Medical Test for Girls before Marriage: ಸಾಮಾನ್ಯವಾಗಿ ಮದುವೆಗೂ ಮುನ್ನ ಕುಂಡಲಿ ಹೋಲಿಕೆಯ ಜೊತೆಗೆ ವಿದ್ಯಾಭ್ಯಾಸ, ನೌಕರಿ, ಮನೆ-ಕುಟುಂಬ ಹಾಗೂ ಆಸ್ತಿ-ಪಾಸ್ತಿಗಳ ಬಗ್ಗೆ ವಿಚಾರಿಸಲಾಗುತ್ತದೆ. ಆದರೆ, ಮದುವೆಗೂ ಮುನ್ನ ವೈದ್ಯಕೀಯ ಪರೀಕ್ಷೆಗಳನ್ನು ಕೂಡ ಮಾಡಿಸಬೇಕು ಎಂಬುದು ನಿಮಗೆ ತಿಳಿದಿದೆಯೇ? ಹೌದು, ವೈವಾಹಿಕ ಜೀವನ ಸುಖಮಯದಿಂದಿರಬೇಕು ಎಂದರೆ, ವಿವಾಹಕ್ಕೂ ಮುನ್ನ ಎಲ್ಲರೂ ಕೂಡ ಕೆಲ ಪರೀಕ್ಷೆಗಳನ್ನು ನಡೆಸಲೇಬೇಕು. ಮದುವೆಗೂ ಮುನ್ನ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಿಂದ ಆನುವಂಶಿಕ ಕಾಯಿಲೆಗಳು ಪತ್ತೆಯಾಗುತ್ತವೆ ಮತ್ತು ಸಮಯ ಇರುವಾಗಲೇ ಅವುಗಳ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬಹುದು. ಹಾಗಾದರೆ ಬನ್ನಿ ಮದುವೆಗೂ ಮುನ್ನ ಯಾವ ಯಾವ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ತಿಳಿದುಕೊಳ್ಳೋಣ ಬನ್ನಿ,

COMMERCIAL BREAK
SCROLL TO CONTINUE READING

1. ಕಂಪ್ಲೀಟ್ ಬ್ಲಡ್ ಕೌಂಟ್- ಯಾವುದೇ ಒಂದು ವ್ಯಕ್ತಿಯ ಮೆಡಿಕಲ್ ಸ್ಥಿತಿಯನ್ನು ತಿಳಿದುಕೊಳ್ಳಲು ಕಂಪ್ಲೀಟ್ ಬ್ಲಡ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಈ ಟೆಸ್ಟ್ ನಡೆಸುವ ಮೂಲಕ ಅನಿಮಿಯಾ, ಇನ್ಫೆಕ್ಷನ್, ಬ್ಲೀಡಿಂಗ್ ಡಿಸ್ಆರ್ಡರ್ ಅಥವಾ ಲ್ಯೂಕೊಮಿಯನಂತಹ ವಿಭಿನ್ನ ಕಾಯಿಲೆಗಳು ಪತ್ತೆಯಾಗುತ್ತವೆ.

2. ಬ್ಲಡ್ ಗ್ರೂಪ್ ಟೆಸ್ಟ್- ಬ್ಲಡ್ ಗ್ರೂಪ್ ಮತ್ತು ರಕ್ತದ ಗುಂಪನ್ನು ತಿಳಿದುಕೊಳ್ಳಲು ರಕ್ತದ ಗುಂಪು ಪರೀಕ್ಷೆಯನ್ನು ಮಾಡಲಾಗುತ್ತದೆ. ಈ ಪರೀಕ್ಷೆಯು ಮುಖ್ಯವಾಗಿದೆ. ಏಕೆಂದರೆ ಕೆಲವು ರಕ್ತ ಗುಂಪುಗಳು ಪರಸ್ಪರ ಹೊಂದಿಕೆಯಾಗುವುದಿಲ್ಲ ಮತ್ತು ಗರ್ಭಾವಸ್ಥೆಯಲ್ಲಿ ತೊಡಕುಗಳನ್ನು ಉಂಟುಮಾಡಬಹುದು.

3. ಫಲವತ್ತತೆ ಪರೀಕ್ಷೆ- ಹೆಚ್ಚಿನ ದಂಪತಿಗಳು ಮದುವೆಯ ನಂತರ ಮಕ್ಕಳನ್ನು ಹೊಂದಲು ಬಯಸುತ್ತಾರೆ, ಹೀಗಾಗಿ ನಿಮ್ಮ ದೇಹವು ಫಲವತ್ತಾಗಿದೆಯೇ ಮತ್ತು ಫಲವತ್ತತೆಗೆ ಸೂಕ್ತವಾಗಿದೆಯೇ ಎಂದು ಮೊದಲೇ ತಿಳಿದುಕೊಳ್ಳುವುದು ಉತ್ತಮ. ಆದ್ದರಿಂದ ಮದುವೆಗೂ ಮುನ್ನವೇ ಫಲವಂತಿಕೆ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು ಮತ್ತು ಸಮಸ್ಯೆಯಿದ್ದರೆ ಮುಂಚಿತವಾಗಿಯೇ ಚಿಕಿತ್ಸೆ ಪಡೆಯಬಹುದು.

4. ಜೆನೆಟಿಕ್ ಮೆಡಿಕಲ್ ಹಿಸ್ಟರಿ- ಮಧುಮೇಹ ಅಥವಾ ಹೃದ್ರೋಗಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿವೆ. ಆದ್ದರಿಂದ, ದಂಪತಿಗಳು ವಿವಾಹದ ಮೊದಲು ಪರಸ್ಪರರ ಕುಟುಂಬದ ವೈದ್ಯಕೀಯ ಇತಿಹಾಸವನ್ನು ತಿಳಿದುಕೊಳ್ಳುವುದು ಒಳ್ಳೆಯದು, ಏಕೆಂದರೆ ಇದು ಮಗುವಿನ ಮತ್ತು ದಂಪತಿಗಳ ಭವಿಷ್ಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

5. HIV ಮತ್ತು STD ಪರೀಕ್ಷೆ- HIV ಮತ್ತು ಇತರ ಲೈಂಗಿಕವಾಗಿ ಹರಡುವ ರೋಗಗಳು (STDs) ಸುಲಭವಾಗಿ ಇನ್ನೊಬ್ಬ ವ್ಯಕ್ತಿಗೆ ಹರಡುತ್ತವೆ. ಹೀಗಾಗಿ ನಿಮ್ಮ ಸಂಗಾತಿಯಲ್ಲಿ ಈ ರೀತಿಯ ಯಾವುದೇ ಸೋಂಕಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ತುಂಬಾ ಮುಖ್ಯ.

6. ಥಲಸ್ಸೆಮಿಯಾ ಪರೀಕ್ಷೆ- ಥಲಸ್ಸೆಮಿಯಾ ನಿಮ್ಮ ಭವಿಷ್ಯದ ಮಕ್ಕಳಲ್ಲಿ ಜನ್ಮ ದೋಷಗಳನ್ನು ಉಂಟುಮಾಡಬಹುದು. ಹೀಗಾಗಿ, ನೀವು ಮದುವೆಯಾಗುವ ಮೊದಲು ಥಲಸ್ಸೆಮಿಯಾ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.

7. ಮಾನಸಿಕ ಆರೋಗ್ಯ ಸ್ಥಿತಿ- ಸುಖಮಯ ವೈವಾಹಿಕ ಜೀವನಕ್ಕಾಗಿ ಸಂಗಾತಿಗಳಿಬ್ಬರೂ ಉತ್ತಮ ಮಾನಸಿಕ ಆರೋಗ್ಯವನ್ನು ಹೊಂದಿರುವುದು ತುಂಬಾ ಮುಖ್ಯ. ಕೆಲವು ಮಾನಸಿಕ ಆರೋಗ್ಯ ಪರಿಸ್ಥಿತಿಗಳು ಭವಿಷ್ಯದಲ್ಲಿ ಮಕ್ಕಳಲ್ಲಿಯೂ ಕೂಡ ಕಾಣಿಸಿಕೊಳ್ಳುತ್ತವೆ ಹೀಗಾಗಿ ಅವುಗಳ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳುವುದು ತುಂಬಾ ಮುಖ್ಯ.

8. ದೀರ್ಘಕಾಲದ ಕಾಯಿಲೆ ಪರೀಕ್ಷೆ- ಅಸ್ತಿತ್ವದಲ್ಲಿರುವ ಯಾವುದೇ ದೀರ್ಘಕಾಲದ ಕಾಯಿಲೆಯು ಗರ್ಭಾವಸ್ಥೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಮದುವೆಯಾಗುವ ದಂಪತಿಗಳು ತಮ್ಮ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ಸ್ಥಿತಿಯನ್ನು ಮುಂಚಿತವಾಗಿ ತಿಳಿದಿರಬೇಕು. ಆದ್ದರಿಂದ, ಈ ಪರೀಕ್ಷೆಯನ್ನು ನಡೆಸುವುದು ಅವಶ್ಯಕ.

9. ಜೀನೋಟೈಪ್ ಪರೀಕ್ಷೆಗಳು- ಪೋಷಕರ ಜೀನ್‌ಗಳನ್ನು ಮಕ್ಕಳಿಗೆ ವರ್ಗಾವಣೆಯಾಗುತ್ತವೆ ಮತ್ತು ಮದುವೆಯ ಮೊದಲು, ದಂಪತಿಗಳು ಜೀನೋಟೈಪ್ ಪರೀಕ್ಷೆಗೆ ಒಳಗಾಗಬೇಕು, ಇದರಿಂದ ಯಾವುದೇ ಸಮಸ್ಯೆಯನ್ನು ಕಂಡುಹಿಡಿಯಬಹುದು. ಕೆಲವು ಭೌಗೋಳಿಕ ಪ್ರದೇಶಗಳಲ್ಲಿ ಈ ಪರೀಕ್ಷೆಗಳು ತುಂಬಾ ಮುಖ್ಯವಾಗಿವೆ.


ಇದನ್ನೂ ಓದಿ-Ginger: ಮಧುಮೇಹಿಗಳಿಗೆ ವರದಾನಕ್ಕಿಂತ ಕಡಿಮೆಯಿಲ್ಲ ಶುಂಠಿ

10. ಪೆಲ್ವಿಕ್ ಅಲ್ಟ್ರಾಸೌಂಡ್ ಪರೀಕ್ಷೆ- ಪೆಲ್ವಿಕ್ ಭಾಗಗಳಲ್ಲಿನ ಅಂಗಗಳ ಚಿತ್ರಗಳನ್ನು ತೆಗೆದುಕೊಳ್ಳಲು ಪೆಲ್ವಿಕ್ ಅಲ್ಟ್ರಾಸೌಂಡ್ ಪರೀಕ್ಷೆಯನ್ನು ಮಾಡಲಾಗುತ್ತದೆ. ಅಂಗದ ಫೋಟೋಗಳನ್ನು ಮಾಡಲು ಧ್ವನಿ ತರಂಗಗಳನ್ನು ಬಳಸಲಾಗುತ್ತದೆ. ಗರ್ಭಾಶಯ, ಗರ್ಭಕಂಠ, ಅಂಡಾಶಯಗಳು ಮತ್ತು ಫಾಲೋಪಿಯನ್ ಟ್ಯೂಬ್ಗಳು ಇತ್ಯಾದಿಗಳ ಸ್ಥಿತಿಯನ್ನು ಕಂಡುಹಿಡಿಯಲು ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.


ಇದನ್ನೂ ಓದಿ-Amla Juice Benefits: ಈ ಸಮಸ್ಯೆಗಳಿಗೆ ರಾಮಬಾಣ ನೆಲ್ಲಿ ಕಾಯಿ ಜ್ಯೂಸ್

(ಹಕ್ಕುತ್ಯಾಗ- ಈ ಲೇಖನ ಕೇವಲ ಸಾಮಾನ್ಯ ಮಾಹಿತಿಗಾಗಿ ಬರೆಯಲಾಗಿದೆ. ಇದು ಯಾವುದೇ ರೀತಿಯಲ್ಲಿ ಯಾವುದೇ ಒಂದು ಹಕ್ಕು ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.