ಗಾಜಿಯಾಬಾದ್: ರಾಷ್ಟ್ರ ರಾಜಧಾನಿ ದೆಹಲಿಗೆ ಹೊಂದಿಕೊಂಡಂತೆ ಇರುವ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ 5 ವರ್ಷದ ಪುಟ್ಟ ಬಾಲಕಿಯಲ್ಲಿ ಮಂಗನ ಕಾಯಿಲೆಯ ಲಕ್ಷಣಗಳು ಕಂಡುಬಂದ ನಂತರ, ಮುನ್ನೆಚ್ಚರಿಕೆ ಪರೀಕ್ಷೆಗಾಗಿ ಆಕೆಯ ಮಾದರಿಯನ್ನು ಪಡೆದುಕೊಳ್ಳಲಾಗಿದೆ. ಬಾಲಕಿ ತುರಿಕೆಯಿಂದ ತೊಂದರೆಗೀಡಾಗಿದ್ದಳು ಮತ್ತು ಅವಳ ದೇಹದ ಮೇಲೆ ದದ್ದುಗಳು ಕಾಣಿಸಿಕೊಂಡಿವೆ. ಈ ಕುರಿತು ಮಾಹಿತಿ ನೀಡಿರುವ ಗಾಜಿಯಾಬಾದ್‌ನ ಸಿಎಂಒ, ಬಾಲಕಿಗೆ ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ  ಕಳೆದ ಒಂದು ತಿಂಗಳಿನಿಂದ ಬಳಕಿಯಾಗಲಿ ಅಥವಾ ಆಕೆಯ ಹತ್ತಿರದ ಸಂಬಂಧಿಗಳಾಗಲಿ ಯಾಗೂ ಕೂಡ ವಿದೇಶಕ್ಕೆ ಹೋಗಿಲ್ಲ ಎಂದು ಅವರು ತಿಳಿಸಿದ್ದಾರೆ.
[[{"fid":"242617","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


COMMERCIAL BREAK
SCROLL TO CONTINUE READING

ಸಿಎಂಒ ಪ್ರಕಾರ, ಬಾಲಕಿಯ ದೇಹದಿಂದ ಪಡೆದ ಮಾದರಿಗಳನ್ನು ಪರೀಕ್ಷೆಗಾಗಿ ಪುಣೆಗೆ ಕಳುಹಿಸಲಾಗಿದ್ದು, ಮುಂದಿನ 24ಗಂಟೆಗಳಲ್ಲಿ ಅವರ ವರದಿ ಬರಲಿದೆ. ಸದ್ಯಕ್ಕೆ ಬಾಲಕಿಯನ್ನು ಪ್ರತ್ಯೇಕಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬಾಲಕಿಯ ದೇಹದಲ್ಲಿ ಕಾಣಿಸಿಕೊಂಡಿರುವ ರೋಗಲಕ್ಷಣಗಳು ಬೇರೆ ಯಾವುದೇ ಕಾಯಿಲೆಯಿಂದ ಕೂಡ ಸಂಭವಿಸಿರುವ ಸಾಧ್ಯತೆ ಕೂಡ ಇದೆ ಆದರೆ, ಎಚ್ಚರಿಕೆಯನ್ನು ವಹಿಸಲಾಗಿದೆ ಎಂದು ಅವರು ಹೇಳಿದ್ದಾರೆ. 


Monkeypox: ಮಂಕಿಪಾಕ್ಸ್ ಸಮುದಾಯ ಹರಡುವಿಕೆ ಆತಂಕ..

ಮಂಗನ ಕಾಯಿಲೆಯ ಲಕ್ಷಣಗಳು
ಮಂಕಿಪಾಕ್ಸ್ ಒಂದು ಅಪರೂಪದ ಕಾಯಿಲೆಯಾಗಿದ್ದು, ಅದರ ಲಕ್ಷಣಗಳು ಫ್ಲೂ ಅನ್ನು ಹೋಲುತ್ತವೆ. ಇವುಗಳಲ್ಲಿ ಜ್ವರ, ತಲೆನೋವು, ಶೀತ, ಸ್ನಾಯು ನೋವು, ಬೆನ್ನು ನೋವು, ಆಯಾಸ ಮತ್ತು ಊದಿಕೊಂಡ ದುಗ್ಧರಸ ಗ್ರಂಥಿಗಳು ಶಾಮೀಲಾಗಿವೆ. ಸೋಂಕಿನ ನಂತರ, ಮುಖದ ದದ್ದುಗಳು ಮೇಲೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ, ಇದು ದೇಹದ ಇತರ ಭಾಗಗಳಿಗೆ ಹರಡುತ್ತದೆ. ಈ ರೋಗಲಕ್ಷಣಗಳು ಸೋಂಕಿನ 5 ನೇ ದಿನದಿಂದ 21 ದಿನಗಳವರೆಗೆ ಇರುತ್ತವೆ.


ಇದನ್ನೂ ಓದಿ-ಮಂಗನ ಕಾಯಿಲೆ ಬಗ್ಗೆ ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ
ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಜಾಗರೂಕರಾಗಿರಲು ಸೂಚನೆ ನೀಡಿದೆ. ಮಂಕಿಪಾಕ್ಸ್ ವೈರಸ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ, ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳು ಪ್ರಕರಣಗಳನ್ನು ಶೀಘ್ರವಾಗಿ ಪತ್ತೆಹಚ್ಚಲು ಮತ್ತು ಶಂಕಿತ ರೋಗಿಗಳಿಗೆ ಧಾರಕ ವಲಯಗಳನ್ನು ರಚಿಸಲು ಸಲಹೆ ನೀಡಿದೆ.


ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.