Kidney Stone: ನಿಮ್ಮ ಈ ಅಭ್ಯಾಸಗಳಿಂದ ಹೆಚ್ಚುತ್ತೆ ಕಿಡ್ನಿ ಸ್ಟೋನ್ ಅಪಾಯ
Kidney Stone: ಮೂತ್ರಪಿಂಡದಲ್ಲಿ ಕಲ್ಲುಗಳ ಅಪಾಯ ಸರ್ವೇ ಸಾಮಾನ್ಯ ಸಮಸ್ಯೆ ಆಗಿದೆ. ಆದರೆ ಈ ಸಮಸ್ಯೆಗೆ ನಮ್ಮ ಕೆಲವು ದೈನಂದಿನ ಅಭ್ಯಾಸಗಳು ಕೂಡ ಕಾರಣವಾಗಿರಬಹುದು ಎಂದು ನಿಮಗೆ ತಿಳಿದಿದೆಯೇ? ನಿಮ್ಮ ಈ ಅಭ್ಯಾಸಗಳನ್ನು ತಪ್ಪಿಸುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಪರಿಹಾರ ಪಡೆಯಬಹುದು ಎನ್ನಲಾಗುತ್ತದೆ. ಅಂತಹ ಅಭ್ಯಾಸಗಳು ಯಾವುವು ಎಂದು ತಿಳಿಯೋಣ...
Kidney Stone: ಮೂತ್ರಪಿಂಡಗಳು ಎಂದರೆ ಕಿಡ್ನಿಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಇದು ನಮ್ಮ ದೇಹದಿಂದ ತ್ಯಾಜ್ಯವನ್ನು ಹೊರ ಹಾಕಲು ತುಂಬಾ ಪ್ರಯೋಜನಕಾರಿ ಆಗಿದೆ. ಕೆಲವೊಮ್ಮೆ ನಮ್ಮ ಕೆಟ್ಟ ಅಭ್ಯಾಸಗಳಿಂದಾಗಿ ದೇಹದಿಂದ ತ್ಯಾಜ್ಯ ಹೊರಹೋಗದೆ ಕಿಡ್ನಿಯಲ್ಲಿ ಶೇಖರಣೆಯಾಗಲು ಪ್ರಾರಂಭವಾಗುತ್ತದೆ. ಕ್ರಮೇಣ ಇದು ಗಟ್ಟಿಯಾಗಿ ಕಲ್ಲಿನ ರೂಪ ಪಡೆಯುತ್ತದೆ. ಇದನ್ನೇ ಕಿಡ್ನಿ ಸ್ಟೋನ್ ಎನ್ನಲಾಗುತ್ತದೆ. ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಲ್ಲಿ ತೀವ್ರವಾದ ಅಸಹನೀಯ ನೋವು ಕಾಣಿಸಿಕೊಳ್ಳುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಇದಕ್ಕೆ ನಮ್ಮ ಕೆಲವು ಅಭ್ಯಾಸಗಳು ಕೂಡ ಕಾರಣವಾಗಿರಬಹುದು. ಅಂತಹ ಅಭ್ಯಾಸಗಳು ಯಾವುವು ಎಂದು ತಿಳಿಯೋಣ...
clinic.in ಪ್ರಕಾರ, ಕೆಲವು ಅಭ್ಯಾಸಗಳು ಮೂತ್ರಪಿಂಡಗಳಲ್ಲಿ ಕಲ್ಲಿನ ಅಪಾಯವನ್ನು (Kidney Stone Risk) ಹೆಚ್ಚಿಸುತ್ತದೆ. ಇವುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದರಿಂದ ಕಿಡ್ನಿ ಸ್ಟೋನ್ ಅಪಾಯವನ್ನು ಕಡಿಮೆ ಮಾಡಬಹುದು ಎನ್ನಲಾಗುತ್ತದೆ. ಅವುಗಳೆಂದರೆ...
* ಸರಿಯಾಗಿ ನೀರು ಕುಡಿಯದೆ ಇರುವುದು:
ದೇಹದಲ್ಲಿ ನೀರಿನ ಕೊರತೆಯಿಂದಾಗಿಯೂ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಾಗಬಹುದು. ಇದನ್ನು ತಪ್ಪಿಸಲು, ನಿತ್ಯ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಅವಶ್ಯಕ.
* ಕ್ಯಾಲ್ಸಿಯಂ ಕೊರತೆ:
ಕ್ಯಾಲ್ಸಿಯಂ ಕೊರತೆ (Calcium deficiency)ಯೂ ಸಹ ಮೂತ್ರಪಿಂಡಗಳಲ್ಲಿ ಕಲ್ಲಿನ ರಚನೆಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಸಮತೋಲಿತ ಆಹಾರವನ್ನು ತೆಗೆದುಕೊಳ್ಳುವ ಅವಶ್ಯಕತೆ ಇದೆ.
ಇದನ್ನೂ ಓದಿ- ಬಿಸಿಲು, ಸೆಕೆ ಎಂದು ಫ್ರಿಜ್ ನೀರನ್ನೇ ಕುಡಿಯುತ್ತೀರಾ ? ಇದರ ಪರಿಣಾಮ ಕೂಡಾ ತಿಳಿದುಕೊಳ್ಳಿ
* ಅತಿಯಾದ ಸೋಡಿಯಂ ಸೇವನೆ:
ಅಧಿಕ ಪ್ರಮಾಣದಲ್ಲಿ ಸೋಡಿಯಂ ಅನ್ನು ಸೇವಿಸುವುದರಿಂದ ಮೂತ್ರಪಿಂಡಗಳು ಮೂತ್ರದ ಮೂಲಕ ಹೆಚ್ಚುವರಿ ಕ್ಯಾಲ್ಸಿಯಂ ಅನ್ನು ಹೊರಹಾಕಲು ಒತ್ತಾಯಿಸುತ್ತದೆ. ಈ ಹೆಚ್ಚುವರಿ ಕ್ಯಾಲ್ಸಿಯಂ ಕಲ್ಲುಗಳ ರೂಪವನ್ನು ತೆಗೆದುಕೊಳ್ಳಬಹುದು. ಇದನ್ನು ತಪ್ಪಿಸಲು ಅತಿಯಾದ ಸೋಡಿಯಂ ಸೇವನೆಯನ್ನು ತಪ್ಪಿಸಿ.
* ಅಧಿಕ ಪ್ರಮಾಣದಲ್ಲಿ ಮಾಂಸಾಹಾರ ಸೇವನೆ:
ಮೊಟ್ಟೆ, ಮೀನು ಮತ್ತು ಮಾಂಸಾಹಾರಗಳು ಪ್ರೋಟೀನ್‌ನ ಉತ್ತಮ ಮೂಲಗಳಾಗಿವೆ. ಆದರೆ ಅವುಗಳ ಅತಿಯಾದ ಸೇವನೆಯು ಕಿಡ್ನಿ ಸ್ಟೋನ್ (Kidney Stone) ಅಪಾಯವನ್ನು ಹೆಚ್ಚಿಸುತ್ತದೆ. ವಾಸ್ತವವಾಗಿ, ಹೆಚ್ಚುವರಿ ಪ್ರೋಟೀನ್ ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣವನ್ನು ಹೆಚ್ಚಿಸುತ್ತದೆ, ಇದು ಮೂತ್ರಪಿಂಡಗಳಲ್ಲಿ ಕಲ್ಲಿನ ರಚನೆಗೆ ಕಾರಣವಾಗಬಹುದು.
* ಅಧಿಕ ಆಕ್ಸಲೇಟ್ ಹೊಂದಿರುವ ಆಹಾರ ಉತ್ಪನ್ನಗಳನ್ನು ತಿನ್ನುವುದು:
ಪಾಲಕ್, ಬೀಟ್ರೂಟ್, ಚಾಕೊಲೇಟ್ ಮತ್ತು ಗೋಡಂಬಿ ಇತ್ಯಾದಿಗಳಲ್ಲಿ ಆಕ್ಸಲೇಟ್ ಎಂಬ ಅಂಶವು ಕಂಡುಬರುತ್ತದೆ. ಹೆಚ್ಚಿನ ಪ್ರಮಾಣದ ಆಕ್ಸಲೇಟ್ ಅನ್ನು ಸೇವಿಸುವುದರಿಂದ ಮೂತ್ರದಲ್ಲಿ ಕ್ಯಾಲ್ಸಿಯಂ ಆಕ್ಸಲೇಟ್ ಹರಳುಗಳು ರೂಪುಗೊಳ್ಳಬಹುದು, ಅದು ನಂತರ ಕಲ್ಲುಗಳನ್ನು ರೂಪಿಸುತ್ತದೆ. ಹಾಗಾಗಿ, ಈ ತರಕಾರಿಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.
ಇದನ್ನೂ ಓದಿ- Diabetes Diet: ಮಧುಮೇಹಿಗಳು ಬೆಳಗಿನ ಉಪಹಾರದಲ್ಲಿ ಈ ಆಹಾರಗಳನ್ನು ಸೇವಿಸಿದರೆ ಹೆಚ್ಚಾಗುತ್ತೆ ಶುಗರ್ ಲೆವೆಲ್
* ಬೊಜ್ಜು:
ಅಧಿಕ ತೂಕ ಅಥವಾ ಬೊಜ್ಜು ಕೂಡ ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ. ಸ್ಥೂಲಕಾಯತೆಯು ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣವನ್ನು ಹೆಚ್ಚಿಸಬಹುದು ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವೂ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ತೂಕ ನಿಯಂತ್ರಣವನ್ನು ಕಾಪಾಡಿಕೊಳ್ಳಿ.
* ಬೀಜಗಳನ್ನು ಹೊಂದಿರುವ ಆಹಾರ ಉತ್ಪನ್ನಗಳು:
ಆರೋಗ್ಯ ತಜ್ಞರ ಪ್ರಕಾರ, ಟೊಮಾಟೊ, ಬದನೆಕಾಯಿಯಂತಹ ಬೀಜಗಳನ್ನು ಹೊಂದಿರುವ ಆಹಾರ ಉತ್ಪನ್ನಗಳ ಅತಿಯಾದ ಬಳಕೆಯೂ ಕೂಡ ಕಿಡ್ನಿ ಸ್ಟೋನ್ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ, ಈ ಇಂತಹ ತರಕಾರಿಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.