Mango Peel Tea Benefits: ಬೇಸಿಗೆ ಬಂತೆಂದರ ಹಣ್ಣುಗಳ ರಾಜ ಮಾವಿನ ಹಣ್ಣಿನದ್ದೇ ದರಬಾರು. ಮಾವಿನ ಹಣ್ಣು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಮಾವಿನ ಹಣ್ಣಷ್ಟೇಯಲ್ಲ ಅದರ ಸಿಪ್ಪೆಯೂ ಕೂಡ ಆರೋಗ್ಯಕ್ಕೆ ಅತ್ಯುತ್ತಮ ಎಂದು ಪರಿಗಣಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ಮಾವಿನಹಣ್ಣಿನಲ್ಲಿ ಪಾಲಿಫಿನಾಲ್‌ಗಳು , ಫ್ಲೇವನಾಯ್ಡ್‌ಗಳು ಮತ್ತು ವಿಟಮಿನ್ ಸಿಯಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದ್ದರೆ ಅದರ ಸಿಪ್ಪೆಯೂ ಕೂಡ ಹಲವು ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ನೀವು ಮಾವಿನ ಹಣ್ಣನ್ನು (Mango) ಸವಿದು ಅದರ ಸಿಪ್ಪೆ ಎಸೆಯುತ್ತಿದ್ದರೆ, ಅದರ ಪ್ರಯೋಜನಗಳನ್ನೊಮ್ಮೆ ತಿಳಿಯಿರಿ. ಖಂಡಿತವಾಗಿಯೂ ಮುಂದಿನ ಬಾರಿ ಮಾವಿನ ಹಣ್ಣಿನ ಸಿಪ್ಪೆ (Mango Peel) ಎಸೆಯುವ ಮುನ್ನ ಯೋಚಿಸುತ್ತೀರಿ. 


[[{"fid":"399436","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಮಾವಿನ ಹಣ್ಣಿನ ಸಿಪ್ಪೆ ಮಾವಿನ ಹಣ್ಣಿನಷ್ಟು ರುಚಿಕರವಲ್ಲ. ಆದರೆ, ಮಾವಿನ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಚಹಾ ಮಧುಮೇಹವನ್ನು ನಿಯಂತ್ರಿಸಲು (Diabetes Control) ತುಂಬಾ ಪ್ರಯೋಜನಕಾರಿ ಎಂದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ. 


ಇದನ್ನೂ ಓದಿ- World Liver Day 2024: ಯಕೃತ್ ಆರೋಗ್ಯಕ್ಕಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಪಾನೀಯಗಳು


ವಾಸ್ತವವಾಗಿ, ಮಾವಿನ ಹಣ್ಣಿನಂತೆ ಅದರ ಸಿಪ್ಪೆಯೂ ಕೂಡ ಪಾಲಿಫಿನಾಲ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ವಿಟಮಿನ್ ಸಿ ಯಂತಹ ವಿವಿಧ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಇದು ದೇಹದಲ್ಲಿನ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿ ಆಗಿದೆ. 


[[{"fid":"399437","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]][[{"fid":"399447","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"3":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"3"}}]]


ಅಧ್ಯಯನಗಳ ಪ್ರಕಾರ, ಮಾವಿನ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಚಹಾದಲ್ಲಿ (Mango Peel Tea)  ಮ್ಯಾಂಗಿಫೆರಿನ್ ಎಂಬ ಸಂಯುಕ್ತದ ಉಪಸ್ಥಿತಿಯಿಂದಾಗಿ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಸುಲಭವಾಗುತ್ತದೆ. ಅಷ್ಟೇ ಅಲ್ಲದೆ, ಇದು ಉತ್ತಮ ಇನ್ಸುಲಿನ್ ನಿರ್ವಹಣೆಗೂ ಕೂಡ ಪ್ರಯೋಜನಕಾರಿ ಆಗಿರುವುದರಿಂದ ಮಧುಮೇಹಿಗಳು ತಮ್ಮ ದೈನಂದಿನ ಆಹಾರದಲ್ಲಿ ಮಾವಿನ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಚಹಾ ಸೇವಿಸುವುದು ಉತ್ತಮ ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- Diabetes Diet: ಬೇಸಿಗೆಯಲ್ಲಿ ಬ್ಲಡ್ ಶುಗರ್ ನಿಯಂತ್ರಣಕ್ಕೆ ತಿನ್ನಲೇಬೇಕಾದ ಆಹಾರಗಳಿವು


ಸಮೃದ್ಧ ಫೈಬರ್: 
ಮಾವಿನ ಹಣ್ಣಿನ ಸಿಪ್ಪೆಯಲ್ಲಿ ಪೆಕ್ಟಿನ್ ನಂತಹ ಕರಗುವ ಫೈಬರ್ ಹೇರಳವಾಗಿ ಕಂಡುಬರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ರಕ್ತಪ್ರವಾಹಕ್ಕೆ ಹೀರಿಕೊಳ್ಳುವುದನ್ನು ನಿಧಾನಗೊಳಿಸುವ ಮೂಲಕ ಬ್ಲಡ್ ಶುಗರ್ ಅನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿದೆ. 


ಗ್ಲೈಸೆಮಿಕ್ ಸೂಚ್ಯಂಕ: 
ಗಮನಾರ್ಹವಾಗಿ, ಮಾವಿನ ಹಣ್ಣಿನ ಸಿಪ್ಪೆಯಿಂದ ತಯಾರಿಸಿದ ಚಹಾವು ಬೇರೆ ಸಿಹಿಯಾದ ಪಾನೀಯಗಳಿಗೆ ಹೋಲಿಸಿದರೆ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ. ಹಾಗಾಗಿ, ಇದರ ಸೇವನೆಯು ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಅತ್ಯುತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.