ನವದೆಹಲಿ: Oxygen Level - ದೇಶಾದ್ಯಂತ ಕೊರೊನಾ ಸೋಂಕಿತರ (Corona Cases In India) ಸಂಖ್ಯೆ ಮೊದಲಿಗಿಂತಲೂ ಅಪಾಯಕಾರಿ ಸಾಬೀತಾಗುತ್ತಿವೆ. ಕೊರೊನಾ ವೈರಸ್ ನ ಹೊಸ ರೂಪಾಂತರಿ ನೇರವಾಗಿ ಪುಪ್ಪುಸದ ಮೇಲೆ ಹಲ್ಲೆ ನಡೆಸುತ್ತಿದೆ ಹಾಗೂ ರೋಗಿಗಳ ಆಕ್ಸಿಜನ್ ಮಟ್ಟ ಭಾರಿ ಕೆಳಕ್ಕೆ ಜಾರುತ್ತಿದೆ. ಈ ಬಾರಿಯ ಕೊರೊನಾ ನೇರವಾಗಿ ಪುಪ್ಪುಸ ಹಾಗೂ ಶ್ವಾಸ ಪ್ರಕ್ರಿಯೆಯನ್ನು ಪ್ರಭಾವಿತಗೊಳಿಸುತ್ತಿದೆ. ಹೀಗಾಗಿ ಶರೀರದಲ್ಲಿ ಅತ್ಯಧಿಕ ಆಕ್ಸಿಜನ್ ಅವಶ್ಯಕತೆ ಬೀಳುತ್ತಿದೆ.


COMMERCIAL BREAK
SCROLL TO CONTINUE READING

ಕೊವಿಡ್-19 (Coronavirus) ಕಾರಣ ಶರೀರದಲ್ಲಿನ ಆಕ್ಸಿಜನ್ ಕೊರತೆಯ ಗಂಭೀರ ಪರಿಣಾಮಗಳು ಮುಂದೆ ಬರುತ್ತಿವೆ. ಹೀಗಾಗಿ ಕೊರೊನಾ ರೋಗಿ ಹಾಗೂ ಅವರ ಶುಶ್ರೂಷೆಯಲ್ಲಿ ತೊಡಗಿದವರು ರೋಗಿಯ ಶರೀರದಲ್ಲಿ ಆಕ್ಸಿಜನ್ ಕೊರತೆ ಎದುರಾಗದಂತೆ ಕಾಳಜಿವಹಿಸಬೇಕು. ಕೊವಿಡ್-19 ಲಕ್ಷಣಗಳು ಗಂಭೀರವಾಗಿರದ ರೋಗಿಗಳೂ ಕೂಡ ತಮ್ಮ ಶರೀರದಲ್ಲಿ ಆಕ್ಸಿಜನ್ ಮಟ್ಟ ಸರಿಯಾಗಿಡುವ ಪರಿಸ್ಥಿತಿ ಇದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಹಾಗೂ ಸೆಂಟರ್ ಫಾರ್ ದಿಸೀಜ್ ಕಂಟ್ರೋಲ್ ಅಂಡ್ ಪ್ರಿವೆಂಶನ್ ಪ್ರಕಾರ ಓರ್ವ ಆರೋಗ್ಯವಂತ ಹಾಗೂ ಸಾಮಾನ್ಯ ವ್ಯಕ್ತಿಯಲ್ಲಿ ಆಕ್ಸಿಜನ್ ಸ್ಯಾಚ್ಯುರೇಶನ್ ಶೇ. 95 ರಿಂದ ಶೇ.100 ರ ಮಧ್ಯೆ ಇರಬೇಕು. 


ದೇಹದಲ್ಲಿನ ರಕ್ತದಲ್ಲಿ ಇರುವ ಹಿಮೋಗ್ಲೋಬಿನ್ (Hemoglobin) ಆಮ್ಲಜನಕದ ವಾಹಕವಾಗಿದೆ. ಇದು ಇಡೀ ದೇಹಕ್ಕೆ ಆಮ್ಲಜನಕವನ್ನು ಪೂರೈಸುತ್ತದೆ. ದೇಹದಲ್ಲಿ ಆಮ್ಲಜನಕದ ಕೊರತೆಯು ನಮ್ಮ ರೋಗನಿರೋಧಕ ಶಕ್ತಿಯನ್ನು ಪರಿಣಾಮ ಬೀರುತ್ತದೆ. ಆಮ್ಲಜನಕದ ಕೊರತೆಯು ಆಯಾಸ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ.ಆಕ್ಸಿಜನ್ ಕೊರತೆಯಿಂದಾಗಿ ದೇಹದಲ್ಲಿ ರಕ್ತ ಪರಿಚಲನೆ ನಿಧಾನವಾಗುತ್ತದೆ. ಇದು ಮಾತ್ರವಲ್ಲ, ಆಮ್ಲಜನಕದ ಕೊರತೆಯು ಮೆದುಳಿನ ರಕ್ತಸ್ರಾವ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಮಧುಮೇಹಿಗಳಲ್ಲಿ, ಆಮ್ಲಜನಕದ ಕೊರತೆಯಿಂದಾಗಿ, ರಕ್ತದಲ್ಲಿನ ಸಕ್ಕರೆ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ, ಇದು ಮಾರಕವಾಗಿದೆ. ಆಮ್ಲಜನಕದ ಕೊರತೆಯು ಥೈರಾಯ್ಡ್ ಹಾರ್ಮೋನುಗಳ ಸಮತೋಲನವನ್ನು ಇನ್ನಷ್ಟು ಹದಗೆಡಿಸುತ್ತದೆ.


ದೇಹದಲ್ಲಿನ ಆಕ್ಸಿಜನ್ ಕೊರತೆಯ ಈ ಲಕ್ಷಣಗಳನ್ನೂ ಗಮನದಲ್ಲಿಡಿ 
>> ಉಸಿರಾಟದಲ್ಲಿ ತೊಂದರೆ 
>>ಉಸಿರುಗಟ್ಟುವಿಕೆ.
>>ಆಯಾಸವಾಗುವುದು
>>ಭ್ರಮೆಯ ಸ್ಥಿತಿ
>>ತುಟಿ ಹಾಗೂ ಮುಖದ ಬಣ್ಣ ನೀಲಿ ಬಣ್ಣಕ್ಕೆ ತಿರುಗುವುದು
>> ಎದೆಯಲ್ಲಿ ನೋವು ಅಥವಾ ಉರಿತ
>> ನಡೆದಾಡುವಾಗ ಅಥವಾ ಮೇಲೇಳಲು ತೊಂದರೆ 


ಇದನ್ನೂ ಓದಿ-Dates Benefits: ಪ್ರತಿದಿನ 2 ಖರ್ಜೂರ ಸೇವಿಸಿ ದೇಹದಲ್ಲಿನ ರಕ್ತದ ಕೊರತೆಯನ್ನ ದೂರ ಮಾಡಿ!


ದೇಹದಲ್ಲಿನ ಆಕ್ಸಿಜನ್ ಮಟ್ಟವನ್ನು ಹೇಗೆ ಸುಧಾರಿಸಬೇಕು
ಯಾವುದೇ ಓರ್ವ ವ್ಯಕ್ತಿಯ ಶರೀರದಲ್ಲಿ ಆಕ್ಸಿಜನ್ ಮಟ್ಟ ಕಡಿಮೆಯಾದರೆ, ಆ ರೋಗಿಗೆ ಆಸ್ಪತ್ರೆಗಳಲ್ಲಿ ಹೊಟ್ಟೆ ಕೆಳಗೆ ಮಾಡಿ ಮಲಗಲು ಹೇಳಲಾಗುತ್ತದೆ. ಇದನ್ನು ಪ್ರಾನ್ ಪೊಸಿಶನಿಂಗ್ ಎಂದು ಕರೆಯಲಾಗುತ್ತದೆ. ಈ ರೀತಿ ಮಲಗುವುದರಿಂದ ದೇಹದಲ್ಲಿನ ಆಕ್ಸಿಜನ್ ಮಟ್ಟ ಕೂಡಲೇ ಸುಧಾರಣೆಯಾಗುತ್ತದೆ. ಈ ಪೊಸಿಶನಿಂಗ್ ನಲ್ಲಿ ರೋಗಿಯ ಹೊಟ್ಟೆ ಬೆಡ್ ಕಡೆಗೆ ಹಾಗೂ ಬೆನ್ನು ಮೇಲ್ಭಾಗಕ್ಕೆ ಇರುತ್ತದೆ. ಇದರಿಂದ ಪುಪ್ಪುಸ ವೇಗವಾಗಿ ಕೆಲಸ ಮಾಡುತ್ತದೆ ಹಾಗೂ ಉಸಿರಾಟ ಸುಲಲಿತವಾಗುತ್ತದೆ.


ಇದನ್ನೂ ಓದಿ- ಸ್ಟ್ರಾಂಗ್ ಇಮ್ಯೂನಿಟಿಗಾಗಿ ಗ್ರೀನ್ ಟೀ.! ಕರೋನಾ ಕಾಲಕ್ಕೆ ಸೂಪರ್ ಡ್ರಿಂಕ್


- ಆಕ್ಸಿಜನ್ ಕೊರತೆ ಎನಿಸುತ್ತಿದ್ದರೆ, ಹೊಟ್ಟೆ ಕೆಳಗೆ ಮಾಡಿ ಮಲಗಿ
- ತಲೆ, ಸೊಂಟ, ತೊಡೆ ಹಾಗೂ ಕಾಲುಗಳ ಕೆಳಗೆ ದಿಂಬುಗಳನ್ನಿಡಿ.
- ನಿಮ್ಮ ತಲೆ ಆರಾಮದಾಯಕ ಸ್ಥಿತಿಯಲ್ಲಿದೆ ಎಂಬುದನ್ನು ಸುನಿಶ್ಚಿತಗೊಳಿಸಿ
- ಒಂದರಿಂದ ಎರಡು ಗಂಟೆಗಳಿಗೆ ನಿಮ್ಮ ಮಲಗುವ ಭಂಗಿ ಬದಲಾಯಿಸಿ. 
- ಕಾಲ ಕಾಲಕ್ಕೆ ಶರೀರದ ಆಕ್ಸಿಜನ್ ಮಟ್ಟ ಪರಿಶೀಲಿಸಿ.


ಇದನ್ನೂ ಓದಿ- Immunity Booster: ಇಲಾಚಿ ಹಣ್ಣಿನಲ್ಲಿದೆ ರೋಗನಿರೋಧಕ ಶಕ್ತಿ: ಇಲ್ಲಿದೆ ಅದರ 5 ಪ್ರಯೋಜನಗಳು!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.