Marriage Benefit: ಅದ್ಯಾಕೋ ಏನೋ ನಮ್ಮ ನಡುವೆ "ಮದುವೆ" ಬಗ್ಗೆ ಬರೀ ನೆಗೆಟೀವ್ ಆದ ನೆರೇಟಿವ್ ತುಂಬಿಕೊಂಡುಬಿಟ್ಟಿದೆ. ಆದ್ರೆ ಇದು ಅಂತಹ ಸ್ಟೋರಿಯಲ್ಲ, ಈಗಾಗಲೇ ಮದುವೆ ಆಗಿರುವವರಿಗೆ, ಅಥವಾ ಮುಂದಕ್ಕೆ ಮದುವೆ ಆಗುವವರಿಗೆ ಸ್ಫೂರ್ತಿ ಕೊಡುವಂತಹ ಸುದ್ದಿ. ಮದುವೆ ಬಗ್ಗೆ ಹೊಸ ಅಧ್ಯಯನವೊಂದು ಏನನ್ನು ಹೇಳಿದೆ ಅಂತಾ ನೋಡೋಣ.


COMMERCIAL BREAK
SCROLL TO CONTINUE READING

ಮದುವೆ ಆಗಿ ಸಕಲ ಸುಖ ಅನುಭವಿಸುತ್ತಿರುವವರು ಕೂಡ ಮದುವೆ ಬಗ್ಗೆ ನಕಾರಾತ್ಮಕವಾಗಿ ಮಾತನಾಡುತ್ತಾರೆ. ಇದೇ ಕಾರಣಕ್ಕೆ ಇರಬಹುದು; ಇತ್ತೀಚಿಗೆ ಹುಡುಗ-ಹುಡುಗಿಯರು ಮದುವೆ ಬಗ್ಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಮದುವೆಯಾಗುವ ಬಗ್ಗೆ ಯುವಕ-ಯುವತಿಯರಲ್ಲಿ ನಿರಾಸಕ್ತಿ ಮೂಡುತ್ತಿದೆ. ಆದ್ರೆ ಇದು ಮಾತ್ರ ಮದುವೆ ಬಗ್ಗೆ ಸದಾಭಿಪ್ರಾಯ ಮೂಡಿಸುವ ಸುದ್ದಿ. ಇದನ್ನು ಓದಿದದ ಮೇಲಾದ್ರೂ ಮದುವೆ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಜೊತೆಗೆ ಇನ್ನೂ ಮದುವೆ ಆಗಿಲ್ಲದಿದ್ದರೆ ಶೀಘ್ರವೇ ಇನ್ವಿಟೇಷನ್ ಕಳಿಸೋಕೆ ರೆಡಿಯಾಗಬೇಕು.


ವಿಷಯ ಏನು ಅಂದ್ರೆ ಇತ್ತೀಚೆಗೆ ಒಂದು ಹೊಸ ಅಧ್ಯಯನವಾಗಿದೆ. ಅದು ಮನುಷ್ಯನನ್ನು ಕಾಡುವ ಖಿನ್ನತೆ ಎಂಬ ರೋಗದ ಬಗ್ಗೆ. ಅಧ್ಯಯನದ ಸಾರ ಏನು ಗೊತ್ತಾ? ಮದುವೆ ಆದವರ ಪೈಕಿ ಖಿನ್ನತೆಯ ರೋಗಕ್ಕೆ ತುತ್ತಾಗುವವರು ‘ಇಲ್ಲವೇ ಇಲ್ಲ’ ಎಂಬಷ್ಟು ವಿರಳ. ಏಕೆಂದರೆ ಖಿನ್ನತೆ ಶುರುವಾಗುವುದೇ ಒಂಟಿತನದಿಂದ. ಮದುವೆಯಿಂದ ಬೇರೆ ಏನು ಸಿಗುತ್ತೋ-ಬಿಡುತ್ತೋ ಇಡೀ ಜೀವನದುದ್ದಕ್ಕೂ ಜೊತೆಜೊತೆಯಾಗಿ ಸಾಗುವ ಸಂಗಾತಿ ಸಿಗುತ್ತಾರೆ. ಅಲ್ಲಿಗೆ ಮದುವೆಯ ನಂತರ ಒಂಟಿತನ ಕಾಡುತ್ತದೆ ಎನ್ನುವುದು ಅತ್ಯಂತ ಕಡಿಮೆ ಸಾಧ್ಯತೆ. ಹಾಗಾಗಿ ಮದುವೆಯಾದವರ ಬಳಿ ಖಿನ್ನತೆ ಎಂಬ ರೋಗ ಸುಳಿಯದು ಎಂದು ಅಧ್ಯಯನ ತಿಳಿಸಿದೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


ಮದುವೆಯಿಂದ ಖಿನ್ನತೆ ದೂರವಾಗುತ್ತದೆ ಎಂಬುದಕ್ಕೆ ನಿಮಗೆ ಇನ್ನೂ ಹೆಚ್ಚಿನ ಸ್ಪಷ್ಟಿಕರಣ ಬೇಕೇ, ಹಾಗಾದ್ರೆ ‘ಸೈಕಾಲಜಿ ಟುಡೆ ಎಂಬ ಜರ್ನಲ್’ನಲ್ಲಿ ಪ್ರಕಟವಾಗಿರುವ ‘ಮದುವೆ ಮತ್ತು ಖಿನ್ನತೆ’ (Marriage and Depression) ಎಂಬ ಅಧ್ಯಯನ ವರದಿಯನ್ನು ಓದಿ. ‘ಮದುವೆ ಮತ್ತು ಖಿನ್ನತೆ’ ಎಂಬ ಈ ಅಧ್ಯಯನ ವರದಿಯನ್ನು ಅಮೇರಿಕ, ಬ್ರಿಟನ್, ಮೆಕ್ಸಿಕೋ, ಚೀನಾ, ಇಂಡೋನೇಷಿಯಾ, ಐರ್ಲೆಂಡ್ ಮತ್ತು ಕೊರಿಯಾ ದೇಶಗಳಲ್ಲಿ ಸರಿ ಸುಮಾರು ಐದು ಕೋಟಿಗೂ ಹೆಚ್ಚು ಜನರನ್ನು ಸಂಪರ್ಕಿಸಿ ಅಭಿಪ್ರಾಯ ಪಡೆದು ರೂಪಿಸಲಾಗಿದೆ.


ಖಿನ್ನತೆಗೆ ಜಾರುವವರ ಪೈಕಿ ಪುರುಷರೇ ಜಾಸ್ತಿ!
‘ಮದುವೆ ಮತ್ತು ಖಿನ್ನತೆ’ ಎಂಬ ಈ ಅಧ್ಯಯನ ವರದಿಯಲ್ಲಿ ಪುರುಷರು ಮತ್ತು ಮಹಿಳೆಯರ ಪೈಕಿ ಯಾರು ಹೆಚ್ಚು ಖಿನ್ನತೆಗೆ ಒಳಗಾಗುತ್ತಾರೆ ಎಂಬ ಬಗ್ಗೆಯೂ ಹೇಳಲಾಗಿದೆ. ಮಹಿಳೆಯರಿಗೆ ಹೋಲಿಸಿಕೊಂಡರೆ ಒಂಟಿತನಕ್ಕೆ ಜಾರುವುದು ಮತ್ತು ಖಿನ್ನತೆಗೆ ಒಳಗಾಗುವುದು ಎರಡೂ ವಿಷಯದಲ್ಲಿ ಪುರುಷರೇ ಹೆಚ್ಚು ಎಂದು ಹೇಳಲಾಗಿದೆ. ಇದರ ಜೊತೆಗೆ ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿಕೊಂಡರೆ ಪೂರ್ವದ ದೇಶಗಳಲ್ಲಿ  ಒಂಟಿತನಕ್ಕೆ ಜಾರುವುದು ಮತ್ತು ಖಿನ್ನತೆಗೆ ಒಳಗಾಗುವವರ ಸಂಖ್ಯೆ ಕಡಿಮೆ ಇದೆ. 


ಪಾಶ್ಚಿಮಾತ್ಯ ದೇಶಗಳಲ್ಲಿ ಇತ್ತೀಚಿಗೆ ಪುರುಷರು ಮತ್ತು ಮಹಿಳೆಯರು ವಿವಾಹದ ಬಗ್ಗೆ ತೋರಿದ ನಿರಾಸಕ್ತಿ ಮತ್ತು ನಿರ್ಲಕ್ಷ್ಯದ ಕಾರಣಕ್ಕಾಗಿಯೇ ‘ಮದುವೆ ಮತ್ತು ಖಿನ್ನತೆ’ ಎಂಬ ಅಧ್ಯಯನ ಮಾಡಲಾಗಿದೆ. ಈ ಅಧ್ಯಯನ ವರದಿಯಲ್ಲಿ ಅವಿವಾಹಿತರು ವಿವಾಹಿತರಿಗಿಂತ ಹೆಚ್ಚು ಖಿನ್ನತೆಗೆ ಒಳಗಾಗುತ್ತಾರೆ ಎಂಬುದು ಬಹಳ ಸ್ಪಷ್ಟವಾಗಿ ತಿಳಿದುಬಂದಿದೆ. ಸಂಶೋಧನೆಯೇ ಮದುವೆ ಬಗ್ಗೆ ಇಷ್ಟು ಸಕಾರಾತ್ಮಕವಾಗಿ ಹೇಳಿರುವುದರಿಂದ ನಾವು-ನೀವು ಇನ್ನು ಮುಂದೆ ಮದುವೆ ಬಗ್ಗೆ ನೆಗೇಟಿವ್ ನರೇಟಿವ್ ಸೆಟ್ ಮಾಡಬಾರದಲ್ವಾ? ಮದುವೆ ಆಗಿರುವವರು ಮತ್ತು ಆಗುವವರು ಎಲ್ಲರಿಗೂ ಆಲ್ ದಿ ಬೆಸ್ಟ್…


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.