ಬೆಂಗಳೂರು : ಜನರು ತಮ್ಮ ದೇಹದ ತೂಕವನ್ನು ಕಾಪಾಡಿಕೊಳ್ಳಲು ಹಲವಾರು ಮಾರ್ಗಗಳನ್ನು ಅನುಸರಿಸುತ್ತಾರೆ. ಇದಕ್ಕಾಗಿ  ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸುತ್ತಾರೆ. ತೂಕ ಇಳಿಸಿಕೊಳ್ಳಲು ಡಯಟ್ ಮಾಡುತ್ತಾರೆ. ಆದರೂ ಅನೇಕ ಸಂದರ್ಭಗಳಲ್ಲಿ, ಇವುಗಳು ಯಾವುದೇ  ಪರಿಣಾಮ ಬೀರುವುದಿಲ್ಲ. ಹೀಗಾದಾಗ ನಮ್ಮ ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ತರುವ ಮೂಲಕ ದೇಹದ ತೂಕವನ್ನು ಕಡಿಮೆ ಮಾಡಬಹುದು. 


COMMERCIAL BREAK
SCROLL TO CONTINUE READING

ತೂಕ ಇಳಿಸಿಕೊಳ್ಳಲು ಏನು ತಿನ್ನುತ್ತೇವೆ ಎಂಬುದಷ್ಟೇ ಮುಖ್ಯವಲ್ಲ. ಯಾವಾಗಾ ತಿನ್ನುತ್ತೇವೆ ಎನ್ನುವುದು ಕೂಡಾ ಮುಖ್ಯ. ಸರಿಯಾದ ಸಮಯದಲ್ಲಿ ಸರಿಯಾದ ಆಹಾರವನ್ನು ಸೇವಿಸುವುದು ಬಹಳ ಅಗತ್ಯವಾಗಿರುತ್ತದೆ. ಹೀಗಾದಾಗ ದೇಹದ ಹಸಿವೂ ಹೆಚ್ಚುವುದಿಲ್ಲ. ಇದರ ಮೂಲಕ ನಮ್ಮ ದೇಹದ ತೂಕವನ್ನೂ ಕಡಿಮೆ ಮಾಡಿಕೊಳ್ಳಬಹುದು. ಬೆಳಗಿನ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಸೇವಿಸುವ ಸಮಯ, ಪ್ರಮಾಣ ಮತ್ತು ವಿಧಾನಗಳು ನಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತವೆ. 


ಇದನ್ನೂ ಓದಿ : Health Tips: ದಿನಕ್ಕೆ ಎಷ್ಟು ಬಾರಿ ಮೂತ್ರ ಮಾಡುವುದು ಸರಿ?


ಭೋಜನಕ್ಕೆ ಸೂಕ್ತ ಸಮಯ :  
ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ತೂಕ ಹೆಚ್ಚಿಸುವ ಕೃತಕ ಪಾನೀಯಗಳು ಮತ್ತು ಸಿಹಿತಿಂಡಿಗಳ ಬದಲಿಗೆ ಆರೋಗ್ಯಕರ ಆಹಾರಗಳನ್ನು ಬಳಸಿ. ಹೆಚ್ಚು ಪೌಷ್ಟಿಕಾಂಶದ ಆಹಾರಗಳಿಗೆ ಒಟ್ಟು ನೀಡಿ. ಇಷ್ಟೇ ಅಲ್ಲ, ನೀವು ದಿನಕ್ಕೆ ಎಷ್ಟು ಕ್ಯಾಲೊರಿಗಳನ್ನು ಸೇವಿಸುತ್ತೀರಿ ಎನುವುದನ್ನು ಕೂಡಾ ತಿಳಿದುಕೊಂಡಿರಿ. ಇದೆಲ್ಲದರ ಜೊತೆಗೆ ಊಟದ ಸಮಯ ಯಾವಾಗ ಎನ್ನುವುದು ಕೂಡಾ ಬಹಳ ಮುಖ್ಯ ಪಾತ್ರ ವಹಿಸುತ್ತದೆ. 


ತೂಕ ನಷ್ಟದ ಪ್ರಮುಖ ಅಂಶವೆಂದರೆ, ಎಷ್ಟು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತೇವೆ ಎನ್ನುವುದಷ್ಟೇ ಮುಖ್ಯ ಎನ್ನುವುದು ಹಲವರ ಅಭಿಪ್ರಾಯ. ಆದರೆ,  ವೈಜ್ಞಾನಿಕ ಅಧ್ಯಯನಗಳು  ಇನ್ನು ಅನೇಕ ಅಂಶಗಳನ್ನು ಬಹಿರಂಗಪಡಿಸಿವೆ. ಇದರಲ್ಲಿ ಯಾವ ವಸ್ತುವನ್ನು ಯಾವ ಸಮಯದಲ್ಲಿ ತಿಂದರೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಕೂಡಾ ವಿವರಿಸಲಾಗಿದೆ. ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ರಾತ್ರಿಯ ಊಟವನ್ನು ಯಾವ ಸಮಯಕ್ಕೆ ತಿನ್ನಬೇಕು ಎನ್ನುವುದರ ಬಗ್ಗೆಯೂ ಹೇಳಲಾಗಿದೆ. 


ಇದನ್ನೂ ಓದಿ : ಈ ಮರದ ಸಿಪ್ಪೆಯ ಕಷಾಯ ಕುಡಿದರೆ ಸೊಂಟದ ಸುತ್ತಲಿನ ಬೊಜ್ಜು ವಾರದಲ್ಲಿ ಇಳಿಕೆಯಾಗುತ್ತೆ!


ರಾತ್ರಿಯ ಊಟಕ್ಕೆ ಸರಿಯಾದ ಸಮಯ ಯಾವುದು? :
ಬ್ರಿಟಿಷ್ ಜರ್ನಲ್ ಆಫ್ ನ್ಯೂಟ್ರಿಷನ್‌ನ ಅಧ್ಯಯನವು ಯಶಸ್ವಿಯಾಗಿ ತೂಕ ನಷ್ಟ ಮಾಡಬೇಕಾದರೆ ರಾತ್ರಿ 7 ರಿಂದ 7:30 ರ ನಡುವೆ ಊಟವನ್ನು ಮುಗಿಸಬೇಕು ಎಂದು ಹೇಳಿದೆ. ರಾತ್ರಿ 7 ಅಥವಾ 7:30 ಕ್ಕೆ ರಾತ್ರಿಯ ಊಟವನ್ನು ಸೇವಿಸುವುದು ತೂಕ ಇಳಿಸಿಕೊಳ್ಳಲು ತುಂಬಾ ಸಹಾಯಕವಾಗಿದೆ ಎನ್ನುವುದನ್ನು ಸಾಬೀತುಪಡಿಸಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.