ಇನ್ನು ಸಕ್ಕರೆ ಕಾಯಿಲೆಗೆ ಭಯ ಪಡಬೇಕಿಲ್ಲ! ಮಧುಮೇಹ ತಡೆಗೆ ಸಿಕ್ಕಿದೆ ಔಷಧಿ.!
Type 1 Diabetes Preventative Treatment: ಟೈಪ್ 1 ಡಯಾಬಿಟೀಸ್ ಅನ್ನು ತಡೆಗಟ್ಟುವ ಚಿಕಿತ್ಸೆಗೆ ಅಮೆರಿಕ ತನ್ನ ಅನುಮೋದನೆಯನ್ನು ನೀಡಿದೆ. ಈ ಔಷಧಿಯನ್ನು ಪ್ರೊವೆನ್ಬಿಯೊ ಮತ್ತು ಸನೋಫಿ ಎಂಬ ಔಷಧೀಯ ಕಂಪನಿ ಹೊರ ತಂದಿದೆ.
Type 1 Diabetes Preventative Treatment : ಟೈಪ್ 1 ಡಯಾಬಿಟೀಸ್ ಅನ್ನು ತಡೆಗಟ್ಟುವ ಚಿಕಿತ್ಸೆಗೆ ಅಮೆರಿಕ ತನ್ನ ಅನುಮೋದನೆಯನ್ನು ನೀಡಿದೆ. ಈ ಔಷಧಿಯನ್ನು ಪ್ರೊವೆನ್ಬಿಯೊ ಮತ್ತು ಸನೋಫಿ ಎಂಬ ಔಷಧೀಯ ಕಂಪನಿ ಹೊರ ತಂದಿದೆ. ಈ ಔಷಧಿಯ ಹೆಸರು ಟಿಝಿಲ್ಡ್ (Tzield). ಈ ಔಷಧಿಯು ಟೈಪ್-1 ಮಧುಮೇಹವನ್ನು ತಡೆಯುತ್ತದೆ. ಇದನ್ನು ಸೇವಿಸುವುದರಿಂದ ಯಾರಿಗೂ ಮಧುಮೇಹ ಬರುವುದಿಲ್ಲ ಎಂದು Tzield ತಯಾರಿಸುವ ಫಾರ್ಮಾ ಕಂಪನಿ ಹೇಳಿಕೊಂಡಿದೆ. ಯುಎಸ್ ಆಹಾರ ಮತ್ತು ಔಷಧ ನಿರ್ವಾಹಕರು ಈ ನಿರ್ದಿಷ್ಟ ಔಷಧವನ್ನು ನವೆಂಬರ್ 2022 ರಲ್ಲಿ ಅನುಮೋದಿಸಿದ್ದಾರೆ.
ಇದಕ್ಕೂ ಮುನ್ನ ಮಧುಮೇಹಕ್ಕೆ ಔಷಧಿ ಇರಲಿಲ್ಲ :
ಟೈಪ್-1 ಮಧುಮೇಹವನ್ನು ಆಟೋ ಇಮ್ಮ್ಯುನ್ ರಿಯಾಕ್ಷನ್ ಎಂದು ಕರೆಯಲಾಗುತ್ತದೆ. ಈ ಪ್ರತಿಕ್ರಿಯೆಯು ಇನ್ಸುಲಿನ್ ಉತ್ಪಾದಿಸುವ ಮೇದೋಜ್ಜೀರಕ ಗ್ರಂಥಿಯಲ್ಲಿನ ಸೆಲ್ಸ್ ಗಳನ್ನು ನಾಶಪಡಿಸುತ್ತದೆ. ಇವುಗಳನ್ನು ಬೀಟಾ ಸೆಲ್ಸ್ ಎಂದು ಕರೆಯಲಾಗುತ್ತದೆ. ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮೊದಲು ಈ ಪ್ರಕ್ರಿಯೆಯು ತಿಂಗಳುಗಳಿಂದ ಹಿಡಿಸು ವರ್ಷಗಳವರೆಗೂ ಮುಂದುವರೆಯುತ್ತದೆ. ಇದು ಟೈಪ್ 2 ಡಯಾಬಿಟಿಸ್‌ಗಿಂತ ಭಿನ್ನವಾಗಿದೆ. ಟೈಪ್ 2 ಡಯಾಬಿಟಿಸ್ ಜೀವನಶೈಲಿಯ ಕಾರಣದಿಂದ ಕಾಣಿಸಿಕೊಳ್ಳುತ್ತದೆ. ಟೈಪ್-1 ಮಧುಮೇಹ ತಡೆಗೆ ಇಲ್ಲಿಯವರೆಗೆ ಯಾವುದೇ ಚಿಕಿತ್ಸೆ ಇರಲಿಲ್ಲ.
ಇದನ್ನೂ ಓದಿ : White Hair : ಕೂದಲು ಬಿಳಿಯಾಗಲು ಕಾರಣ C ವಿಟಮಿನ್ : ತಡೆಯಲು ಸೇವಿಸಿ ಈ ಪದಾರ್ಥಗಳನ್ನು!
ಈ ವಯಸ್ಸಿನವರಿಗೆ ಆಗಲಿದೆ ಅನುಕೂಲ :
ಪವಾಡವೆಂದು ಪರಿಗಣಿಸಲಾದ ಈ ಔಷಧಿಯನ್ನು ಮಧುಮೇಹದ ಎರಡನೇ ಹಂತದಲ್ಲಿರುವ 8 ವರ್ಷ ಮೇಲ್ಪಟ್ಟವರಿಗೆ ಅನುಮೋದಿಸಲಾಗಿದೆ. ಅಮೇರಿಕನ್ ತಜ್ಞರ ಪ್ರಕಾರ, ಇಲ್ಲಿಯವರೆಗೆ ಟೈಪ್ -1 ಮಧುಮೇಹಕ ತಡೆಗೆ ಯಾವುದೇ ಚಿಕಿತ್ಸೆ ಇರಲಿಲ್ಲ.
ಕ್ಲಿನಿಕಲ್ ಪ್ರಯೋಗದ ರಿಸಲ್ಟ್ :
ಇನ್ಸುಲಿನ್ ಇಲ್ಲದೆ ಸಾಮಾನ್ಯ ಜೀವನವನ್ನು ನಡೆಸುತ್ತಿರುವುದು ನಮಗೆ ಸಿಕ್ಕ ವರದಾನವೇ ಸರಿ ಎನ್ನುತ್ತಾರೆ ಈ ಔಷಧದ ಪ್ರಯೋಗದಲ್ಲಿ ತೊಡಗಿರುವ ಜನರು. ಈ ಔಷಧಿಯು ಕೋಟಿಗಟ್ಟಲೆ ಜನರ ಜೀವ ಉಳಿಸುವ ಭರವಸೆಯ ಹೊಸ ಕಿರಣವನ್ನು ಮೂಡಿಸಿದೆ ಎನ್ನುವುದು ಇವರೆಲ್ಲರ ನಂಬಿಕೆ. ಇದೊಂದು ದೊಡ್ಡ ಸಾಧನೆ. ಟೈಪ್-1 ಮಧುಮೇಹದಿಂದ ಬಳಲುತ್ತಿರುವವರು ಮಾತ್ರ ಇದನ್ನು ಅರ್ಥಮಾಡಿಕೊಳ್ಳಬಹುದು ಎನ್ನುತ್ತಾರೆ ಇವರುಗಳು.
ಇದನ್ನೂ ಓದಿ : Milk and Ghee Benefits : ಹಾಲಿನಲ್ಲಿ ತುಪ್ಪ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕಿದೆ ಈ ಅದ್ಭುತ ಪ್ರಯೋಜನಗಳು
ಔಷಧವು ಹೇಗೆ ಕೆಲಸ ಮಾಡುತ್ತದೆ? :
Tzield ಮಾನವ ದೇಹದ ಆಟೋ ಇಮ್ಮುನ್ ರೆಸ್ಪಾನ್ಸ್ ನೊಂದಿಗೆ ಸೇರಿಕೊಳ್ಳುತ್ತದೆ. ಈ ರೋಗದಲ್ಲಿ, ಪ್ರತಿರಕ್ಷಣಾ ಕೋಶಗಳು ಮೇದೋಜ್ಜೀರಕ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಬೀಟಾ ಕೋಶಗಳನ್ನು ನಾಶಮಾಡುತ್ತವೆ. ಈ ರೋಗನಿರೋಧಕ ಕೋಶಗಳು ಇನ್ಸುಲಿನ್ ಅನ್ನು ತಯಾರಿಸುತ್ತವೆ. ರಕ್ತದಲ್ಲಿನ ಸಕ್ಕರೆಯನ್ನು ಇತರ ಜೀವಕೋಶಗಳಿಗೆ ಸಾಗಿಸಲು ಇನ್ಸುಲಿನ್ ಸಹಾಯ ಮಾಡುತ್ತದೆ. . ಪ್ರಯೋಗಗಳಲ್ಲಿ Tzield ಎರಡು ವರ್ಷಗಳಿಗಿಂತ ಹೆಚ್ಚು ಕಾಲ ರೋಗವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಕೆಲವು ಸಂದರ್ಭಗಳಲ್ಲಿ, ರೋಗವನ್ನು ಇದಕ್ಕಿಂತ ಹೆಚ್ಚು ಕಾಲ ತಡೆಯಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.