Turmeric for TB : ನಿಮಗೆ ಗೊತ್ತಿದೆಯಾ ಟಿಬಿ ರೋಗಕ್ಕೂ ರಾಮಬಾಣ ಅಡುಗೆ ಮನೆ ಅರಿಶಿನ
ಭಾರತೀಯರ ಮನೆಯಲ್ಲಿ ಅರಿಶಿನಕ್ಕೆ ಬಹಳ ಪ್ರಾಧಾನ್ಯತೆ ಇದೆ. ಪ್ರತಿ ಅಡುಗೆಗೂ ಅರಿಶಿನ ಹಾಕೇ ಹಾಕುತ್ತೇವೆ. ಮನೆ ಮದ್ದಿನ ರೂಪದಲ್ಲಿ ಅರಿಶಿನವನ್ನು ಬಳಸುತ್ತೇವೆ.
ನವದೆಹಲಿ : ಟಿಬಿ (TB) ಅನ್ನೋದು ಒಂದು ಸಾಂಕ್ರಾಮಿಕ ರೋಗ. ಟಿಬಿ ರೋಗಿಗಳು ಎಲ್ಲೆಂದರಲ್ಲಿ ಕೆಮ್ಮುವುದು, ಸೀನುವುದು, ಉಗುಳುವುದು ಮಾಡಬಾರದು. ಅಲ್ಲದೆ, ಟಿಬಿ ರೋಗಿಗಳು ಮಾತನಾಡುವಾಗ ಅಥವಾ ಹಾಡುವಾಗ ಹೊರ ಬರುವ Dropletsನಿಂದ ರೋಗ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಈ Dropletsನಲ್ಲಿ ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಇರುತ್ತದೆ. ಆರೋಗ್ಯವಂತ ವ್ಯಕ್ತಿಯ ದೇಹದೊಳಗೆ ಇದು ಹೊಕ್ಕರೆ ಆ ವ್ಯಕ್ತಿಗೂ ರೋಗ ತಗಲುತ್ತದೆ. ಟಿಬಿ ಗಂಭೀರ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಸಮಯಕ್ಕೆ ಸರಿಯಾಗಿ ರೋಗಲಕ್ಷಣಗಳನ್ನು ಗುರುತಿಸಿದರೆ ಚಿಕಿತ್ಸೆ ಕೂಡಾ ಸಾಧ್ಯ.
ಟಿಬಿ ರೋಗಕ್ಕೆ ರಾಮಬಾಣ ಈ ಅರಿಶಿನ :
ಭಾರತೀಯರ ಮನೆಯಲ್ಲಿ ಅರಿಶಿನಕ್ಕೆ (Turmeric) ಬಹಳ ಪ್ರಾಧಾನ್ಯತೆ ಇದೆ. ಪ್ರತಿ ಅಡುಗೆಗೂ ಅರಿಶಿನ ಹಾಕೇ ಹಾಕುತ್ತೇವೆ. ಮನೆ ಮದ್ದಿನ ರೂಪದಲ್ಲಿ ಅರಿಶಿನವನ್ನು ಬಳಸುತ್ತೇವೆ. ಈ ಅಡುಗೆ ಮನೆಯ ಅರಿಶಿನ ಟಿಬಿ (TB) ಕಾಯಿಲೆಗೂ ಉತ್ತಮ ಚಿಕಿತ್ಸೆ ಎಂಬುದು ಸಾಬೀತಾಗಿದೆ. ಅರಿಶಿನದಲ್ಲಿ ಕರ್ಕ್ಯುಮಿನ್ (Curcumin) ಅಂಶ ಇರುತ್ತದೆ. ಈ ಕರ್ಕ್ಯುಮಿನ್ ಟಿಬಿ ಚಿಕಿತ್ಸೆಯ ಕ್ಷಮತೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಟಿಬಿಯ ಸ್ಟ್ಯಾಂಡರ್ಡ್ ಚಿಕಿತ್ಸೆಯ ಜೊತೆಗೆ ಅರಿಶಿನ ಬಳಸಿದರೆ ಶೇಕಡಾ 50 ರಷ್ಟು ಕಡಿಮೆ ಸಮಯದಲ್ಲಿ (Treatment time) ರೋಗಿ ಟಿಬಿಯಿಂದ ಗುಣಮುಖರಾಗಬಹುದು.
ಇದನ್ನೂ ಓದಿ : Childhood Obesity : ಮಕ್ಕಳಲ್ಲಿನ ಬೊಜ್ಜಿನ ಸಮಸ್ಯೆ ನಿಯಂತ್ರಣಕ್ಕೆ ಈ ಕ್ರಮಗಳನ್ನು ಅನುಸರಿಸಿ
Reinfection ಆಗದಂತೆ ತಡೆಯುತ್ತದೆ ಅರಿಶಿನ :
ಇದಲ್ಲದೆ, ಹೆಚ್ಚಿನ ಟಿಬಿ ರೋಗಿಗಳಲ್ಲಿ (Tb Patient) ಮತ್ತೊಂದು ಸಾಮಾನ್ಯ ಸಮಸ್ಯೆ ಇದೆ. ಅದೆಂದರೆ, ಮತ್ತೆ ಮತ್ತೆ ಈ ರೋಗಕ್ಕೆ ತುತ್ತಾಗುವುದು. ಆದರೆ ಟಿಬಿಯ ಸ್ಟ್ಯಾಂಡರ್ಡ್ ಚಿಕಿತ್ಸೆಯ ಜೊತೆಗೆ ಕರ್ಕ್ಯುಮಿನ್ ನ್ಯಾನೊ ಕಣಗಳನ್ನು ಬಳಸಿದರೆ ಮತ್ತೆ ಟಿಬಿ ಮರುಕಳಿಸುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಅರಶಿನ, ಸಾಂಕ್ರಾಮಿಕ ರೋಗಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಜೀವಕೋಶಗಳಿಂದ ಬ್ಯಾಕ್ಟೀರಿಯಾವನ್ನು ಹೊರಹಾಕುವ ಕೆಲಸ ಮಾಡುತ್ತದೆ ಕರ್ಕ್ಯುಮಿನ್ :
Mycobacterium tuberculosis ಬ್ಯಾಕ್ಟೀರಿಯ ಕ್ಷಯರೋಗಕ್ಕೆ ಕಾರಣವಾಗಿದೆ. ಈ ಬ್ಯಾಕ್ಟೀರಿಯಾವನ್ನು ದೇಹದಿಂದ ಹೊರ ಹಾಕಲು ಅರಿಶಿನದಲ್ಲಿರುವ ಕರ್ಕ್ಯುಮಿನ್ ಸಹಾಯ ಮಾಡುತ್ತದೆ. ಅರಿಶಿನದಿಂದ ಯಾವುದೇ ಸೈಡ್ ಎಫೆಕ್ಟ್ಸ್ (Side effects) ಆಗುವುದಿಲ್ಲ. ಹಾಗಾಗಿಯೇ ಅರಿಶಿನವನ್ನು ಟಿಬಿಗೆ ಚಿಕಿತ್ಸೆ ನೀಡಲು ಬಳಸಬಹುದು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ.
ಇದನ್ನೂ ಓದಿ : Bathing Mistakes: ಸ್ನಾನ ಮಾಡುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನ ಮಾಡಬೇಡಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.