ್ಮ ತೂಕವನ್ನು ಇಳಿಸಬಹುದು. ಅದರಲ್ಲೂ, ಬೆಲ್ಲಿ ಫ್ಯಾಟ್ ಕರಗಿಸಬಹುದು ಎಂದು ತಿಳಿದರೆ ನಿಮಗೆ ಅಚ್ಚರಿಯಾಗಬಹುದು. ಅಂತಹ ಪಾನೀಯಗಳು ಯಾವುವು ಎಂದು ತಿಳಿಯೋಣ... 


ಇದನ್ನೂ ಓದಿ- ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಈ ಹಣ್ಣುಗಳನ್ನು ತಪ್ಪದೇ ತಿನ್ನಿ


* ಅರಿಶಿನದ ಹಾಲು: 
ಅರಿಶಿನದ ಹಾಲಿನ ಮಹತ್ವ ನಿಮಗೆ ತಿಳಿದೇ ಇದೆ. ಅರಿಶಿನದಲ್ಲಿ ಹಲವು ಔಷಧೀಯ ಗುಣಗಳು ಕಂಡು ಬರುತ್ತವೆ. ಇದಲ್ಲದೆ, ಹಾಲಿನಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಕಂಡು ಬರುತ್ತವೆ. ಹಾಗಾಗಿಯೇ ಇದನ್ನು  ಒಂದು ಸಂಪೂರ್ಣ ಆಹಾರ ಎಂದು ಹೇಯಲಾಗುತ್ತದೆ. ಹಾಗಾಗಿ, ಹಾಲಿನಲ್ಲಿ ಅರಿಶಿನ ಬೆರೆಸಿ ನಿತ್ಯ ರಾತ್ರಿ ಮಲಗುವ ಮೊದಲು ಕುಡಿಯುವುದರಿಂದ ಆರೋಗ್ಯಕರವಾಗಿ ತೂಕ ಇಳಿಕೆ ಸಾಧ್ಯ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- ಕೊಬ್ಬರಿ ಎಣ್ಣೆಯೊಂದಿಗೆ ಈ ವಸ್ತುಗಳನ್ನು ಬೆರೆಸಿ ಹಚ್ಚಿದರೆ ಕೂದಲ ಎಲ್ಲಾ ಸಮಸ್ಯೆಗಳಿಗೂ ಸಿಗಲಿದೆ ಪರಿಹಾರ


* ಮೆಂತ್ಯ ಟೀ:
ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಮೆಂತ್ಯ ಪ್ರಮುಖ  ಪಾತ್ರವಹಿಸುತ್ತದೆ. ಒಂದು ಟೀ ಸ್ಪೂನ್ ಮೆಂತ್ಯವನ್ನು ಒಂದು ಲೋಟ ನೀರಿನಲ್ಲಿ ಹಾಕಿ ದಿನವಿಡೀ ನೆನೆಯಲು ಬಿಡಿ. ರಾತ್ರಿ ಅದನ್ನು ಫಿಲ್ಟರ್ ಮಾಡಿ ಸ್ವಲ್ಪ ಬಿಸಿ ಮಾಡಿ ಕುಡಿಯಿರಿ. ನಿತ್ಯ ರಾತ್ರಿ ಮೆಂತ್ಯ ಟೀ ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುವುದರ ಜೊತೆಗೆ ಆರೋಗ್ಯಕರವಾಗಿ ತೂಕವೂ ಕಡಿಮೆ ಆಗುತ್ತದೆ. ಅದರಲ್ಲೂ ಮುಖ್ಯವಾಗಿ ಬೆಲ್ಲಿ ಫ್ಯಾಟ್ ಕರಗಿಸುವಲ್ಲಿ ಇದು ಹೆಚ್ಚು ಪ್ರಯೋಜನಕಾರಿ ಆಗಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.