Do Not Include White Foods In Diet : ಪ್ರಪಂಚದಾದ್ಯಂತ ಜನರು ಸ್ಥೂಲಕಾಯತೆಯಿಂದ ತೊಂದರೆಗೊಳಗಾಗುತ್ತಾರೆ. ಬೊಜ್ಜು ರೋಗವಾಗಿ ಹೊರಹೊಮ್ಮುತ್ತಿದೆ. ಜನರ ಅನುಸರಿಸುತ್ತಿರುವ ತಪ್ಪು ಆಹಾರ ಪದ್ಧತಿ ಮತ್ತು ವ್ಯಾಯಾಮದ ಕೊರತೆಯಿಂದ ಇದೆಲ್ಲವೂ ನಡೆಯುತ್ತಿದೆ. ಜನರು ನಿರಂತರವಾಗಿ ಸ್ಥೂಲಕಾಯಕ್ಕೆ ಬಲಿಯಾಗುತ್ತಿದ್ದಾರೆ. ಹೀಗಾಗಿ ದೇಹ ದಪ್ಪಗೆ ಇರುವವರು ತೂಕ ಕಳೆದುಕೊಳ್ಳಲು ಹಗಲು ರಾತ್ರಿ ಶ್ರಮಿಸುತ್ತಾರೆ.  


COMMERCIAL BREAK
SCROLL TO CONTINUE READING

ದೇಹದಲ್ಲಿ ಕೊಬ್ಬು ಹೆಚ್ಚು ಸಂಗ್ರಹವಾಗಲು ಜಂಕ್ ಫುಡ್ ಕಾರಣ. ಗೊತ್ತು ಗುರಿಯಿಲ್ಲದ ದಿನಚರಿ ಮತ್ತು ವ್ಯಾಯಾಮದ ಕೊರತೆಯಿಂದಾಗಿ ಜನರಲ್ಲಿ ಹೊಟ್ಟೆಯ ಕೊಬ್ಬು ವೇಗವಾಗಿ ಹೆಚ್ಚುತ್ತಿದೆ. ವಾಸ್ತವವಾಗಿ, ಆಹಾರದಲ್ಲಿ ಜಂಕ್ ಫುಡ್‌ಗಳ ಜೊತೆಗೆ, ನಮ್ಮ ಆರೋಗ್ಯಕ್ಕೆ ಹಾನಿಕಾರಕವಾದ ಕೆಲವು ಆಹಾರಗಳನ್ನು ಸಹ ನಾವು ಸೇವಿಸುತ್ತೇವೆ. ಇವುಗಳಲ್ಲಿ ಮುಖ್ಯವಾದವು ಬಿಳಿ ಆಹಾರಗಳು. ಹೌದು, ಆಹಾರದಲ್ಲಿ ಬಿಳಿ ಆಹಾರಗಳನ್ನು ಸೇರಿಸುವುದರಿಂದ   ಬೊಜ್ಜು ವೇಗವಾಗಿ ಹೆಚ್ಚುತ್ತದೆ. ಜನರು ಕೊಬ್ಬು ಕಡಿಮೆ ಮಾಡಲು ಮತ್ತು ಫಿಟ್ ಆಗಿರಲು ಜಿಮ್ ಗೆ ಹೋಗುತ್ತಾರೆ. ವ್ಯಾಯಾಮ ಮಾಡುತ್ತಾರೆ. ಗಂಟೆ ಗಟ್ಟಲೆ ಬೆವರು ಹರಿಸುತ್ತಾರೆ. ಇದರ ಬದಲು ಇಲ್ಲಿ ತಿಳಿಸಲಾದ ಬಿಳಿ  ಪದಾರ್ಥಗಳನ್ನು ನಿಮ್ಮ ಆಹಾರದಿಂದ ಹೊರಗಿಡುವುದರಿಂದ, ಬೊಜ್ಜು ಬಹಳಷ್ಟು ಕಡಿಮೆಯಾಗುತ್ತದೆ. 


ಇದನ್ನೂ ಓದಿ : ಪಿರಿಯೇಡ್ಸ್ ಸಮಯದಲ್ಲಿ ಹೆಣ್ಣು ಮಕ್ಕಳು ಚಹಾ ಸೇವಿಸಬಾರದು ! ಯಾಕೆ ಗೊತ್ತಾ ?


1. ಅನ್ನದ ಸೇವನೆಯನ್ನು ಕಡಿಮೆ ಮಾಡಿ : 
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಮೊದಲು ನಿಮ್ಮ ಆಹಾರದಿಂದ ಅನ್ನವನ್ನು ಹೊರಗಿಡಿ. ಒಂದು ವೇಳೆ ಅನ್ನ ತಿನ್ನದೇ ಇರುವುದು ಕಷ್ಟ ಎಂದಾದರೆ ಸೇವಿಸುವ ಅನ್ನದ ಪ್ರಮಾಣವನ್ನು ಕಡಿಮೆ ಮಾಡಿ. ಬಿಳಿ ಅನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದಕ್ಕಾಗಿಯೇ ಆಹಾರದಲ್ಲಿ ಬ್ರೌನ್ ರೈಸ್ ಅನ್ನು ತಿನ್ನಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಏಕೆಂದರೆ ಬಿಳಿ ಅಕ್ಕಿಯನ್ನು ಪಾಲಿಶ್ ಮಾಡಲಾಗಿರುತ್ತದೆ. ಹಾಗಾಗಿ ಇದರ ಸೇವನೆಯಿಂದ  ಬೊಜ್ಜು ವೇಗವಾಗಿ ಹೆಚ್ಚುತ್ತದೆ. 


2. ವೈಟ್ ಬ್ರೆಡ್ : 
ಕೆಲವರಿಗೆ ಬೆಳಗಿನ ಉಪಾಹಾರದಲ್ಲಿ ಬ್ರೆಡ್ ತಿನ್ನುವ ಅಭ್ಯಾಸ ಇರುತ್ತದೆ. ಹಾಗಾಗಿ ಅವರು ವೈಟ್ ಬ್ರೆಡ್ ಅನ್ನು ಸೇವಿಸುತ್ತಾರೆ. ಬ್ರೆಡ್ ನಿಮ್ಮ ಹೊಟ್ಟೆಯ ಕೊಬ್ಬನ್ನು ತ್ವರಿತವಾಗಿ ಹೆಚ್ಚಿಸುತ್ತದೆ. ಆದ್ದರಿಂದ ನಿಮ್ಮ ಆಹಾರದಿಂದ ವೈಟ್ ಬ್ರೆಡ್ ಅನ್ನು ಹೊರಗಿಡಿ. ಇದು ದೇಹದಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಕೂಡಾ ಹೆಚ್ಚಿಸುತ್ತದೆ. ಬ್ರೆಡ್ ಬಳಸುವುದೇ ಆದರೆ ಬ್ರೌನ್ ಬ್ರೆಡ್ ಅಥವಾ ಗೋಧಿಯ ಬ್ರೆಡ್ ಅನ್ನು ಬಳಸಿ.  


ಇದನ್ನೂ ಓದಿ : ಈ 5 ಅಂಗಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದಾಗ ಸಂಕೇತ ನೀಡುತ್ತವೆ..! ನಿರ್ಲಕ್ಷಿಸಬೇಡಿ


3.ಮೈದಾ : 
ನೀವು ಸ್ಥೂಲಕಾಯದಿಂದ ಬಳಲುತ್ತಿದ್ದು, ನಿರಂತರವಾಗಿ ಮೈದಾದಿಂದ  ಮಾಡಿದ ವಸ್ತುಗಳನ್ನು ತಿನ್ನುತ್ತಿದ್ದರೆ ಅದು ಬಲು ಅಪಾಯಕಾರಿ. ನಿಮ್ಮ ಆಹಾರದಿಂದ ಮೈದಾದಿಂದ ಮಾಡಿದ ವಸ್ತುಗಳನ್ನು ತಕ್ಷಣ ಹೊರಗಿಡಬೇಕು.  ವಾಸ್ತವವಾಗಿ, ಎಣ್ಣೆಯಲ್ಲಿ ಕರಿದ ಮೈದಾ ಹಿಟ್ಟಿನಿಂದ ಮಾಡಿದ ವಸ್ತುಗಳು ಸ್ಥೂಲಕಾಯತೆಯನ್ನು ತ್ವರಿತವಾಗಿ ಹೆಚ್ಚಿಸುತ್ತವೆ. ಮೈದಾ ಸಂಸ್ಕರಿಸಿದ ಹಿಟ್ಟು ಮತ್ತು ಇದು ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ.  ಹಾಗಾಗಿ ಮೈದಾದಿಂದ ತಯಾರಿಸಿದ ಖಾದ್ಯಗಳನ್ನು ತಿನ್ನುತ್ತಿದ್ದರೆ ಫಿಟ್ ಆಗಿ ಇರುವುದು ಸಾಧ್ಯವೇ ಇಲ್ಲ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ