ತೂಕ ಹೆಚ್ಚಳ ಸಮಸ್ಯೆಯಿಂದ ನೀವೂ ತೊಂದರೆಗೀಡಾಗಿದ್ದೀರಾ? ಈ ಡ್ರಿಂಕ್ ಟ್ರೈ ಮಾಡಿ ನೋಡಿ!
Weight Loss Tips: ಜೀರಿಗೆ ಹಾಗೂ ಸೊಂಫು ನೀರು ಸೇವನೆಯಿಂದ ತೂಕ ಕಳೆದುಕೊಳ್ಳಲು ಸಹಾಯ ಸಿಗುತ್ತದೆ. ಜೀರಿಗೆ ಹಾಗೂ ಸೊಂಫು ನೀರು ಒಂದು ನೈಸರ್ಗಿಕ ನಿರ್ವಿಷಕಾರಕ ಪಾನೀಯದಂತೆ ಕೆಲಸ ಮಾಡುತ್ತದೆ (Lifestyle News In Kannada)
ಬೆಂಗಳೂರು: ನಿಮ್ಮ ತೂಕ ಕೂಡ ಹೆಚ್ಚಾಗಿದ್ದು, ಹಲವು ಪ್ರಯತ್ನಗಳ ಬಳಿಕವೂ ಕೂಡ ಅದನ್ನು ಇಳಿಕೆ ಮಾಡಲು ನಿಮಗೆ ಯಶಸ್ಸು ಸಿಗುತ್ತಿಲ್ಲ ಎಂದಾದರೆ, ನೀವು ನಿತ್ಯ ಬೆಳಗ್ಗೆ ಎದ್ದು ಖಾಲಿ ಹೊಟ್ಟೆ ಜೀರಿಗೆ-ಸೊಂಫು ನೀರನ್ನು ಸೇವಿಸಬಹುದು. ಇದನ್ನು ಸೇವಿಸುವುದರಿಂದ ದೇಹಕ್ಕೆ ಅದ್ಭುತ ಪ್ರಯೋಜನಗಳು ಲಭಿಸುತ್ತವೆ (Lifestyle News In Kannada). ಜೀರಿಗೆ ಮತ್ತು ಸೊಂಫು ನೀರನ್ನು ಕುಡಿಯುವುದರಿಂದ, ದೇಹದ ಚಯಾಪಚ ಕ್ರಿಯೆ ಹೆಚ್ಚಾಗುತ್ತದೆ. ಇದಲ್ಲದೆ, ಜೀರ್ಣಕ್ರಿಯೆ ಸರಿಯಾಗಿರುತ್ತದೆ. ವಾಸ್ತವದಲ್ಲಿ ಜೀರಿಗೆ ಮತ್ತು ಸೊಂಫು ನೀರು ಒಂದು ನೈಸರ್ಗಿಕ ನಿರ್ವಿಷಕಾರಕ ಪಾನೀಯದಂತೆ ಕಾರ್ಯನಿರ್ವಹಿಸುತ್ತದೆ. ಇದು ದೇಹದಲ್ಲಿ ಸಂಗ್ರಹವಾಗಿರುವ ವಿಷಕಾರಿ ಪದಾರ್ಥಗಳನ್ನು ದೇಹದಿಂದ ಹೊರಹಾಕುತ್ತದೆ. ಜೀರಿಗೆ ಮತ್ತು ಸೊಂಫು ನೀರನ್ನು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಜೀರಿಗೆ ಮತ್ತು ಸೊಂಫು ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು
ತೂಕ ನಷ್ಟಕ್ಕೆ ಜೀರಿಗೆ ಮತ್ತು ಸೊಂಫು ನೀರು ತುಂಬಾ ಪ್ರಯೋಜನಕಾರಿಯಾಗಿದೆ. ತೂಕ ಇಳಿಕೆಗೆ ಚಯಾಪಚಯ ಕ್ರಿಯೆ ತುಂಬಾ ಮುಖ್ಯವಾಗಿರುತ್ತದೆ. ದೇಹದ ಚಯಾಪಚಯ ಕ್ರಿಯೆ ಹೆಚ್ಚಾದಾಗ, ಇದು ಕ್ಯಾಲೊರಿಗಳನ್ನು ಸುಡುವಲ್ಲಿ ಸಹಾಯ ಮಾಡುತ್ತದೆ. ನೀವು ಯಾವುದೇ ದೈಹಿಕ ಚಟುವಟಿಕೆಯನ್ನು ಮಾಡಿದರೆ, ಕ್ಯಾಲೊರಿಗಳು ವೇಗವಾಗಿ ಸುಡುತ್ತವೆ. ಇದರಿಂದ ಅದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ.
ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ
ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ಮತ್ತು ಸೊಂಫು ನೀರನ್ನು ಕುಡಿಯುತ್ತಿದ್ದರೆ, ನಿಮ್ಮ ದೇಹದಿಂದ ತ್ಯಾಜ್ಯ ವಸ್ತುಗಳು ಹೊರಹೋಗುತ್ತವೆ. ಇದು ನಿಮ್ಮ ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ.
ಇಯನ್ನೂ ಓದಿ-ದೈಹಿಕ ಸಂಬಂಧ ಬೆಳೆಸಿದ ಬಳಿಕ ಖಾಸಗಿ ಅಂಗದಿಂದ ರಕ್ತ ಬಂದರೆ ಈ 4 ಕಾಯಿಲೆಗಳ ಸಂಕೇತವಾಗಿರಬಹುದು ಎಚ್ಚರ !
ಜೀರ್ಣಕ್ರಿಯೆ ಉತ್ತಮವಾಗುತ್ತದೆ
ಜೀರಿಗೆ ಮತ್ತು ಸೊಂಫು ನೀರನ್ನು ಕುಡಿಯುವುದರಿಂದ ಜೀರ್ಣಕ್ರಿಯೆಯೂ ಉತ್ತಮಗೊಳ್ಳುತ್ತದೆ. ಇದು ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ದೇಹಕ್ಕೆ ಬೇಕಾದ ಪೋಷಕಾಂಶಗಳು ಆಹಾರದಿಂದ ಸಿಗುತ್ತದೆ. ಇದರಿಂದಾಗಿ ದೇಹದಲ್ಲಿ ಶಕ್ತಿ ಉಳಿಯುತ್ತದೆ.
ಇದನ್ನೂ ಓದಿ-ಪುರುಷರ ವೈವಾಹಿಕ ಜೀವನದ ಸಮಸ್ಯೆಗೆ ಪರಿಹಾರ ಅಡಗಿದೆ ಈ ವಿಶೇಷ ಜೇನಿನಲ್ಲಿ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.