ನವದೆಹಲಿ: ಹೆಚ್ಚಿನ ಜನರು ಮಧ್ಯಾಹ್ನ ಮಲಗುವುದರಲ್ಲಿ ಯಾವುದೇ ಹಾನಿ ಇಲ್ಲ ಎಂದು ಭಾವಿಸುತ್ತಾರೆ. ಆದರೆ, ಇತ್ತೀಚಿನ ಸಂಶೋಧನೆಯ ಪ್ರಕಾರ ಈ ಸಮಯದಲ್ಲಿ ಒಂದು ಗಂಟೆಗಿಂತ ಹೆಚ್ಚು ಕಾಲ ಮಲಗುವುದು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಮತ್ತು ಇದು ಸಾವಿನ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ ಎಂದು ಹೇಳಿದೆ.  ESC ಕಾಂಗ್ರೆಸ್ 2020 ದ ಡಿಜಿಟಲ್ ಎಕ್ಸ್‌ಪೀರಿಯೆನ್ಸ್‌ನಲ್ಲಿ ಪ್ರಕಟವಾದ ಈ ಸಂಶೋಧನೆಯು ಮಧ್ಯಾಹ್ನ ನಿದ್ದೆ ಮಾಡುವುದು ಹಾಗೂ ಹೃದ್ರೋಗ ಮತ್ತು ಸಾವಿನ ಅಪಾಯದ ನಡುವಿನ ಸಂಬಂಧವನ್ನು ವಿವರಿಸಿದೆ.


COMMERCIAL BREAK
SCROLL TO CONTINUE READING

ಈ ವಿಶ್ಲೇಷಣೆಯಲ್ಲಿ 20 ಕ್ಕೂ ಹೆಚ್ಚು ಅಧ್ಯಯನಗಳಲ್ಲಿ ಒಟ್ಟು 3,13,651 ಜನರು ಭಾಗವಹಿಸಿದ್ದರು, ಇವರಲ್ಲಿ ಸುಮಾರು ಶೇ.39 ರಷ್ಟು  ಜನರು ಮಧ್ಯಾಹ್ನ ಮಲಗಿದ್ದಾರೆ. ಚೀನಾದ ಗ್ವಾಂಗಝೋವು ವಿಶ್ವವಿದ್ಯಾಲಯದಲ್ಲಿ ನಡೆದ ಈ  ಸಂಶೋಧನೆಯ ಲೇಖಕ ಡಾ. ಝೆ. ಪಾನ್ ಹೇಳುವ ಪ್ರಕಾರ, "ಹಗಲಿನ ಮಲಗುವುದು ವಿಶ್ವಾದ್ಯಂತ  ಪ್ರಪಂಚದಾದ್ಯಂತ ಸಾಮಾನ್ಯವಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸಲಾಗುತ್ತದೆ" ಎಂದು ಹೇಳಿದ್ದಾರೆ.


 "ಚಿಕ್ಕನಿದ್ರೆ ತೆಗೆದುಕೊಳ್ಳುವುದರಿಂದ ಕೆಲಸದ ಸಾಮರ್ಥ್ಯ ಸುಧಾರಿಸುತ್ತದೆ ಮತ್ತು ನಿದ್ರೆಯ ಕೊರತೆಯಿಂದ ಉಂಟಾಗುವ ನಷ್ಟವನ್ನು ಸಹ ಸರಿದೂಗಿಸುತ್ತದೆ. ಸಾಮಾನ್ಯವಾಗಿ ಈ ಎರಡೂ ವಿಚಾರಗಳನ್ನು ನಾವು ನಮ್ಮ ಸಂಶೋಧನೆಯಲ್ಲಿ ಪ್ರಶ್ನಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.


ನಿದ್ರೆಗೆ ಬಾರದವರಿಗೆ ಹೋಲಿಸಿದರೆ 60 ನಿಮಿಷಗಳಿಗಿಂತ ಹೆಚ್ಚು ಕಾಲ ಮಲಗುವುದು ಹೃದ್ರೋಗ ಮತ್ತು ಸಾವಿನ ಅಪಾಯವನ್ನು ಶೇಕಡಾ 30 ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧನೆ ಹೇಳಿದೆ. ರಾತ್ರಿಯಲ್ಲಿ ಮಲಗುವ ಬಗ್ಗೆ ನೀವು ಮಾತನಾಡಿದರೆ, ಪ್ರತಿ ರಾತ್ರಿ ಆರು ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡುವವರಲ್ಲಿ ಈ ಅಪಾಯ ಹೆಚ್ಚು.


ಆದರೆ, ಮಧ್ಯಾಹ್ನ 60 ನಿಮಿಷಗಳಿಗಿಂತ ಕಡಿಮೆ ಕಾಲ ಮಲಗುವುದು ಹೃದ್ರೋಗಕ್ಕೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ. ಡಾ. ಪಾನ್ ಹೇಳುವ ಪ್ರಕಾರ,  "ರಾತ್ರಿಯ ಹೊತ್ತು ಶರೀರಕ್ಕೆ ಬೇಕಾಗುವಷ್ಟು ನಿದ್ರೆ ಮಾಡದವರು ಒಂದು ವೇಳೆ ಮಧ್ಯಾಹ್ನ 30 ರಿಂದ 45 ನಿಮಿಷ ಮಲಗಿದರೆ, ಅವರ ಹೃದಯದ ಆರೋಗ್ಯ ಸುಧಾರಿಸುತ್ತದೆ ಎನ್ನುತ್ತಾರೆ.