Milk for weight loss: ಹೊಟ್ಟೆಯ ಬೊಜ್ಜು ಸಾಮಾನ್ಯವಾಗಿ ಹಲವರನ್ನು ಕಾಡುವ ಸಮಸ್ಯೆ. ಹೊಟ್ಟೆಯ ಜೊಜ್ಜನ್ನು ಕರಗಿಸಲು ಹಲವಾರು ಹಲವಾರು ರೀತಿಗಳಲ್ಲಿ ಪ್ರಯತ್ನ ಮಾಡುತ್ತಾರೆ. ಅಷ್ಟೆ ಏಕೆ ಜಿಮ್‌ ಡಯಟ್‌ ಅದು ಇದು ಅಂತಾ ಹಲವಾರು ಕಸರತ್ತು ಮಾಡುತ್ತಾರೆ. ಆದರೆ ಹೊಟ್ಟೆ ಬೊಜ್ಜು ಕರಗಿಸಲು ಈ ಕಸರತ್ತುಗಳು ಯಾವುದು ಬೇಡ. ಹಾಲಿನಲ್ಲಿ ಇದೊಂದು ಪದಾರ್ಥ ಬೆರೆಸಿ ಕುಡಿಯುವುದರಿಂದ ಹೊಟ್ಟೆಯ ಬೊಜ್ಜು ತಿಂಗಳಿನೊಳಗೆ ಕರಗಿ ನೀರಾಗುತ್ತೆ. 


COMMERCIAL BREAK
SCROLL TO CONTINUE READING

ಅಧಿಕ ಮಂದಿ ತೂಕ ಹೆಚ್ಚಳ ಬೊಜ್ಜಿನ ಕಾರಣದಿಂದಾಗಿ ಸಮಸ್ಯೆಯನ್ನು ಅನುಭವಿಸುತ್ತಾರೆ, ಬೊಜ್ಜು ಅತಿಯಾದ ತೂಕ ನಿಮ್ಮನ್ನು ದಪ್ಪವಾಗಿ ಕಾಣುವಂತೆ ಮಾಡುವುದಷ್ಟೆ ಅಲ್ಲದೆ, ಅನೇಕ ಆರೋಗ್ಯ ಸಮಸ್ಯೆಗಳಿಗೆ ನಿಮ್ಮನ್ನು ದೂಡುತ್ತದೆ. ಅದ್ದರಿಂದ ನೀವು ತೂಕ ಇಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಅತೀಯಾದ ತೂಕದ ಕಾರಣದಿಂದಾಗಿ ಕೊಬ್ಬು ಹೆಚ್ಚಾಗುತ್ತದೆ. ಇದು ಹೃದಯಾಘಾತ, ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿ ಕೊಡುತ್ತದೆ. ಅದ್ದರಿಂದ ನೀವು ತೂಕ ಇಳಿಸಿಕೊಳ್ಳುವುದು ಉತ್ತಮ. 


ಎಲ್ಲರೂ ತೂಕ ಇಳಿಸಿಕೊಂಡು ಆಕರ್ಶಕವಾಗಿ ಕಾಣುತ್ತಾರೆ. ಆದರೆ, ತೂಕ ಇಳಿಸಿಕೊಳ್ಳುವುದು ಎಂದರೆ ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ. ಅನೇಕ ಜನರು ತೂಕ ಇಳಿಸಿಕೊಳ್ಳಲು ಜಿಮ್‌, ಎಕ್ಸರ್ಸೈಸ್‌, ಯೋಗ, ಡಯಟ್‌ ಅಂತಾ ಹಲವಾರು ಕಸರತ್ತುಗಳನ್ನು ಮಾಡುತ್ತಾರೆ. ಆದರೂ ಕೂಡ ಅವರಿಂದ ತೂಕ ಇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಹಾಲನ್ನು ಈ ರೀತಿ ಕುಡಿಯುವುದರಿಂದ ನೀವು ತೂಕ ಇಳಿಸಿಕೊಂಡು ಸ್ಲಿಮ್‌ ಆಗಿ ಕಾಣಬಹುದು.


ಹೌದು, ಪ್ರತಿದಿನ ಹಾಲನ್ನು ಕುಡಿಯುವುದು ನಿಮ್ಮ ದೇಹದ ಆರೋಗ್ಯವನ್ನು ಕಾಪಾಡುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ. ಪ್ರತಿದಿನ ಹಾಲನ್ನು ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆ ಎಂಬುದು ಹಲವರ ನಂಬಿಕೆ ಆದರೆ ಹಾಲಿಗೆ ಈ ಮಸಾಲೆ ಪದಾರ್ಥವನ್ನು ಬೆರೆಸಿ ಸೇವಿಸುವುದರಿಂದ ನಿಮ್ಮ ತೂಕ ತಿಂಗಳೊಳಗೆ ಕಡಿಮೆಯಾಗುತ್ತದೆ. ಅದ್ಯಾವುದು ಆ ಮಸಾಲೆ ಪದಾರ್ಥ ಅಂತೀರಾ? ಅದು ಬೇರೆ ಯಾವುದು ಅಲ್ಲ ನಾವು ಪುಲಾವ್‌ ಹಾಗೂ ಬಿರಿಯಾನಿ ಮಾಡಲು ಮುಖ್ಯವಾಗಿ ಬಳಸುವ ಚಕ್ಕೆ.  


ಚಕ್ಕೆ ಅಂದರೆ ಇದನ್ನು ದಾಲ್ಚಿನ್ನಿ ಎಂದು ಸಹ ಕರೆಯಲಾಗುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿನಲ್ಲಿ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ನಿಮ್ಮ ಹೊಟ್ಟೆಯ ಬೊಜ್ಜು ಅಥವಾ ಕೊಬ್ಬು ಸುಲಭವಾಗಿ ಕರಗಿ ನೀರಾಗುತ್ತದೆ. 


ಒಂದು ಪಾತ್ರೆಯಲ್ಲಿ ಒಂದು ಲೋಟ ಹಾಲು ಹಾಕಿ ಅದಕ್ಕೆ ಒಂದು ಚಮಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ ಚೆನ್ನಾಗಿ ಕುದಿಸಬೇಕು. ನಂತರ ಈ ರೀತಿ ಕುದಿಸಿದ ಹಾಲನ್ನು ಸ್ವಲ್ಪ ಸಮಸಯದ ವರೆಗೂ ಆರಲು ಬಿಟ್ಟು ನಂತರ ಸೇವಿಸಬೇಕು. ಈ ರೀತಿ ಪ್ರತಿದಿನ ಮಾಡುವುದರಿಂದ ನಿಮ್ಮ ಹೊಟ್ಟೆಯ ಬೊಜ್ಜುತಿಂಗಳೊಳಗೆ ಕರಗಿ ಹೋಗುತ್ತದೆ. 


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.