ಲಂಡನ್: ಮನೆಯೇ ಮೊದಲ ಪಾಠಶಾಲೆ. ಚಿಕ್ಕಂದಿನಿಂದಲೇ ಮಕ್ಕಳ ಅಧ್ಯಯನಕ್ಕೆ ಮನೆಯಲ್ಲಿ ಪೂರಕ  ವಾತಾವರಣವಿದ್ದರೆ ಮಕ್ಕಳ ಮುಂದಿನ ಜೀವನ ಉಜ್ವಲವಾಗಿರುತ್ತದೆ. ಶೈಕ್ಷಣಿಕವಾಗಿ ಮಕ್ಕಳು ಉತ್ತಮ ಸಾಧನೆ ಮಾಡಲು ಮನೆ ಕಲಿಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಸಂಶೋಧನೆಯಿಂದ ಬಹಿರಂಗವಾಗಿದೆ. 


COMMERCIAL BREAK
SCROLL TO CONTINUE READING

'ಸ್ಕೂಲ್ ಎಫೆಕ್ಟೀವ್‌ನೆಸ್ ಮತ್ತು ಸ್ಕೂಲ್ ಇಂಪ್ರೂವ್‌ಮೆಂಟ್'(ಶಾಲೆಯ ಪರಿಣಾಮಕಾರಿತ್ವ ಮತ್ತು ಶಾಲಾ ಸುಧಾರಣೆ) ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಯಾವ ಮಕ್ಕಳ ಪೋಷಕರು, ಮಕ್ಕಳು ಶಾಲೆಗೆ ಹೋಗುವ ಮೊದಲು ಅವರಿಗೆ ಓದಿಸುವುದು ಮತ್ತು ಅವರೊಂದಿಗೆ ಪುಸ್ತಕಗಳ ಬಗ್ಗೆ ಮಾತನಾಡುವ ಕೆಲಸವನ್ನು ಮಾಡುತ್ತಾರೆಯೋ, ಅಂತಹವರ ಮಕ್ಕಳು  12 ವಯಸ್ಸಿನಲ್ಲೇ ಗಣಿತದ ವಿಷಯದಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತಾರೆ ಎನ್ನಲಾಗಿದೆ.


ಬಾಂಬರ್ಗ್ ರಿಸರ್ಚ್ ವಿಶ್ವವಿದ್ಯಾಲಯದ ಪ್ರಧಾನ ಲೇಖಕ ಸೈಮನ್ ಲೆಹ್ರ್ಲ್, "ನಮ್ಮ ಫಲಿತಾಂಶಗಳು ಸಾಕ್ಷರತೆಗಾಗಿ ಮಾತ್ರವಲ್ಲದೆ ಸಂಖ್ಯಾಶಾಸ್ತ್ರದಲ್ಲೂ ಮಕ್ಕಳನ್ನು ಪುಸ್ತಕಗಳಿಗೆ ಒಡ್ಡುವ ಮಹತ್ವವನ್ನು ಒತ್ತಿಹೇಳುತ್ತವೆ" ಎಂದು ಹೇಳಿದರು. "ಪ್ರಾಥಮಿಕ ಭಾಷಾ ಕೌಶಲ್ಯಗಳು ಮಗುವಿನ ಓದುವಿಕೆಯನ್ನು ಸುಧಾರಿಸುವುದಲ್ಲದೆ, ಅವರ ಗಣಿತದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ" ಎಂದು ಅವರು ತಿಳಿಸಿದ್ದಾರೆ.


ಈ ಸಂಶೋಧನೆಯಲ್ಲಿ, ಮೂರು ವರ್ಷದಿಂದ ಮಾಧ್ಯಮಿಕ ಶಾಲೆಯವರೆಗಿನ 229 ಜರ್ಮನ್ ಮಕ್ಕಳನ್ನು ಸಂಶೋಧಕರು ಅಧ್ಯಯನ ಮಾಡಿದರು. ಸಂಶೋಧನೆ ಸಂದರ್ಭದಲ್ಲಿ ಮೂರು ವರ್ಷದ ಪ್ರಿಸ್ಕೂಲ್‌ನಲ್ಲಿ (ವಯಸ್ಸು 3-5) ಮಕ್ಕಳ ಸಾಕ್ಷರತೆ ಮತ್ತು ಸಂಖ್ಯಾತ್ಮಕ ಕೌಶಲ್ಯಗಳನ್ನು ಪರೀಕ್ಷಿಸಿದರು ಮತ್ತು 12 ಅಥವಾ 13 ವರ್ಷದ ನಂತರ ಎರಡನೇ ಬಾರಿಗೆ ಈ ಪರೀಕ್ಷೆ ಕೈಗೊಳ್ಳಲಾಯಿತು.


ಮನೆಯವರ(ಪೋಷಕರ) ಪ್ರೋತ್ಸಾಹದೊಂದಿಗೆ ನಿತ್ಯ ಮನೆಯಲ್ಲಿ ಪಾಠ ಕಲಿಯುವ ಮಕ್ಕಳು ತಮ್ಮ ಪ್ರಿಸ್ಕೂಲ್ ವರ್ಷಗಳಲ್ಲಿ ಸಾಕ್ಷರತೆ, ಭಾಷೆ ಮತ್ತು ಅಂಕಗಣಿತದ ಕೌಶಲ್ಯಗಳನ್ನು ಪಡೆದರು ಎಂಬುದನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ. ಇದರ ಪರಿಣಾಮವಾಗಿ, ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಸಾಧ್ಯವಾಗಿದ್ದು, ಗಣಿತದಲ್ಲೂ ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಯಿತು ಎಂದು ಸಂಶೋಧನೆ ತಿಳಿಸಿದೆ.