ನವದೆಹಲಿ: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಮನೆಗಳಲ್ಲಿ ಏರ್ ಪ್ಯೂರಿಫೈಯರ್ ಸಸ್ಯಗಳನ್ನು ನೆಡುತ್ತಿದ್ದಾರೆ. ಈ ಸಸ್ಯಗಳಿಗೆ ಹೆಚ್ಚು ನೀರು ಮತ್ತು ಗಾಳಿಯ ಅವಶ್ಯಕತೆ ಇರುವುದಿಲ್ಲ. ಬಹುಶಃ ಅವು ನೋಡಲು ಕೂಡ ಹೆಚ್ಚು ಸುಂದರವಾಗಿರುತ್ತದೆ. ಅವು ಹೆಚ್ಚು ದುಬಾರಿ ಕೂಡ ಆಯಿರುವುದಿಲ್ಲ. ಇತ್ತೀಚಿಗೆ ಮನೆಗಳಲ್ಲಿ ಮತ್ತು ಕಚೇರಿಗಳಲ್ಲಿ ಬೊನ್ಸಾಯ್ ಸಸ್ಯಗಳು ಹೆಚ್ಚಾಗಿ ಕಂಡು ಬರುತ್ತವೆ. ಸಹಜವಾಗಿ, ಇವು ಆಕರ್ಷಕವಾಗಿ ಕಾಣುತ್ತವೆ, ಆದರೆ ಅವುಗಳನ್ನು ಮನೆಯಲ್ಲಿ ಇರಿಸುವುದರಿಂದ ಜೀವನ ಕೂಡ ಕುಬ್ಜವಾಗಿರುವ ಅನುಭವ ಹೆಚ್ಹಾಗಿ ಬರುತ್ತದೆ.


COMMERCIAL BREAK
SCROLL TO CONTINUE READING

1. ತುಳಸಿ
ದೊಡ್ಡ ಮಡಕೆಗಳಲ್ಲಿ ವಿದೇಶಿ ಸಸ್ಯಗಳಿಗೆ ಬದಲಾಗಿ ತುಳಸಿಯನ್ನು ಇರಿಸಿ. ಅದನ್ನು ಎಂದಿಗೂ ಸಣ್ಣ ಪಾತ್ರೆಯಲ್ಲಿ ಇಡಬೇಡಿ. ಏಕೆಂದರೆ ಹಾಗೆ ಮಾಡಿದರೆ , ಅದು ಎರಡು-ನಾಲ್ಕು ತಿಂಗಳಲ್ಲಿ ಒಣಗುತ್ತದೆ. ವಾಸ್ತವವಾಗಿ, ಅದರ ಮೂಲವು ಬೆಳೆಯಲು ಸಾಕಷ್ಟು ಸ್ಥಳಾವಕಾಶ ಬೇಕಾಗುತ್ತದೆ. ತುಳಸಿಗೆ ಎರಡು ದಿನಕ್ಕೊಮ್ಮೆ ನೀರು ನೀಡಿ. ನೀವು ಪ್ರತಿದಿನ ನೀರು ನೀಡಲು ಬಯಸಿದರೆ, ಸ್ವಲ್ಪ ಮಾತ್ರ ನೀಡಿ. ನೀವು ಇದಕ್ಕೆ ಬೀಜಗಳನ್ನು ಸೇರಿಸಿದರೆ, ಅದು ಚೆನ್ನಾಗಿ ಬೆಳೆಯುತ್ತದೆ ಮತ್ತು ಒಂದು ವೇಳೆ ನಿಮ್ಮ ಸಸ್ಯವು ಒಣಗಬಾರದು ಎಂದು ಬಯಸಿದರೆ ಅದರ ಬೀಜಗಳನ್ನು ಹೊರತೆಗೆಯಿರಿ. ತುಳಸಿ ಸಸ್ಯವು ಮನೆಯ ವಾತಾವರಣವನ್ನು ಸಂಪೂರ್ಣವಾಗಿ ಶುದ್ಧ ಮತ್ತು ರೋಗಾಣುಗಳಿಂದ ಮುಕ್ತವಾಗಿರಿಸುತ್ತದೆ. ಯಾವಾಗಲೂ ತುಳಸಿಯನ್ನು ಪೂರ್ವಕ್ಕೆ ಇರಿಸಿ.


2. ಬ್ರಾಹ್ಮಿ 
ಬ್ರಾಹ್ಮಿ ಒಂದು ಸಸ್ಯವಾಗಿದ್ದು ಅದು ಮನೆಯಲ್ಲಿರಬೇಕು. ಇದಕ್ಕೂ ಕೂಡ  ತುಳಸಿಯಂತೆಯೇ ಹೆಚ್ಚು ಕಾಂಪೋಸ್ಟ್ ನೀರಿನ ಅಗತ್ಯವೂ ಇಲ್ಲ. ಮನಸ್ಸಿನ ಆರೋಗ್ಯಕ್ಕೆ ಇದು ಬಹಳ ಮುಖ್ಯ. ಇದು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ. ಭೂಮಿ ಅಸ್ತಿತ್ವಕ್ಕೆ ಬಂದಾಗಿನಿಂದ ಈ ಸಸ್ಯ ಕೂಡ ಇದೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಲೆಕ್ಕವಿಲ್ಲದಷ್ಟು ಗುಣಗಳಿವೆ. ಇದು ಮಕ್ಕಳಲ್ಲಿ ಹೆಚ್ಚುತ್ತಿರುವ ಅತಿಸೂಕ್ಷ್ಮತೆಯನ್ನು(ಹೈಪರ್ ಸೆನ್ಸಿಟಿವಿಟಿ) ಕಡಿಮೆ ಮಾಡುತ್ತದೆ ಮತ್ತು ನರಮಂಡಲಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದು ಸುಖ ನಿದ್ರೆಗೆ ಕಾರಣವಾಗುವ ಮೂಲಕ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಇದು ವಯಸ್ಸನ್ನು ಹೆಚ್ಚಿಸುತ್ತದೆ. ಮತ್ತು ಇದರಿಂದ ನೀವು ಕಷಾಯ ಕೂಡ ತಯಾರಿಸಬಹುದು. ಮನೆಯಲ್ಲಿ ಚಿಕ್ಕ ಚಿಕ್ಕ ಅಲಂಕಾರಿಕ ಸಸ್ಯಗಳನ್ನು ನೆಡುವುದರ ಬದಲು ಬ್ರಾಹ್ಮಿಸಸ್ಯ ನೆಡುವುದು ಉತ್ತಮ.


3. ಬಿಲ್ವಪತ್ರಿಯ ಮರ
ಬಿಲ್ವದ ಎಲೆಗಳು, ಹಣ್ಣುಗಳು ಮತ್ತು ಬೇರುಗಳು ಎಲ್ಲವೂ ಸದ್ಗುಣಶೀಲವಾಗಿವೆ. ನೀವು ಬಳ್ಳಿಯನ್ನು ನೆಟ್ಟಾಗ ಅದು ಇಡೀ ಭೂಮಿಯನ್ನು ತಂಪಾಗಿರಿಸುತ್ತದೆ. ಇದನ್ನು ನಡುವುದರ ಮೂಲಕ  ಶಿವನ ಅನುಗ್ರಹ ಯಾವಾಗಲೂ ನಿಮ್ಮ ಮನೆಯಲ್ಲಿ ಉಳಿಯುತ್ತದೆ. ಒಂದು ಬಿಲ್ವ ಮರವು ವರ್ಷವಿಡೀ 56 ಟನ್ ಆಮ್ಲಜನಕವನ್ನು ಉತ್ಪಾದಿಸುತ್ತದೆ. ಇದುಔಷಧಿಯ ಗುಣಗಳನ್ನು ಸಹ ಹೊಂದಿದೆ.


4. ಸೀತಾ ಅಶೋಕ ಮರ
ಸೀತಾ ಅಶೋಕ ಮರವನ್ನು ಖಿನ್ನತೆ-ಶಮನಕಾರಿ ಎಂದು ಪರಿಗಣಿಸಲಾಗಿದೆ. ಈ ಮರಗಳು ಅಶೋಕ ವಾಟಿಕೆಯಲ್ಲಿದ್ದ ಕಾರಣ ಸೀತಾ ಮಾನೆ ಶ್ರೀಲಂಕಾದಲ್ಲಿ ಇಷ್ಟು ದಿನ ಬದುಕುಳಿಯಲು ಸಾಧ್ಯವಾಯಿತು ಎಂದು ಹೇಳಲಾಗುತ್ತದೆ. ಇದು ದೊಡ್ಡ ಕಿತ್ತಳೆ ಬಣ್ಣದ ಹೂಗಳನ್ನು ಹೊಂದಿರುತ್ತದೆ. ಇದರ ನೆರಳು ತುಂಬಾ ಒಳ್ಳೆಯದು ಮತ್ತು ಅದು ಸಕಾರಾತ್ಮಕ ಶಕ್ತಿಯನ್ನು ಹರಿವಿಗೆ ಕಾರಣವಾಗುತ್ತದೆ. ಸ್ತ್ರೀರೋಗ ಶಾಸ್ತ್ರದಲ್ಲಿ, ವಿಶೇಷವಾಗಿ ಮೂತ್ರದ ಸೋಂಕಿನಲ್ಲಿ ಇದು ಉಪಯುಕ್ತವಾಗಿದೆ.