ಅಧಿಕ ಕೊಲೆಸ್ಟ್ರಾಲ್ನ ಶತ್ರು ಈ ಹಸಿರುಕಾಳು: ಇದನ್ನು ನೆನೆಸಿ ತಿನ್ನುವುದರಿಂದ ಸಿಗುತ್ತೆ ಅಪಾರ ಪ್ರಯೋಜನ
Soaked Moong Dal Benefits: ಅಧಿಕ ಕೊಲೆಸ್ಟ್ರಾಲ್ ಅನ್ನು ನಿಗ್ರಹಿಸಲು ನೀವು ಎಲ್ಲಾ ರೀತಿಯ ವಿಧಾನಗಳನ್ನು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲವೇ? ಚಿಂತೆಬಿಡಿ, ನೆನೆಸಿದ ಹಸಿರುಕಾಳುಗಳ ಪರಿಹಾರವನ್ನು ಪ್ರಯತ್ನಿಸಿ ನೋಡಿ...
ಅಧಿಕ ಕೊಲೆಸ್ಟ್ರಾಲ್‌ಗಾಗಿ ಹಸಿರುಕಾಳು: ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಹೃದಯ ಸಂಬಂಧಿತ ಸಮಸ್ಯೆಗಳ ಜೊತೆಗೆ ಇನ್ನೂ ಹಲವು ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಎಲ್ಲರಿಗೂ ತಿಳಿದಿರುವಂತೆ ಬೊಜ್ಜು, ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯಾಘಾತ, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ನಾಳೀಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಉತ್ತಮ ಆರೋಗ್ಯಕ್ಕಾಗಿ ಕೊಲೆಸ್ಟ್ರಾಲ್ ನಿಯಂತ್ರಣ ಅತ್ಯಗತ್ಯ. ಇಲ್ಲದಿದ್ದರೆ, ಇದು ನಿಮ್ಮ ಪ್ರಾಣಕ್ಕೇ ಅಪಾಯವನ್ನು ಉಂಟು ಮಾಡಬಹುದು. ಆಹಾರ ತಜ್ಞರ ಪ್ರಕಾರ, ಅಧಿಕ ಕೊಲೆಸ್ಟ್ರಾಲ್‌ಗಾಗಿ ನೆನೆಸಿದ ಹಸಿರುಕಾಳು ತುಂಬಾ ಪ್ರಯೋಜನಕಾರಿ ಆಗಿದೆ.
ಆರೋಗ್ಯಕ್ಕೆ ಪ್ರಯೋಜನಕಾರಿ ನೆನೆಸಿದ ಹಸಿರುಕಾಳು:
ಆರೋಗ್ಯದ ದೃಷ್ಟಿಯಿಂದ ನಮ್ಮ ದೈನಂದಿನ ಆಹಾರದಲ್ಲಿ ಬೇಳೆಕಾಳುಗಳ ಪ್ರಾಮುಖ್ಯತೆಯು ತುಂಬಾ ಹೆಚ್ಚಾಗಿದೆ. ಸಾಮಾನ್ಯವಾಗಿ ನಾವು ಇದನ್ನು ಪ್ರೋಟೀನ್‌ನ ಮೂಲವಾಗಿ ಬಳಸುತ್ತೇವೆ, ಆದರೆ ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಹಸಿರು ಕಾಳುಗಳನ್ನು ಎರಡು ರೂಪಗಳಲ್ಲಿ ಬಳಸಲಾಗುತ್ತದೆ. ಮೊದಲನೆಯದಾಗಿ ಹಸಿರುಕಾಳು, ಎರಡನೆಯದಾಗಿ ಸಿಪ್ಪೆ ಸುಲಿದ ಹಳದಿ ಮೂಂಗ್ ದಾಲ್ ಅಂದರೆ ಹೆಸರುಬೇಳೆ.
ಇದನ್ನೂ ಓದಿ- ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಈ ಡ್ರೈ ಫ್ರೂಟ್ಸ್ ಸೇವಿಸಿ
ಹಸಿರುಕಾಳನ್ನು ಹೇಗೆ ತಿನ್ನಬೇಕು?
ನೀವು ಹೆಚ್ಚಾಗುತ್ತಿರುವ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಬಯಸಿದರೆ, ಹಸಿರುಕಾಳನ್ನು ರಾತ್ರಿ ವೇಳೆ ನೀರಿನಲ್ಲಿ ನೆನೆಸಿ ಮರುದಿನ ಬೆಳಿಗ್ಗೆ ಅದನ್ನು ಸ್ವಚ್ಛಗೊಳಿಸಿ ತಿನ್ನಬೇಕು. ಬೇಕಿದ್ದರೆ ನೆನೆಸಿದ ಹಸಿರುಕಾಳಿಗೆ ಸ್ವಲ್ಪ ಈರುಳ್ಳಿ, ಉಪ್ಪು ಬೆರೆಸಿಯೂ ಸೇವಿಸಬಹುದು.
ಹಸಿರುಕಾಲು ಹೈಪೋಕೊಲೆಸ್ಟರಾಲ್ಮಿಯಾವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಈ ಕಾರಣಕ್ಕಾಗಿಯೇ ಹೆಚ್ಚಿನ ಆರೋಗ್ಯ ತಜ್ಞರು ಹಸಿರುಕಾಳನ್ನು ನೆನೆಸಿ ತಿನ್ನಲು ಶಿಫಾರಸು ಮಾಡುತ್ತಾರೆ. ನೀವು ಇದನ್ನು ಕೆಲವು ವಾರಗಳವರೆಗೆ ನಿಯಮಿತವಾಗಿ ಸೇವಿಸಿದರೆ, ನಂತರ ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ- ಆರೋಗ್ಯಕರವಾದ ಯಕೃತ್ತಿಗೆ ಈ ಸೂಪರ್‌ಫುಡ್‌ಗಳನ್ನು ಆಹಾರದಲ್ಲಿ ಸೇರಿಸಿ
ಹಸಿರುಕಾಳನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾದರೆ ರಕ್ತನಾಳಗಳಲ್ಲಿನ ಅಡಚಣೆಯೂ ಕಡಿಮೆಯಾಗುತ್ತದೆ, ಇದರಿಂದಾಗಿ ರಕ್ತದ ಹರಿವು ಸರಿಯಾಗುತ್ತದೆ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದಲೂ ಪರಿಹಾರ ಪಡೆಯಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.