ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಯುವಕರಲ್ಲಿ ಮದ್ಯಪಾನ ಮಾಡುವ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ. ಮದ್ಯಪಾನ ಮಾಡುವವರಿಗೆ ಒಂದು ನೆಪ ಮಾತ್ರ ಸಾಕು.  ಏಕೆಂದರೆ ಇತ್ತೀಚಿನ ದಿನಗಳಲ್ಲಿ ಅದು ಸಾಮಾನ್ಯ ಸಂಗತಿಯಾಗಿದೆ. ಮಾರುಕಟ್ಟೆಯಲ್ಲಿ ಹಲವಾರು ವಿಧದ ಮದ್ಯಗಳು ಲಭ್ಯವಿದ್ದು, ಪ್ರತಿಯೊಬ್ಬರೂ ತಮ್ಮ ಆಯ್ಕೆಯ ಪ್ರಕಾರ ಮದ್ಯವನ್ನು ಕುಡಿಯಲು ಇಷ್ಟಪಡುತ್ತಾರೆ. ಹೌಸ್ ಪಾರ್ಟಿ, ಬಾರ್, ಪಬ್ ಅಥವಾ ಹೋಟೆಲ್‌ಗಳಲ್ಲಿ ಆಲ್ಕೋಹಾಲ್ ಜೊತೆಗೆ ಅನೇಕ ಆಹಾರ ಪದಾರ್ಥಗಳನ್ನು ಸಹ ನೀಡಲಾಗುತ್ತದೆ ಎಂಬ ಅಂಶವನ್ನು ನೀವೂ ಕೂಡ ಗಮನಿಸಿರಬಹುದು. ಜನರೂ ಕೂಡ ಅವುಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಜನರು ಸಾಮಾನ್ಯವಾಗಿ ಆಲ್ಕೋಹಾಲ್ ಜೊತೆಗೆ ಆಹಾರ ಪದಾರ್ಥಗಳನ್ನು ಆರ್ಡರ್ ಮಾಡುತ್ತಾರೆ. ಆದರೆ ಆಲ್ಕೋಹಾಲ್ ಜೊತೆಗೆ ಅಥವಾ ಮದ್ಯಪಾನ ಮಾಡಿದ ನಂತರ ತಿನ್ನಬಾರದ ಕೆಲವು ಆಹಾರ ಪದಾರ್ಥಗಳಿವೆ ಎಂದು ನಿಮಗೆ ತಿಳಿದಿದೆಯೇ. ಈ ಕಾರಣದಿಂದಾಗಿ ನೀವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು.


COMMERCIAL BREAK
SCROLL TO CONTINUE READING

ಆಲ್ಕೋಹಾಲ್ ನಂತರ ಡೈರಿ ಉತ್ಪನ್ನಗಳು ಅಥವಾ ಹಾಲು ಕುಡಿಯಬೇಡಿ
ಮದ್ಯ ಸೇವಿಸಿದ ನಂತರ ಹಾಲು ಕುಡಿಯಬಾರದು. ಮದ್ಯಪಾನ ಮಾಡಿದ ನಂತರ ಏನು ಮಾಡಬೇಕು ಅಥವಾ ಬೇಡವೇ ಎಂಬ ಇಂತಹ ಹಲವು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಉದ್ಭವಿಸಿರಬಹುದು.  ನೀವೂ ಕೂಡ ಮದ್ಯಪಾನ ಮಾಡುತ್ತಿದ್ದರೆ ಮೊದಲನೆಯ ಮಾತು ಎಂದರೆ ಅದು ಆರೋಗ್ಯಕ್ಕೆ ಹಾನಿಕಾರಕ, ನಂತರ ನೀವು ಏನು ತಿನ್ನಬೇಕು ಮತ್ತು ನಂತರ ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.


ಮದ್ಯ ಸೇವಿಸಿದ ನಂತರ ನಾವು ಗೋಡಂಬಿ ಅಥವಾ ಕಡಲೆಕಾಳುಗಳನ್ನು ತಿನ್ನಬಹುದೇ?
ಸಾಮಾನ್ಯವಾಗಿ ಜನರು ಮದ್ಯಪಾನ ಮಾಡುವಾಗ ಕಡಲೆಕಾಳು ಅಥವಾ ಗೋಡಂಬಿ ತಿನ್ನಲು ಇಷ್ಟಪಡುತ್ತಾರೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂಬುದು ಇಲ್ಲಿ ಉಲ್ಲೇಖನೀಯ. ಮದ್ಯಪಾನ ಮಾಡಿದ ತಕ್ಷಣ ಅಥವಾ ಮದ್ಯಪಾನ ಮಾಡುವಾಗ ಈ ಎರಡನ್ನು ತಿನ್ನಬಾರದು. ಇವುಗಳ ಸೇವನೆ ನಿಷೇಧಿಸಲಾಗಿದೆ. ಏಕೆಂದರೆ ಇದು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ.


ಸೋಡಾ ಅಥವಾ ತಂಪು ಪಾನೀಯ ಅಪಾಯಕಾರಿ
ನೀವು ಸೋಡಾ ಅಥವಾ ತಂಪು ಪಾನೀಯಗಳೊಂದಿಗೆ ಆಲ್ಕೋಹಾಲ್ ಅನ್ನು ಸೇವಿಸಿದರೆ, ಇವೆಲ್ಲವೂ ನಿಮ್ಮ ದೇಹಕ್ಕೆ ಹಾನಿಕಾರಕವಾಗಿದೆ. ಅದಕ್ಕಾಗಿಯೇ ಇವುಗಳ ಬದಲಿಗೆ ಆಲ್ಕೋಹಾಲ್ ಮಿಶ್ರಿತ ನೀರು ಅಥವಾ ಐಸ್ ಅನ್ನು ಕುಡಿಯಬಹುದು.


ಮದ್ಯಪಾನ ಮಾಡುವಾಗ ಚಿಪ್ಸ್ ಅಥವಾ ಕ್ರಿಸ್ಪ್ಸ್ ತಿನ್ನಬೇಡಿ
ಮದ್ಯಪಾನ ಮಾಡುವಾಗ ಅಥವಾ ನಂತರ ಕ್ರಿಸ್ಪ್ಸ್ ಅಥವಾ ಚಿಪ್ಸ್ ತಿನ್ನಬೇಡಿ. ಅಥವಾ ಹುರಿದ ಮೊಮೊಸ್ ಅಥವಾ ಚಿಕನ್ ತಿನ್ನುವುದನ್ನು ತಪ್ಪಿಸಿ. ಏಕೆಂದರೆ ಅವು ನಿಮ್ಮ ಹೊಟ್ಟೆಯಲ್ಲಿ ತೊಂದರೆಗಳನ್ನು ಉಂಟುಮಾಡಬಹುದು.


ಇದನ್ನೂ ಓದಿ-ಈ ಒಣ ಹಣ್ಣಿನ ನೀರು ಸೇವನೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ!


ಮದ್ಯ ಸೇವಿಸಿದ ನಂತರ ಸಿಹಿತಿಂಡಿಗಳನ್ನು ಸೇವಿಸಬೇಡಿ
ಸಿಹಿಯು ನಶೆಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಆಲ್ಕೊಹಾಲ್ ಸೇವಿಸಿದ ನಂತರ ಸಿಹಿತಿಂಡಿಗಳನ್ನು ತಿನ್ನದಿರಲು ಯತ್ನಿಸಿ. ಏಕೆಂದರೆ ಮದ್ಯದ ನಂತರ ಸಿಹಿ ಆಹಾರವು ವಿಷಕ್ಕೆ ಸಮಾನ ಎಂದರೆ ತಪ್ಪಾಗಲಾರದು.


ಇದನ್ನೂ ಓದಿ-ನಿಂಬೆ ಹಣ್ಣಿನಲ್ಲಡಗಿದೆ ನಿಮ್ಮ ಪ್ರತಿಯೊಂದು ಸಮಸ್ಯೆಯ ಸಮಾಧಾನ!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.