ಮನುಷ್ಯನ ದೀರ್ಘಾಯುಷ್ಯದ ಬಗ್ಗೆ ದೀರ್ಘಕಾಲದಿಂದಲೂ ವಿಜ್ಞಾನಿಗಳು ಮತ್ತು ವೈದ್ಯಕೀಯ ತಜ್ಞರು ಸಂಶೋಧನೆಗಳನ್ನು ನಡೆಸುತ್ತಲೇ ಇದ್ದಾರೆ. 


COMMERCIAL BREAK
SCROLL TO CONTINUE READING

ಕೆಲವು ಸಂಶೋಧನೆಗಳು ಮನುಷ್ಯನ ಜೀವಿತಾವಧಿ 115 ವರ್ಷಗಳನ್ನು ಎಂದಿಗೂ ಮೀರಲು ಸಾಧ್ಯವಿಲ್ಲ ಎಂದು ಹೇಳಿದರೆ, ಮತ್ತೆ ಕೆಲವು ಅಧ್ಯಯನ ವರದಿಗಳು ಇದಕ್ಕೆ ವ್ಯತಿರಿಕ್ತವಾಗಿ ಹೇಳಿದ್ದು, ಇಂದಿಗೂ ಚರ್ಚೆ ನಡೆಯುತ್ತಲೇ ಇದೆ. 


ಆದಾಗ್ಯೂ, ಪ್ರಪಂಚದಾದ್ಯಂತ ಸಾಮಾನ್ಯ ಜೀವನಹೈಲಿ ಹೊಂದಿರುವವರ ಕುರಿತು ಅಧ್ಯಯನ ನಡೆಸಿರುವ ತಜ್ಞರು, ಮನುಷ್ಯನ ಆಯುಸ್ಷ್ಯವನು ದೀರ್ಘಾವಧಿಗೊಳಿಸಲು ಎರಡು ಪ್ರಮುಖ ಅಂಶಗಳನ್ನು ತಿಳಿಸಿದ್ದಾರೆ. ಅವೆಂದರೆ, ಆರೋಗ್ಯಕರ ಜೀವನಶೈಲಿ ಮತ್ತು ಬದುಕಲು ಇರುವ ಕಾರಣಗಳು.


ಅಮೇರಿಕನ್ ಸಂಶೋಧಕ ಡಾನ್ ಬಟ್ನೆಟ್ ನೇತೃತ್ವದ ಸುದ್ದಿ.ಕಾಮ್ ಪ್ರಕಾರ, ವೈದ್ಯರು, ಮಾನವಶಾಸ್ತ್ರಜ್ಞರು, ಜನಸಂಖ್ಯಾಶಾಸ್ತ್ರಜ್ಞರು, ಪೌಷ್ಟಿಕಶಾಸ್ತ್ರಜ್ಞರು ಮತ್ತು ಸೋಂಕುಶಾಸ್ತ್ರಜ್ಞರು ಸೇರಿದಂತೆ ವಿಶೇಷ ತಜ್ಞರ ತಂಡವು ಸಾಮಾನ್ಯ ವಲಯದ ಜನರು ದೀರ್ಘಾವಧಿ ಜೀವಿಸಲು ಕಾರಣಗಳೇನು ಎಂಬುದನ್ನು ವಿಶ್ಲೇಷಿಸಿದ್ದಾರೆ.


ಹೀಗೆ ಸಂಶೋಧಕರಿಂದ ಗುರುತಿಸಲ್ಪಟ್ಟ ದೀರ್ಘಾಯುಷ್ಯದ ಒಂಬತ್ತು ಪ್ರಮುಖ ಅಂಶಗಳು ಹೀಗಿವೆ:


  • ದಿನನಿತ್ಯದ ಕಾರ್ಯಗಳನ್ನು ನಿರ್ವಹಿಸುವಾಗ ತೀವ್ರ ಮತ್ತು ದೈಹಿಕ ಚಟುವಟಿಕೆ ಹೆಚ್ಚಾಗಿರುತ್ತದೆ. ಈ ಜನರು ಯಾವಾಗಲೂ ಚಟುವಟಿಕೆಯಿಂದ ಇರುತ್ತಾರೆ. 

  • ದೈನಂದಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಅಲ್ಪ ಸಮಯ ನಿದ್ದೆ ಮಾಡುವುದು, ಪ್ರಾರ್ಥನೆ ಮಾಡುವುದು ಅಥವಾ ಮನೋರಂಜನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು.

  • ಶೇ.80ರಷ್ಟು ಹಸಿವು ನೀಗುವವರೆಗೆ ಮಾತ್ರ ಆಹಾರ ಸೇವಿಸಿ. ಹೊಟ್ಟೆ ತುಂಬಿ ಹೆಚ್ಚಾಯಿತು ಎನ್ನುವಷ್ಟು ತಿನ್ನುವ ಅಗತ್ಯವಿಲ್ಲ.

  • ನಾವು ಏಕೆ ಬದುಕಿದ್ದೇವೆ ಮತ್ತು ಪ್ರತಿನಿತ್ಯ ಬೆಳಿಗ್ಗೆ ಏಕೆ ಏಳುತ್ತೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಿ.

  • ಮಾಂಸ, ಮೀನು, ಹಾಲಿಯನ್ ಉತ್ಪನ್ನಗಳ ಸೇವನೆಯನ್ನು ಕಡಿಮೆಗೊಳಿಸಿ 

  • ಸಸ್ಯ ಆಧಾರಿತ ಉತ್ಪನ್ನಗಳಲ್ಲಿ ಸಮೃದ್ಧವಾಗಿರುವ ಆಹಾರಕ್ರಮ ಮತ್ತು ಮಾಂಸ, ಮೀನು ಮತ್ತು ಡೈರಿ ಉತ್ಪನ್ನಗಳ ಸೇವನೆಯನ್ನು ಕಡಿಮೆಗೊಳಿಸುವುದು.

  • ಆಲ್ಕೊಹಾಲ್ ಪಾನೀಯಗಳ ಸೇವನೆ ಕಡಿಮೆಗೊಳಿಸಿ.

  • ಆರೋಗ್ಯಕರ ಆಹಾರವನ್ನು ಪ್ರೋತ್ಸಾಹಿಸುವ ಸಾಮಾಜಿಕ ಗುಂಪುಗಳಲ್ಲಿ ತೊಡಗಿಕೊಳ್ಳಿ.

  • ಧಾರ್ಮಿಕ ಸಮುದಾಯಗಳೊಂದಿಗೆ ಸಂವಹನ ನಡೆಸುವುದು.

  • ಕುಟುಂಬದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವುದು ಮತ್ತು ನಿರ್ವಹಿಸುವುದು. 


ಈ ಅಂಶಗಳನ್ನು ದಿನಾನಿತ್ಯ ಜೀವನದಲ್ಲಿ ತೊಡಗಿಸಿಕೊಂಡರೆ ಆರೋಗ್ಯ ಸ್ಸ್ಥಿತಿ ಸುಧಾರಣೆಗೊಳ್ಳುವುದಲ್ಲದೆ ದಿರ್ಘಾವಧಿ ಜೀವಿಸಲು ಅನುವು ಮಾಡಿಕೊಡುತ್ತವೆ.