ನವದೆಹಲಿ: ಲೈಂಗಿಕ ಸಮಸ್ಯೆ ಮತ್ತು ಜನಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ದೇಶದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಸುರಕ್ಷಿತ ಲೈಂಗಿಕ ಕ್ರಿಯೆಗಾಗಿ ಕಾಂಡೋಮ್ ಬಳಸುವ ಕುರಿತು ವಿವಿಧ ಮಾಧ್ಯಮಗಳ ಮೂಲಕ ಎಲ್ಲೆಡೆ ಜಾಗೃತಿ ಮೂಡಿಸುತ್ತಿದೆ. ಆದರೆ, ನಿಮಗೆ ಕಾಂಡೋಮ್ ಬಳಸುವುದು ದೊಡ್ಡ ತಲೆನೋವಾಗಿ ಪರಿಣಮಿಸಿದ್ದರೆ, ಮಾರುಕಟ್ಟೆಯಲ್ಲಿ ಕಾಂಡೋಮ್ ಗೆ ಪರ್ಯಾಯ ಆಯ್ಕೆಯೊಂದು ಲಭ್ಯವಿದೆ. 


COMMERCIAL BREAK
SCROLL TO CONTINUE READING

ಸಾಕಷ್ಟು ಜನರು ಹಲವು ಕಾರಣಗಳಿಂದಾಗಿ ಕಾಂಡೋಮ್ ಬಳಸಲು ಆಸಕ್ತಿ ತೋರುವುದಿಲ್ಲ. ಹಾಗೆಯೇ ಮಹಿಳೆಯರು ಅಡ್ಡಪರಿಣಾಮಗಳ ಭಯದಿಂದಾಗಿ ಗರ್ಭ ನಿರೋಧಕ ಮಾತ್ರೆಗಳನ್ನು ನುಂಗಲು ಹಿಂಜರಿಯುತ್ತಾರೆ. ಹಾಗಾದರೆ ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸುವುದು ಹೇಗೆ ಎಂದು ನೀವು ಆಲೋಚಿಸುತ್ತಿದ್ದರೆ, ಅದಕ್ಕೆ ಮತ್ತೊಂದು ಪರ್ಯಾಯ ಮಾರ್ಗವೊಂದನ್ನು ತಜ್ಞ ವೈದ್ಯರು ಕಂಡುಹಿಡಿದಿದ್ದಾರೆ. ಈ ಮೂಲಕ ಪುರುಷರ ವೀರ್ಯಾಣು ಸಂಖ್ಯೆಯನ್ನು ತಾತ್ಕಾಲಿಕವಾಗಿ ಕಡಿಮೆಗೊಳಿಸುವ ಮೂಲಕ ಗರ್ಭಧಾರಣೆಯನ್ನು ತಡೆಯಬಹುದಾಗಿದೆ. 


ವೀರ್ಯಾಣು ಸಂಖ್ಯೆಯಲ್ಲಿ ತಾತ್ಕಾಲಿಕ ಇಳಿತ
ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಹೆಲ್ತ್ ನ ಯುನಿಸ್ ಕೆನೆಡಿ ಶ್ರೀವರ್ ಎಂಬವರು ಒಂದು ವಿಶೇಷವಾದ ಜೆಲ್ ಅನ್ನು ಕಂಡು ಹಿಡಿದಿದ್ದಾರೆ. ಇದನ್ನು ಹಚ್ಚುವುದರಿಂದ ವೀರ್ಯಾಣುಗಳ ಸಂಖ್ಯೆ ತಾತ್ಕಾಲಿಕವಾಗಿ ಕಡಿಮೆಯಾಗಿ ಗರ್ಭಧಾರಣೆ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಅನೇಕ ಮಹಿಳೆಯರು ಗರ್ಭ ನಿರೋಧಕವನ್ನು ಬಳಸಲು ಹಿಂಜರಿಯುತ್ತಾರೆ. ಮತ್ತೊಂದೆಡೆ ಪುರುಷರ ಗರ್ಭ ನಿರೋಧಕ ಮಾರ್ಗಗಳು ಕೇವಲ ಕಾಂಡೋಮ್ ಗಳಿಗೆ ಮಾತ್ರ ಸೀಮಿತಗೊಂಡಿವೆ. ಹಾಗಾಗಿ ಪುರುಷರ ಗರ್ಭನಿರೋಧಕಗಳಲ್ಲಿ  ಈ ಜೆಲ್ ಅತ್ಯುತ್ತಮ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ ಎಂದು ಡಾ.ಡಯಾನ ಬಿಲೇಥೆ ಅಭಿಪ್ರಾಯಪಟ್ಟಿದ್ದಾರೆ. 


ಈ ಜೆಲ್ ಹೇಗೆ ಕೆಲಸ ಮಾಡುತ್ತದೆ?
NES/T ಹೆಸರಿನ ಜೆಲ್ ಅನ್ನು ಪುರುಷರು ಕಾಂಡೋಮ್ ಗೆ ಬದಲಾಗಿ ಸುರಕ್ಷಿತ ಲೈಂಗಿಕ ಕ್ರಿಯೆಗಾಗಿ ಬಳಸಬಹುದು ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಮೊದಲು ಈ ಜೆಲ್ ಅನ್ನು ಪುರುಷರು ತಮ್ಮ ಭುಜ ಮತ್ತು ತೋಳುಗಳಿಗೆ ಸುಮಾರು 20 ವಾರಗಳ ಕಾಲ ಹಚ್ಚಲು ಹೇಳಲಾಗುತ್ತದೆ. ಬಳಿಕ ಅದು ಚರ್ಮದ ಒಳ ಹೋಗಿ ಪರಿಣಾಮ ಬೀರಲಾರಂಭಿಸುತ್ತದೆ. ಜೆಲ್ ಬಳಕೆಯಿಂದ ವಿರ್ಯಾಣು ಸಂಖ್ಯೆ ಕಡಿಮೆಯಾಗಿದೆಯೇ ಎಂಬುದನ್ನು ಪರೀಕ್ಷಿಸಿ, ಮುಂದಿನ ಒಂದು ವರ್ಷದ ಅವಧಿಗೆ ಸತಿ, ಪತಿ ಇಬ್ಬರಿಗೂ ಗರ್ಭಧಾರಣೆ ತಡೆಗಟ್ಟಲು ಈ ಜೆಲ್ ಬಳಸುವಂತೆ ಸೂಚಿಸಲಾಗುತ್ತದೆ. ಟೆಸ್ಟೋಸ್ಟೆರಾನ್ ಮತ್ತು ಸೀಗೆಸ್ಟ್ಸ್ಟೋರಾನ್ ಸಂಯುಕ್ತವನ್ನು ಈ ಜೆಲ್ ಉತ್ಪಾದನೆಗೆ ಬಳಸಲಾಗಿದ್ದು, ಇದು ನೈಸರ್ಗಿಕವಾಗಿ ವೀರ್ಯಾಣು ಸಂಖ್ಯೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಿ ಗರ್ಭಧಾರಣೆಯನ್ನು ತಡೆಯುತ್ತದೆ. ಅತೀ ಶೀಘ್ರದಲ್ಲಿಯೇ 420 ಜೋಡಿಗಳ ಮೇಲೆ ಈ ಜೆಲ್ ಅನ್ನು ಪ್ರಯೋಗ ಮಾಡಲಾಗುತ್ತಿದ್ದು, ಇದರ ಫಲಿತಾಂಶ ಎಷ್ಟು ಪರಿಣಾಮಕಾರಿಯಾಗಿರಲಿದೆ ಎಂಬುದನ್ನು ಪರೀಕ್ಷಿಸಲಾಗುವುದು. ಈ ಪರೀಕ್ಷೆ ಯಶಸ್ವಿಯಾದಲ್ಲಿ 2022ರ ವೇಳೆಗೆ ಮಾರುಕಟ್ಟೆಯಲ್ಲಿ ಈ ಜೆಲ್ ದೊರೆಯಲಿದೆ.