ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಹವಾಮಾನ ನಿರಂತರವಾಗಿ ಬದಲಾಗುತ್ತಿದೆ. ಕೆಲವೊಮ್ಮೆ ಮಳೆಯೊಂದಿಗೆ ತಂಪಾದ ವಾತಾವರಣ ಇದ್ದರೆ, ಎಷ್ಟೋ ಬಾರಿ ಉಷ್ಣತೆಯು ಜನರನ್ನು ಕಾಡುತ್ತಿದೆ. ದೆಹಲಿ ಸೇರಿದಂತೆ ದೇಶದ ಹಲವೆಡೆ ಬದಲಾಗುತ್ತಿರುವ ಹವಾಮಾನದಿಂದಾಗಿ, ಜನರು ಹೆಚ್ಚಾಗಿ ಡೆಂಗ್ಯೂ, ಮಲೇರಿಯಾ ಮುಂತಾದ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಈ ಋತುವಿನಲ್ಲಿ ಸೊಳ್ಳೆಗಳು ಹೆಚ್ಚಾಗುತ್ತವೆ. ಸೊಳ್ಳೆಗಳು ಕಚ್ಚುವುದರಿಂದ ಮಲೇರಿಯಾ ಹರಡುತ್ತದೆ. ಮಲೇರಿಯಾ ಸೊಳ್ಳೆ ಶಬ್ದ ಮಾಡುವುದಿಲ್ಲ. 


COMMERCIAL BREAK
SCROLL TO CONTINUE READING

ಬದಲಾಗುತ್ತಿರುವ ವಾತಾವರಣದಿಂದ ನಿಮ್ಮ ಆರೋಗ್ಯದಲ್ಲಿ ಯಾವುದೇ ತೊಂದರೆ ಆಗಬಾರದೆಂದು ನೀವು ಬಯಸುವಿರಾ. ಹಾಗಾದರೆ ಇಂದು ನಾವು ನಿಮಗೆ ಮಲೇರಿಯಾದಿಂದ ನಿಮ್ಮನ್ನು ಕಾಪಾಡಿಕೊಳ್ಳುವ ಬಗ್ಗೆ ಕೆಲವು ಪರಿಹಾರ ನೀಡಲಿದ್ದೇವೆ.


ಮಲೇರಿಯಾದಿಂದ ರಕ್ಷಿಸಿಕೊಳ್ಳಲು ಇಲ್ಲದೆ ಕೆಲವು ಪರಿಹಾರ:


* ಮನೆಯಲ್ಲಿ ಸಂಗ್ರಹಿಸಿದ ನೀರಿನಲ್ಲಿ ಮಲೇರಿಯಾ ಸೊಳ್ಳೆಗಳು ಬೆಳೆಯುತ್ತವೆ. ಆದ್ದರಿಂದ ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರನ್ನು ಸಂಗ್ರಹಿಸಲು ಅನುಮತಿಸದಿರುವುದು ಬಹಳ ಮುಖ್ಯ. ಸೊಳ್ಳೆಯ ಸಂತಾನೋತ್ಪತ್ತಿಗೆ ಕನಿಷ್ಠ 7-12 ದಿನಗಳು ಬೇಕು. ಹಾಗಾಗಿ ಯಾವುದೇ ತೊಟ್ಟಿ, ಪಾತ್ರೆಗಳಲ್ಲಿ ಸಂಗ್ರಹಿಸಲಾದ ನೀರನ್ನು 4-5 ದಿನಗಳಿಗೊಮ್ಮೆ ಖಾಲಿ ಮಾಡಿ ಅದನ್ನು ಸ್ವಚ್ಚಗೊಳಿಸಿ.


* ನೀರಿನ ತೊಟ್ಟಿ ಅಥವಾ ನೀರಿನ ಟ್ಯಾಂಕ್‌ಗಳನ್ನು ಸರಿಯಾಗಿ ಮುಚ್ಚದಿದ್ದರೆ ಸೊಳ್ಳೆಗಳು ಅದರಲ್ಲಿ ಮೊಟ್ಟೆಗಳನ್ನು ಇಡಬಹುದು. 


* ಮೇಲ್ಛಾವಣಿಯಲ್ಲಿ ಪಕ್ಷಿಗಳಿಗಾಗಿ ಇರಿಸಲಾಗಿರುವ ನೀರಿನ ಪಾತ್ರೆಯನ್ನು ಪ್ರತಿ ವಾರ ಸ್ವಚ್ಛಗೊಳಿಸದಿದ್ದರೆ, ಸೊಳ್ಳೆಗಳು ಅವುಗಳಲ್ಲಿ ಕೂಡ ಮೊಟ್ಟೆಗಳನ್ನು ಇಡಬಹುದು.


* ರಾತ್ರಿಯಲ್ಲಿ ಸೊಳ್ಳೆ ಪರದೆ ಬಳಸುವುದರಿಂದ ಮಲೇರಿಯಾವನ್ನು ತಡೆಯಲು ಸಾಧ್ಯವಿಲ್ಲ, ಏಕೆಂದರೆ ಈ ಸೊಳ್ಳೆ ಹಗಲಿನಲ್ಲಿ ಕಚ್ಚುತ್ತವೆ.


* ಪೂರ್ಣ ತೋಳುಗಳ ಶರ್ಟ್ ಮತ್ತು ಪ್ಯಾಂಟ್ ಧರಿಸುವುದರಿಂದ ಹಗಲಿನಲ್ಲಿ ಸೊಳ್ಳೆ ಕಡಿತವನ್ನು ತಡೆಯಬಹುದು. ಇವುಗಳು ಹಗಲಿನಲ್ಲಿ ನಿಮಗೆ ಸೊಳ್ಳೆ ನಿವಾರಕವಾಗಿ ಸಹಾಯ ಮಾಡುತ್ತವೆ.


ಇವೆಲ್ಲದರ ಜೊತೆಗೆ ನಮ್ಮ ಮನೆ, ಕೇರಿ, ಊರನ್ನು ಸದಾ ಸ್ವಚ್ಚವಾಗಿ ಇರಿಸಿಕೊಳ್ಳುವುದರ ಮೂಲಕ ಮಲೇರಿಯಾದಂತಹ ರೋಗಗಳನ್ನು ತಡೆಯಬಹುದು.