Hot Water Shower : ನೀವು ಚಳಿಗಾಲದಲ್ಲಿ ಬಿಸಿನೀರು ಸ್ನಾನ ಮಾಡುತ್ತೀರಾ? ಹಾಗಿದ್ರೆ, ಜಾಗೃತ!
Side Effects Of Hot Water Shower : ಸಧ್ಯ ಚಳಿಗಾಲವಿದೆ ಹೀಗಾಗಿ ಹೆಚ್ಚಿನ ಜನ ಚಳಿಗೆ ಹೆದರಿ ಬಿಸಿನೀರಿನ ಸ್ನಾನ ಮಾಡುತ್ತಾರೆ. ಆದರೆ, ಅತಿಯಾದ ಬಿಸಿ ನೀರಿನ ಸ್ನಾನ ನಿಮ್ಮ ಆರೋಗ್ಯಕ್ಕೆ ತುಂಬಿ ಹಾನಿಕಾರಕವಾಗಿದೆ. ಹೌದು, ಸಾಮಾನ್ಯಕ್ಕಿಂತ ಬಿಸಿನೀರಿನಿಂದ ಸ್ನಾನ ಮಾಡುವುದು ಹಾನಿಕಾರಕ.
Side Effects Of Hot Water Shower : ಸಧ್ಯ ಚಳಿಗಾಲವಿದೆ ಹೀಗಾಗಿ ಹೆಚ್ಚಿನ ಜನ ಚಳಿಗೆ ಹೆದರಿ ಬಿಸಿನೀರಿನ ಸ್ನಾನ ಮಾಡುತ್ತಾರೆ. ಆದರೆ, ಅತಿಯಾದ ಬಿಸಿ ನೀರಿನ ಸ್ನಾನ ನಿಮ್ಮ ಆರೋಗ್ಯಕ್ಕೆ ತುಂಬಿ ಹಾನಿಕಾರಕವಾಗಿದೆ. ಹೌದು, ಸಾಮಾನ್ಯಕ್ಕಿಂತ ಬಿಸಿನೀರಿನಿಂದ ಸ್ನಾನ ಮಾಡುವುದು ಹಾನಿಕಾರಕ. ಇದರಿಂದ ಚರ್ಮ ಮತ್ತು ಕೂದಲಿನ ಸಮಸ್ಯೆಗಳು ಕಂಡು ಬರುತ್ತವೆ. ಹೀಗಾಗಿ, ಬಿಸಿನೀರಿನ ಸ್ನಾನ ಮಾಡುವ ಅನಾನುಕೂಲಗಳು ಯಾವುವು? ಈ ಕೆಳಗಿದೆ ನೋಡಿ..
ಚಳಿಗಾಲದಲ್ಲಿ ಬಿಸಿನೀರಿನ ಸ್ನಾನದ ಅನಾನುಕೂಲಗಳು
ಕಣ್ಣುಗಳ ತೇವಾಂಶದ ಮೇಲೆ ಪರಿಣಾಮವಿದೆ
ಬಿಸಿನೀರಿನೊಂದಿಗೆ ಸ್ನಾನ ಮಾಡುವುದರಿಂದ ಕಣ್ಣಿನಲ್ಲಿರುವ ತೇವಾಂಶದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕಣ್ಣಿನಲ್ಲಿ ತುರಿಕೆ ಸಮಸ್ಯೆಯಂತಹ ಸಮಸ್ಯೆಗಳು ಶುರುವಾಗುತ್ತವೆ. ಇನ್ನೊಂದೆಡೆ ಕಣ್ಣು ಒಣಗುವ ಸಮಸ್ಯೆಯಿದ್ದರೆ ಬಿಸಿ ನೀರಿನಿಂದ ಸ್ನಾನ ಮಾಡಬಾರದು. ಹೀಗಾಗಿ, ತಣ್ಣೀರಿನಿಂದ ಸ್ನಾನ ಮಾಡುವುದು ತುಂಬಾ ಪ್ರಯೋಜನಕಾರಿ.
ಪುರುಷ ಮತ್ತು ಮಹಿಳೆಯರ ಫಲವತ್ತತೆ ಮೇಲೆ ಪರಿಣಾಮ
ಬಿಸಿನೀರಿನೊಂದಿಗೆ ಸ್ನಾನ ಮಾಡುವುದು ತುಂಬಾ ಅಪಾಯಕಾರಿ ಎಂದರೆ. ನೀವು ಆಶ್ಚರ್ಯ ಪಡಬಹುದು. ಆದ್ರೆ, ಇದು ನಿಜ. ನಿರಂತರವಾಗಿ ಬಿಸಿನೀರಿನ ಸ್ನಾನ ಮಾಡುವುದು ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಮತ್ತೊಂದೆಡೆ, ನೀವು ಗರ್ಭಿಣಿಯಾಗಲು ಬಯಸಿದರೆ, ನೀವು ಸ್ನಾನ ಮಾಡುವಾಗ ಬಿಸಿ ನೀರಿನಿಂದ ದೂರವಿರಬೇಕು. ಏಕೆಂದರೆ ಪ್ರತಿದಿನ ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ಪುರುಷರ ವೀರ್ಯದ ಮೇಲೆ ಪರಿಣಾಮ ಬೀರುತ್ತದೆ.
ಕೂದಲು ಮತ್ತು ಚರ್ಮಕ್ಕೆ
ಬಿಸಿನೀರು ಕೂದಲಿಗೆ ಅಪಾಯಕಾರಿಯಾಗಿದೆ. ಏಕೆಂದರೆ ಬಿಸಿ ನೀರು ಕೂದಲಿನಲ್ಲಿರುವ ಕೆರಾಟಿನ್ ಕೋಶಗಳನ್ನು ದುರ್ಬಲಗೊಳಿಸುತ್ತದೆ. ಈ ಕಾರಣದಿಂದಾಗಿ, ಕೂದಲು ತೆಳುವಾಗಲು ಪ್ರಾರಂಭಿಸುತ್ತದೆ. ಅದಕ್ಕಾಗಿಯೇ ಬಿಸಿ ನೀರಿನಿಂದ ಸ್ನಾನ ಮಾಡುವುದನ್ನು ತಪ್ಪಿಸಬೇಕು ಅಷ್ಟೇ ಅಲ್ಲ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ಕೂದಲು ಒಣಗುತ್ತದೆ.
ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು
ಬಿಸಿನೀರಿನ ಸ್ನಾನ ಮಾಡುವುದರಿಂದ ಚರ್ಮ ಒಣಗುತ್ತದೆ. ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಅದಕ್ಕಾಗಿಯೇ ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡುವುದನ್ನು ತಪ್ಪಿಸಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.