Swelling in Legs Treatment: ಕಾಲಿನ ಊತಕ್ಕೆ ಕೆಲವೇ ಕ್ಷಣಗಳಲ್ಲಿ ಪರಿಹಾರ ನಿಡುತ್ತೆ ಸಾಸಿವೆ ಎಣ್ಣೆ!
Swelling in Legs: ಪ್ರಸ್ತುತ ಬಹುತೇಕ ಉದ್ಯೋಗಗಳಲ್ಲಿ ದೀರ್ಘಸಮಯದವರೆಗೆ ಒಂದೇ ಕಡೆ ಕುಳಿತು ಕೆಲಸ ಮಾಡುವ ಸಂಸ್ಕೃತಿಯಿಂದಾಗಿ ಕಾಲುಗಳಲ್ಲಿ ಊತದ ಸಮಸ್ಯೆ ಸಾಮಾನ್ಯವಾಗಿದೆ. ಆದರೆ, ಸಾಸಿವೆ ಎಣ್ಣೆಯಲ್ಲಿ ಕೆಲವು ಪದಾರ್ಥಗಳನ್ನು ಬೆರೆಸಿ ಬಳಸುವುದರಿಂದ ಈ ಸಮಸ್ಯೆಗೆ ಬಹಳ ಸುಲಭವಾಗಿ ಪರಿಹಾರ ಪಡೆಯಬಹುದು.
Swelling in Legs Treatment: ಬಿದ್ದಾಗ, ಗಾಯಗೊಂಡಾಗ ಕಾಲಿನ ರಕ್ತನಾಳಗಳು ಹಿಗ್ಗುವುದರಿಂದ ಕಾಲುಗಳಲ್ಲಿ ನೋವು, ಕಾಲುಗಳು ಊದಿಕೊಳ್ಳುವುದು ಸಾಮಾನಿ ಸಂಗತಿ. ಈ ಬದಲಾದ ಜೀವನ ಶೈಲಿಯಲ್ಲಿ ಕಛೇರಿಗಳಲ್ಲಿ ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವ ಸಂಸ್ಕೃತಿಯಿಂದಾಗಿ ಕೂಡ ಕಾಲು ನೋವು, ಕಾಲುಗಳಲ್ಲಿ ಊತದ ಸಮಸ್ಯೆ ಹೆಚ್ಚಾಗಿ ಬಾಧಿಸುತ್ತಿದೆ. ಆದರೆ, ನಿಮ್ಮ ಈ ಸಮಸ್ಯೆಗೆ ನಿಮ್ಮ ಮನೆಯಲ್ಲಿಯೇ ಸುಲಭವಾಗಿ ಪರಿಹಾರವನ್ನು ಪಡೆಯಬಹುದು. ಇದಕ್ಕಾಗಿ, ಸಾಸಿವೆ ಎಣ್ಣೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ಸಾಮಾನ್ಯವಾಗಿ ಕಾಲು ನೋವಿಗೆ ನಮ್ಮಲ್ಲಿ ಕೆಲವರು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಈ ರೀತಿ ಪದೇ ಪದೇ ಕಾಣಿಸಿಕೊಳ್ಳುವ ಕಾಲು ನೋವು ಹಾಗೂ ಕಾಲಿನ ಊತದ ಸಮಸ್ಯೆಗೆ ಪೈನ್ ಕಿಲ್ಲರ್ ಗಳನ್ನು ತೆಗೆದುಕೊಳ್ಳುವುದರಿಂದ ಇದು ದೀರ್ಘಾವದಿಯಲ್ಲಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು.
ಇದನ್ನೂ ಓದಿ- Flaxseeds Benefits For Hair: ಕೂದಲಿನ ಹಲವು ಸಮಸ್ಯೆಗಳಿಗೆ ಅಗಸೆಬೀಜ ಒಂದೇ ಪರಿಹಾರ
ಕಾಲು ನೋವು, ಕಾಲುಗಳಲ್ಲಿ ಊತದ ಸಮಸ್ಯೆಗೆ ಸಾಸಿವೆ ಎಣ್ಣೆ:
ಆಯುರ್ವೇದದ (Ayurveda) ಪ್ರಕಾರ, ಕಾಲು ನೋವು, ಕಾಲುಗಳಲ್ಲಿ ಊತದ ಸಮಸ್ಯೆಗೆ ಸಾಸಿವೆ ಎಣ್ಣೆ ಅತ್ಯುತ್ತಮ ಪರಿಹಾರವಾಗಿದೆ. ವಾಸ್ತವವಾಗಿ, ಸಾಸಿವೆ ಎಣ್ಣೆ (Mustard Oil) ಔಷಧೀಯ ಗುಣಗಳಿಂದ ಸಮೃದ್ಧವಾಗಿದ್ದು ಇದರಲ್ಲಿ ಕೆಲವು ಪದಾರ್ಥಗಳನ್ನು ಬೆರೆಸಿ ಮಸಾಜ್ ಮಾಡುವುದರಿಂದ ಕಾಲು ನೋವು, ಕಾಲಿನಲ್ಲಿ ಕಂಡು ಬರುವ ಊತದ ಸಮಸ್ಯೆ ಕೆಲವೇ ದಿನಗಳಲ್ಲಿ ಮಂಗ ಮಾಯವಾಗುತ್ತದೆ ಎನ್ನಲಾಗುತ್ತದೆ. ಅಂತಹ ಮೂರು ಸರಳ ವಿಧಾನಗಳೆಂದರೆ...
1. ಅರಿಶಿನದೊಂದಿಗೆ ಸಾಸಿವೆ ಎಣ್ಣೆ (Mustard Oil with Turmeric):
ಅರಿಶಿನವು (Turmeric) ಆಂಟಿಮೈಕ್ರೊಬಿಯಲ್ ಮತ್ತು ನಂಜುನಿರೋಧಕ ಗುಣಲಕ್ಷಣಗಳನ್ನು ಹೊಂದಿದ್ದು ಇದನ್ನು ಉತ್ತಮ ನೋವು ನಿವಾರಕ ಎಂದು ಪರಿಗಣಿಸಲಾಗಿದೆ. ಸಾಸಿವೆ ಎಣ್ಣೆಯಲ್ಲಿ ಅರಿಶಿನವನ್ನು ಬೆರೆಸಿ ಆ ತೈಲದಿಂದ ಮಸಾಜ್ ಮಾಡುವುದು ಕಾಲು ನೋವಿಗೆ ಅತ್ಯುತ್ತಮ ಪರಿಹಾರ ಎಂದು ಪರಿಗಣಿಸಲಾಗಿದೆ.
2. ಲವಂಗದೊಂದಿಗೆ ಸಾಸಿವೆ ಎಣ್ಣೆ (Mustard Oil with Clove):
ಲವಂಗವು (Clove) ರಕ್ತ ಪರಿಚಲನೆಯನ್ನು ಸುಧಾರಿಸಬಲ್ಲ ಅಂಶಗಳನ್ನು ಒಳಗೊಂಡಿದೆ. ಕಡಿಮೆ ಉರಿಯಲ್ಲಿ ಲವಂಗದೊಂದಿಗೆ ಸಾಸಿವೆ ಎಣ್ಣೆಯನ್ನು ಬೆರೆಸಿ ಬಿಸಿ ಮಾಡಿ ಈ ಎಣ್ಣೆಯನ್ನು ಪೀಡಿತ ಪ್ರದೇಶದಲ್ಲಿ ಹಚ್ಚುವುದರಿಂದ ಊತ ಕಡಿಮೆಯಾಗುವುದರ ಜೊತೆ ಜೊತೆಗೆ ನೋವಿನಿಂದಲೂ ಪರಿಹಾರ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- Curd Benefits: ನಿತ್ಯ 1 ಬಟ್ಟಲು ಮೊಸರು ತಿನ್ನುವುದರಿಂದ ಈ ರೋಗಗಳಿಂದ ಮುಕ್ತಿ
3. ಶುಂಠಿಯೊಂದಿಗೆ ಸಾಸಿವೆ ಎಣ್ಣೆ (Mustard Oil with Ginger):
ನಿಮಗೆಲ್ಲರಿಗೂ ತಿಳಿದಿರುವಂತೆ ಶುಂಠಿ (Ginger) ಕೂಡ ಉತ್ತಮ ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಆಹಾರ ಪದಾರ್ಥ. ಶುಂಠಿಯೊಂದಿಗೆ ಸಾಸಿವೆ ಎಣ್ಣೆಯನ್ನು ಬೆರೆಸಿ ಅದನ್ನು ಸ್ವಲ್ಪ ಬಿಸಿ ಮಾಡಿ ಪೀಡಿತ ಪ್ರದೇಶದಲ್ಲಿ ಮಸಾಜ್ ಮಾಡುವುದರಿಂದ ಈ ಸಮಸ್ಯೆಯಿಂದ ಸುಲಭವಾಗಿ ಪರಿಹಾರವನ್ನು ಪಡೆಯಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.