Never Mix These Things With Alcohol: ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ,  ಆದರೆ ಇದೀಗ ಅದರಲ್ಲಿ ಹೊಸ ಟ್ರೆಂಡ್ ಬಂದಿದೆ, ಈ ಟ್ರೆಂಡ್ ನಲ್ಲಿ ಮದ್ಯವನ್ನು ಸೋಡಾ ಮತ್ತು ತಂಪು ಪಾನೀಯಗಳೊಂದಿಗೆ ಬೆರೆಸಲಾಗುತ್ತದೆ. ಈ ರೀತಿ ಸೋಡಾ ಅಥವಾ ತಂಪು ಪಾನೀಯಗಳೊಂದಿಗೆ ಆಲ್ಕೋಹಾಲ್ ಕುಡಿಯುವುದರಿಂದ ದೇಹಕ್ಕೆ ಹೆಚ್ಚು ಹಾನಿ ಉಂಟಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಇದು ಏಕೆ ಸಂಭವಿಸುತ್ತದೆ ಮತ್ತು ಹಾಗೆ ಮಾಡುವುದರಿಂದ ಆಗುವ ಅನಾನುಕೂಲಗಳು ಯಾವುವು ಎಂಬುದರ ಕುರಿತು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಜನರು ಸೋಡಾದೊಂದಿಗೆ ಆಲ್ಕೋಹಾಲ್ ಅನ್ನು ಏಕೆ ಸೇವಿಸುತ್ತಾರೆ?
ಹೆಚ್ಚಿನ ಜನರು ಸೋಡಾದೊಂದಿಗೆ ಆಲ್ಕೋಹಾಲ್ ಅನ್ನು ಸೇವಿಸುತ್ತಾರೆ. ಏಕೆಂದರೆ ಅದು ತಕ್ಷಣವೇ ರಕ್ತದೊಂದಿಗೆ ಬೆರೆಯುತ್ತದೆ ಮತ್ತು ತಕ್ಷಣವೇ ವ್ಯಕ್ತಿಗೆ ಮತ್ತೇರುತ್ತದೆ. ಸೋಡಾ ಇಲ್ಲದೆ ಆಲ್ಕೋಹಾಲ್ ಕುಡಿಯುವುದನ್ನು ಹಲವರು ಯೋಚನೆ ಕೂಡ ಮಾಡುವುದಿಲ್ಲ. ಆದರೆ ಈ ರೀತಿ ಸೋಡಾದೊಂದಿಗೆ ಆಲ್ಕೋಹಾಲ್ ಕುಡಿಯುವುದರಿಂದ ಉಂಟಾಗುವ ಹಾನಿಯನ್ನು ಪರಿಗಣಿಸುವುದು ಬಹಳ ಮುಖ್ಯ, ಈ ರೀತಿ ಮಾಡುವುದರಿಂದಾಗುವ ಅಡ್ಡಪರಿಣಾಮಗಳನ್ನು ತಿಳಿದುಕೊಳ್ಳೋಣ.


ಇದನ್ನೂ ಓದಿ-Vegan Tea Benefits: ಹೃದಯ ಆರೋಗ್ಯ ರಕ್ಷಣೆಗೆ ವೇಗಾನ್ ಟೀ ಸೇವಿಸಿ, ಇಲ್ಲಿದೆ ತಯಾರಿಸುವ ವಿಧಾನ


ಸೋಡಾದೊಂದಿಗೆ ಅಲ್ಕೋಹಾಲ್ ಸೇವನೆ
ಆಲ್ಕೋಹಾಲ್ ಜೊತೆ ಸೋಡಾ ಬೆರೆಸಿ ಕುಡಿಯುವುದರಿಂದ ಕಾರ್ಬನ್ ಡೈಆಕ್ಸೈಡ್ ನಮ್ಮ ದೇಹಕ್ಕೆ ಹೋಗುತ್ತದೆ ಮತ್ತು ನಂತರ ಅದು ರಕ್ತದಲ್ಲಿ ಬೆರೆತು ಅಮಲೇರಿದ ಭಾವನೆ ನೀಡುತ್ತದೆ. ಸೋಡಾದಲ್ಲಿ ಫಾಸ್ಪರಿಕ್ ಆಮ್ಲವು ಕಂಡುಬರುತ್ತದೆ, ಇದು ನಮ್ಮ ದೇಹದಿಂದ ಕ್ಯಾಲ್ಸಿಯಂ ಅನ್ನು ಕಡಿಮೆ ಮಾಡುತ್ತದೆ. ಈ ಕಾರಣದಿಂದಾಗಿ ಮೂಳೆಗಳು ದುರ್ಬಲವಾಗುತ್ತವೆ ಮತ್ತು ಆರಂಭಿಕ ಮುರಿತಗಳಿಗೆ ಕಾರಣವಾಗುತ್ತದೆ.


ಇದನ್ನೂ ಓದಿ-Corn Silk: ಮೆಕ್ಕೆ ಜೋಳದ ಜುಟ್ಟಿನಲ್ಲಡಗಿದೆ ಆರೋಗ್ಯದ ಗುಟ್ಟು


ಆಲ್ಕೋಹಾಲ್ ನಲ್ಲಿ ತಂಪು ಪಾನೀಯಗಳನ್ನು ಬೆರೆಸಿ ಸೇವಿಸುವುದು
ಮತ್ತೊಂದೆಡೆ, ಆಲ್ಕೋಹಾಲ್ನೊಂದಿಗೆ ತಂಪು ಪಾನೀಯಗಳನ್ನು ಸೇವಿಸುವುದರಿಂದ ಸಕ್ಕರೆಯ ಪ್ರಮಾಣವು ಸಾಮಾನ್ಯ ಕೋಲ್ಡ್ ಡ್ರಿಂಕ್ ಸೇವನೆಗಿಂತ ತುಂಬಾ ಹೆಚ್ಚಾಗುತ್ತದೆ, ಇದಲ್ಲದೆ, ತಂಪು ಪಾನೀಯಗಳಲ್ಲಿ ಕೆಫೀನ್ ಕಂಡುಬರುತ್ತದೆ, ಇದು ದೇಹವನ್ನು ಸಕ್ರಿಯವಾಗಿರಿಸುತ್ತದೆ, ಆದರೆ ಮದ್ಯಪಾನವು ದೇಹದಲ್ಲಿ ಆಲಸ್ಯ ಮತ್ತು ಸುಸ್ತಿಯನ್ನುಂಟು ಮಾಡುತ್ತದೆ. ಎರಡನ್ನೂ ಒಟ್ಟಿಗೆ ಕುಡಿಯುವುದು ಹಾನಿಕಾರಕ. ಇದನ್ನು ಮಾಡುವ ವ್ಯಕ್ತಿಯು ನಿರ್ಜಲೀಕರಣದಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.