Milk With Banana Benefits: ಹಾಲು ಒಂದು ಸೂಪರ್ ಫುಡ್. ಹಾಲು ಕುಡಿಯುವುದರಿಂದ ದೇಹಕ್ಕೆ ಹತ್ತು ಹಲವು ಪ್ರಯೋಜನಗಳಿವೆ. ಆದಾಗ್ಯೂ, ದೇಹದ ತೂಕ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಕೆಲವರು ಹಾಲು ಕುಡಿಯಲು ಹಿಂಜರಿಯುತ್ತಾರೆ. ಆದರಿದು ತಪ್ಪು ಕಲ್ಪನೆ. ಹಾಲು ಆರೋಗ್ಯಕ್ಕೆ ಒಳ್ಳೆಯದು, ಇದರಲ್ಲಿ ಪೋಷಕಾಂಶಗಳ ಖಜಾನೆಯಾಗಿರುವ ಬಾಳೆಹಣ್ಣನ್ನು ಬೆರೆಸಿ ತಿನ್ನುವುದು ಆರೋಗ್ಯಕ್ಕೂ ಇನ್ನೂ ಒಳ್ಳೆಯದು. 


COMMERCIAL BREAK
SCROLL TO CONTINUE READING

ಹೌದು, ಆರೋಗ್ಯ ತಜ್ಞರ ಪ್ರಕಾರ, ಹಾಲು ಮತ್ತು ಬಾಳೆಹಣ್ಣು ಎರಡನ್ನೂ ಸರಿಯಾದ ಪ್ರಮಾಣದಲ್ಲಿ ಬೆರೆಸಿ ಸವಿಯುವುದರಿಂದ ದೇಹವು ಫಿಟ್ ಆಗಿ ಆರೋಗ್ಯವಾಗಿರುತ್ತದೆ. ಅಷ್ಟೇ ಅಲ್ಲ, ದೇಹಕ್ಕೆ ಇದು ಹಲವು ಪ್ರಯೋಜನಗಳನ್ನು ಕೂಡ ನೀಡುತ್ತದೆ. 


ದೇಹಕ್ಕೆ ಶಕ್ತಿ: 
ಬಾಳೆಹಣ್ಣನ್ನು ಹಾಲಿನಲ್ಲಿ ಬೆರೆಸಿ ತಿನ್ನುವುದರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್, ವಿಟಮಿನ್, ಫೈಬರ್, ಖನಿಜಗಳು ದೊರೆಯುತ್ತದೆ. ಇದರಿಂದಾಗಿ ದೇಹವು ಶಕ್ತಿಯುತವಾಗಿರುತ್ತದೆ. 


ಇದನ್ನೂ ಓದಿ- ಶುಗರ್ ಎಷ್ಟೇ ಹೆಚ್ಚಿದ್ದರೂ ಸುಲಭವಾಗಿ ನಿಯಂತ್ರಿಸಬಲ್ಲ ಮ್ಯಾಜಿಕಲ್ ಪಾನೀಯಗಳಿವು..!


ತೂಕ ಇಳಿಕೆ ಆಹಾರ: 
ಬಾಳೆಹಣ್ಣು 100 ಗ್ರಾಂ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಹಾಲು 80ಗ್ರಾಂ ಗಿಂತಲೂ ಹೆಚ್ಚಿನ ಕ್ಯಾಲೋರಿ ಹೊಂದಿರುತ್ತದೆ. ಇವೆರಡನ್ನೂ ಒಟ್ಟಿಗೆ ಸೇರಿಸಿ ಸವಿಯುವುದರಿಂದ ಇದು ತೂಕ ಇಳಿಕೆಗೆ ಲಾಭದಾಯಕವಾಗಿದೆ. 


ಚರ್ಮದ ಆರೋಗ್ಯ: 
ಬಾಳೆಹಣ್ಣಿನಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಇ, ಖನಿಜಗಳು, ಪೊಟ್ಯಾಸಿಯಮ್, ಸತು ಕಬ್ಬಿಣದಂತಹ ಹಲವು ಪೋಷಕಾಂಶಗಳು ಅಡಕವಾಗಿವೆ. ಇದರ ಬಳಕೆಯಿಂದ ಚರ್ಮ ಒಳಗಿನಿಂದ ಆರೋಗ್ಯಕರವಾಗಿರುತ್ತದೆ. 


ಇದನ್ನೂ ಓದಿ- ರಾತ್ರಿ ಮಲಗುವಾಗ ಈ ಎರಡು ಮಸಾಲೆಗಳನ್ನ ಒಂದು ಚಿಟಿಕೆ ಹಾಲಿನಲ್ಲಿ ಬೆರೆಸಿ ಕುಡಿಯಿರಿ...


ಆರೋಗ್ಯಕರ ಕೊಬ್ಬು: 
ಬಾಳೆಹಣ್ಣು ಮತ್ತು ಹಾಲನ್ನು ಒಟ್ಟಿಗೆ ತಿನ್ನುವುದರಿಂದ ದೇಹಕ್ಕೆ ಅಗತ್ಯವಿರುವ ಆರೋಗ್ಯಕರ ಕೊಬ್ಬು ದೊರೆಯುತ್ತದೆ. ಇದರಿಂದ ಒಟ್ಟಾರೆ ಆರೋಗ್ಯ ವೃದ್ಧಿಯಾಗುತ್ತದೆ. 


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.