Vertigo: ಇಡೀ ಪ್ರಪಂಚ ಗಿರಗಿರನೆ ಸುತ್ತುವ ಅನುಭವವಾಗುತ್ತಿದೆಯೇ? ಈ ಗಂಭೀರ ಕಾಯಿಲೆ ಇರಬಹುದು ಎಚ್ಚರ!!
Vertigo: ಭಾರತದಲ್ಲಿ 9.9 ದಶಲಕ್ಷಕ್ಕಿಂತ ಹೆಚ್ಚಿನ ಜನರು ವರ್ಟಿಗೊ ಅನುಭವಿಸುತ್ತಾರೆ . ಬಹುತೇಕ ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ತಲೆಸುತ್ತುವಿಕೆಯನ್ನು ಅನುಭವಿಸಿದರೂ ವರ್ಟಿಗೊ ವಿಭಿನ್ನವಾದುದು. ಇದೊಂದು ಸಮತೋಲನಕ್ಕೆ ಸಂಬಂಧಿಸಿದ ಪರಿಸ್ಥಿತಿಯಾಗಿದ್ದು, ವ್ಯಕ್ತಿಗೆ ಇದ್ದಕ್ಕಿದ್ದಂತೆ ಅಸಹಜ ಭಾವವೇರ್ಪಟ್ಟು, ಇಡೀ ಪ್ರಪಂಚವೇ ಸುತ್ತುತ್ತಿರುವಂತೆ ಭಾಸವಾಗಬಹುದು. ಇದು ಬಹಳ ಆತಂಕಕಾರಿಯಾದುದು ಮತ್ತು ಯಾವುದೇ ಮುನ್ನೆಚ್ಚರಿಕೆ ನೀಡದೆ ಬರುತ್ತದೆಯಾದ್ದರಿಂದ, ಇದನ್ನು ಕೇವಲ ”ಒಂದು ಕ್ಷಣದ ತಲೆಸುತ್ತುವಿಕೆ”ಎಂದು ನಿರ್ಲಕ್ಷಿಸದಿರುವುದು ಬಹಳ ಮುಖ್ಯ.
Vertigo: ವರ್ಟಿಗೋವನ್ನು ಪರೀಕ್ಷಿಸಿಕೊಳ್ಳದೇ ಹೋದರೆ ಅದು ಜೀವನವನ್ನೇ ಬುಡಮೇಲು ಮಾಡಿಬಿಡಬಹುದು. ಸಾಮಾನ್ಯ ಕೆಲಸಗಳೇ ಆಗಿರಬಹುದು ಅಥವಾ ವಿಶೇಷ ಸಂದರ್ಭಗಳೇ ಆಗಿರಬಹುದು-ಮತ್ತು ದಿನಸಿ ಶಾಪಿಂಗ್, ಪ್ರಯಾಣ, ಕೆಲಸ, ಸ್ನೇಹಿತರು ಮತ್ತು ಕುಟುಂಬದವರಲ್ಲಿಗೆ ಭೇಟಿ ನೀಡುವುದು, ರಜೆ ಪ್ರವಾಸ ಹೋಗುವುದು ಮುಂತಾದ ಬಹುತೇಕ ಜನರು ಗಂಭೀರವಾಗಿ ಪರಿಗಣಿಸದೆ ಇರುವಂತಹ ಸಂಗತಿಗಳು ವರ್ಟಿಗೋ ಇರುವ ಜನರಿಗೆ ಬಹಳ ಕಠಿಣವಾಗಿರುತ್ತವೆ.
ಸುಪ್ರಸಿದ್ಧ ಜಾಗತಿಕ ವರ್ಟಿಗೊ ತಜ್ಞರಾದ ಜರ್ಮನಿಯ ಮ್ಯೂನಿಚ್‌ನ ಹಾಸ್ಪಿಟಲ್ ಆಫ್ ಲುಡ್ವಿಗ್ ವಿಶ್ವವಿದ್ಯಾಲಯದ ನರರೋಗ ವಿಭಾಗ ಮತ್ತು ಜರ್ಮನ್ ಸೆಂಟರ್ ಫಾರ್ ವರ್ಟಿಗೊ ಅಂಡ್ ಬ್ಯಾಲೆನ್ಸ್ ಡಿಸಾರ್ಡರ್ಸ್ ವಿಭಾಗದ ನರರೋಗಶಾಸ್ತ್ರ(ನ್ಯುರಾಲಜಿ)ದ ಪ್ರೊಫೆಸರ್ ಡಾ. ಮೈಕೆಲ್ ಸ್ಟ್ರುಪ್, “ಜಗತ್ತಿನಾದ್ಯಂತ 10 ಜನರಲ್ಲಿ 1 ವ್ಯಕ್ತಿ ವರ್ಟಿಗೊದಿಂದ ಬಾಧಿಸಲ್ಪಡುತ್ತಾರೆ. ಆದರೂ, ಇದರ ರೋಗಪತ್ತೆಯು ಸವಾಲುಗಳಿಂದ ಕೂಡಿದ್ದು, ಇದಕ್ಕೆ ಚಿಕಿತ್ಸೆಯನ್ನು ಪಡೆಯುವ ಮಾರ್ಗ ದೀರ್ಘ ಹಾಗೂ ಕಠಿಣವಾಗಿರುತ್ತದೆ. ಅತ್ಯಧಿಕ ಸಂಖ್ಯೆಯಲ್ಲಿ ಇದು ಪ್ರಚಲಿತದಲ್ಲಿದ್ದರೂ, ರೋಗಿಗಳು ಮತ್ತು ಆರೋಗ್ಯಶುಶ್ರೂಷಾ ವೃತ್ತಿಪರರು ಇಬ್ಬರಲ್ಲೂ ಈ ಪರಿಸ್ಥಿತಿಯ ಕುರಿತು ಅರಿವಿನ ಕೊರತೆ ಇದೆ[i]. ಆದರೆ ಒಮ್ಮೆ ಇದನ್ನು ಸರಿಯಾಗಿ ರೋಗಪತ್ತೆ ಮಾಡಿದಲ್ಲಿ, ಇದಕ್ಕೆ ಚಿಕಿತ್ಸೆ ಒದಗಿಸಬಹುದು.”ಎಂದು ಹೇಳಿದರು.
ಇದನ್ನೂ ಓದಿ: ಏಲಕ್ಕಿ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳು
ಮುಂದುವರಿದು ಡಾ. ಸ್ಟ್ರುಪ್ ಅವರು, “ಚಿಕಿತ್ಸೆಗಳು ರೋಗಲಕ್ಷಣಗಳನ್ನು ಸುಧಾರಿಸಿದರೂ, ಅನೇಕ ವೇಳೆ ವರ್ಟಿಗೋ ಇರುವ ಜನರು ಶಿಫಾರಸ್ಸು ಮಾಡಲಾದ ಚಿಕಿತ್ಸೆಯನ್ನು ಕಟ್ಟುನಿಟ್ಟಾಗಿ ಪಾಲಿಸುವುದಿಲ್ಲ.ಇದು ರೋಗಲಕ್ಷಣಗಳು ಮರಳಿ ಬರುವುದಕ್ಕೆ ಕಾರಣವಾಗುತ್ತದೆ. ನಾವು ಇದರ ಚಿಹ್ನೆಗಳ ಕುರಿತು ಮತ್ತು ಶಿಫಾರಸ್ಸು ಮಾಡಿರುವಂತ ಚಿಕಿತ್ಸೆಯ ಪಡೆದುಕೊಳ್ಳುವ ಮೂಲಕ ಅದನ್ನು ನಿರ್ವಹಿಸುವ ರೀತಿಯ ಕುರಿತು ಜಾಗೃತಿ ಹೆಚ್ಚಿಸುವ ಅಗತ್ಯವಿದೆ. ಇದರಿಂದ ವರ್ಟಿಗೋ ಇರುವ ಜನರು ತಮ್ಮ ವರ್ಟಿಗೋವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಅಗತ್ಯವಾದ ಬೆಂಬಲವನ್ನು ಪಡೆಯುವುದು ಸಾಧ್ಯವಾಗುತ್ತದೆ.”ಎಂದು ಸೇರಿಸಿದರು.
ವರ್ಟಿಗೋ ಸಂದರ್ಭ ಯಾವುದೇ ವಯಸ್ಸಿನಲ್ಲೂ ಏರ್ಪಡಬಹುದಾದರೂ ಇದು ವೃದ್ಧರಲ್ಲಿ ಅತಿಸಾಮಾನ್ಯವಾಗಿ ಕಂಡುಬರುತ್ತದೆ. 60 ವರ್ಷಕ್ಕಿಂತ ಮೇಲ್ಪಟ್ಟ ಜನರ ಪೈಕಿ 30% ಮಂದಿ ಮತ್ತು 85 ವರ್ಷಕ್ಕಿಂತ ಮೇಲ್ಪಟ್ಟ ಜನರ ಪೈಕಿ 50% ಮಂದಿ ವರ್ಟಿಗೊ ಮತ್ತು ತಲೆಸುತ್ತುವಿಕೆ ಅನುಭವಿಸುತ್ತಾರೆ. ಭಾರತದ ವೃದ್ಧ ಜನಸಂಖ್ಯೆ(60 ವರ್ಷ ಮತ್ತು ಅದಕ್ಕೆ ಮೇಲ್ಪಟ್ಟವರು) 2031ರ ವೇಳೆಗೆ 194 ದಶಲಕ್ಷ ತಲುಪುವ ನಿರೀಕ್ಷೆಯಿದೆ. ವರ್ಟಿಗೊ ಅಪಾಯಕಾರಿ ಅಲ್ಲದಿದ್ದರೂ, ಇದ್ದಕ್ಕಿದ್ದಂತೆ ಏರ್ಪಡುವ ಆಘಾತ ಬೆಚ್ಚಿಬೀಳಿಸುವಂತಿರುತ್ತದೆ ಮತ್ತು ಬೀಳುವಿಕೆ ಮತ್ತು ಫ್ರಾಕ್ಚ್‌ಗಳನ್ನು ಏರ್ಪಡಿಸುವ ಮೂಲಕ ಅವರ ಜೀವನ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ಬೀಳುವ ಭಯವು, ಆತಂಕ ಮತ್ತು ಖಿನ್ನತೆ ಮಾತ್ರವಲ್ಲದೆ ಪ್ಯಾನಿಕ್ ಅಟಾಕ್ಸ್‌ನಂತಹ ಮಾನಸಿಕ ಸಮಸ್ಯೆಗಳನ್ನೂ ಹೆಚ್ಚಿಸಿ ಅವರ ಕ್ಷೇಮಾಭಿವೃದ್ಧಿಯನ್ನು ಬಾಧಿಸುತ್ತದೆ. ಇದರಿಂದ ವಯಸ್ಸಾದವರು ತಪ್ಪಿಸಿಕೊಳ್ಳಲು ಕಠಿಣವಾದ ಅಥವಾ ನೆರವು ಇಲ್ಲದಂತಹ ಪರಿಸ್ಥಿತಿಗಳಲ್ಲಿ ಇರಬೇಕಾದುದರ ಬಗ್ಗೆ ಭಯ ಬೆಳೆಸಿಕೊಳ್ಳುವರು.
ಇದನ್ನೂ ಓದಿ: ಈ ಮೂರು ತರಕಾರಿ ಜೂಸ್ ಕುಡಿದರೆ ಸಾಕು ನಿಮ್ಮ ಆರೋಗ್ಯ ಗಟ್ಟಿ..! ಇಲ್ಲಿವೆ ನೋಡಿ
ಹೆಚ್ಚುವರಿಯಾಗಿ, ವರ್ಟಿಗೊ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ ಮತ್ತು ಪುರುಷರಿಗೆ ಹೋಲಿಸಿದರೆ ಅವರು ವರ್ಟಿಗೊದಿಂದ ಬಳಲುವ ಸಾಧ್ಯತೆ ಎರಡರಿಂದ ಮೂರು ಪಟ್ಟು ಹೆಚ್ಚಾಗಿರುತ್ತದೆ. ಇದಕ್ಕೆ ಕಾರಣ ಅಸ್ಪಷ್ಟವಾಗಿದ್ದರೂ, ಹಾರ್ಮೋನುಗಳ ಪ್ರಭಾವದಿಂದ ಇದು ಏರ್ಪಡಬಹುದು ಎಂದು ತಜ್ಞರು ಸೂಚಿಸುತ್ತಾರೆ. ಒಬ್ಬ ಮಹಿಳೆಯ ಜೀವನದ ವಿವಿಧ ಹಂತಗಳಾದ್ಯಂತ ಹೆಚ್ಚಿದ ಹಾರ್ಮೋನುಗಳ ಏರುಪೇರಿನಿಂದಾಗಿ ವರ್ಟಿಗೊ ಏರ್ಪಡಬಹುದು. ಉದಾಹರಣೆಗೆ, ಕೆಲವು ಮಹಿಳೆಯರು, ತಮ್ಮ ಮಾಸಿಕ ಋತುಚಕ್ರಕ್ಕೆ ಮುನ್ನ ಹೆಚ್ಚಿನ ವರ್ಟಿಗೊ ರೀತಿಯ ಅನುಭವಗಳನ್ನು ವರದಿ ಮಾಡಿದ್ದರು. ಋತುಬಂಧ ಪರಿವರ್ತನೆಯ ಸಮಯದಲ್ಲಿ ಮಹಿಳೆಯರು ಈ ಹಾರ್ಮೋನುಗಳ ಏರುಪೇರಿನಿಂದಾಗಿ ಮೈಗ್ರೇನ್ ಕೂಡ ಅನುಭವಿಸಬಹುದು. ವರ್ಟಿಗೊಗೂ ಮೈಗ್ರೇನ್‌ಗೂ ಇರುವ ಸಂಬಂಧವನ್ನು ಪರಿಗಣಿಸಿದಾಗ, ವರ್ಟಿಗೊ ಮಹಿಳೆಯರನ್ನು ಏಕೆ ಹೆಚ್ಚು ಬಾಧಿಸುತ್ತದೆ ಎಂಬುದಕ್ಕೆ ವಿವರಣೆ ಸಿಗಬಹುದು.
ಅಬಾಟ್ ಇಂಡಿಯಾದ ಮೆಡಿಕಲ್ ಡೈರೆಕ್ಟರ್ ಡಾ. ಜೆಜೋ ಕರಣ್‌ಕುಮಾರ್, “ವರ್ಟಿಗೊ, ಒಬ್ಬ ವ್ಯಕ್ತಿಯ ದಿನನಿತ್ಯದ ಜೀವನದ ಮೇಲೆ ಮಹತ್ತರವಾದ ಪ್ರಭಾವ ಏರ್ಪಡಿಸಿ, ಅವರು ತಮ್ಮ ಜೀವನವನ್ನು ಸಾಧ್ಯಂತವಾಗಿ ಸಂಪೂರ್ಣವಾಗಿ ಜೀವಿಸುವುದಕ್ಕೆ ತಡೆಯಾಗಬಹುದು. ಆರಂಭಿಕ ವರ್ಟಿಗೊ ರೋಗಪತ್ತೆಯಿಂದ ಜನರು ಪ್ರಯೋಜನಪಡೆದುಕೊಳ್ಳುವುದಕ್ಕೆ ನೆರವಾಗುವುದು ಅಬಾಟ್‌ನಲ್ಲಿ ನಮ್ಮ ಗುರಿಯಾಗಿದ್ದು, ಅವರು ತಮಗೆ ಅಗತ್ಯವಾದ ಶುಶ್ರೂಷೆ ಪಡೆದುಕೊಂಡು ಜೀವನದಲ್ಲಿ ಆತ್ಮವಿಶ್ವಾಸದಿಂದ ಮುಂದುವರಿಯುವುದಕ್ಕೆ ನೆರವಾಗಬೇಕೆಂದಿದ್ದೇವೆ. ಜನರು ತಮ್ಮ ಆರೋಗ್ಯದ ಮೇಲೆ ನಿಯಂತ್ರಣ ಸಾಧಿಸಿಕೊಳ್ಳುವುದಕ್ಕಾಗಿ ಅವರನ್ನು ಸಬಲಗೊಳಿಸಲು ಅಬಾಟ್ ರೋಗಪತ್ತೆ ಸಾಧನಗಳಿಗೆ ಪ್ರವೇಶಾವಕಾಶ ಇರುವಂತಹ ವರ್ಟಿಗೊ ರೋಗಪತ್ತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಪರಿಸ್ಥಿತಿಯ ಕುರಿತು ಅರಿವು ಮೂಡಿಸಲು ಮತ್ತು ಅದನ್ನು ನಿಭಾಯಿಸುವ ವಿಧಾನಗಳನ್ನು ತಿಳಿದುಕೊಳ್ಳಲು ನಾವು ವೈದ್ಯರನ್ನು(ಫಿಸಿಶಿಯನ್ಸ್) ಕಾರ್ಯಾಗಾರಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ಇದು ರೊಬೊಟಿಕ್ ಹೆಡ್ ಒಳಗೊಂಡಿದ್ದು ಇದು ತಲೆ ಮತ್ತು ಕಣ್ಣಿನ ಚಲನೆಗಳ ಆಧಾರದ ಮೇಲೆ ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳುವುದಕ್ಕೆ ವೈದ್ಯರಿಗೆ ನೆರವಾಗುತ್ತದೆ.”ಎಂದು ಹೇಳಿದರು.
ಇದನ್ನೂ ಓದಿ: ಹೃದಯಾಘಾತದ ಈ ಸಂಕೇತಗಳನ್ನು ನಿರ್ಲಕ್ಷಿಸಬೇಡಿ!
ಅನಿಶ್ಚಿತತೆ ಮತ್ತು ನಿಯಂತ್ರಣದ ಕೊರತೆಯಿಂದಾಗಿ ವರ್ಟಿಗೊ ಇರಿಸುಮುರಿಸು ಏರ್ಪಡಿಸಬಹುದು. ಮೇಲಾಗಿ, ಇದು ನೆನಪಿನ ಶಕ್ತಿಯ ನಷ್ಟ ಅಥವಾ “ಮಿದುಳಿನ ಮಂಜು(ಬ್ರೈನ್ ಫಾಗ್)” ಒಳಗೊಂಡಂತೆ, ಇದರ ಸವಾಲುಗಳನ್ನೂ ಏರ್ಪಡಿಸಿ ವ್ಯಕ್ತಿಯು ಸ್ಪಷ್ಟವಾಗಿ ಆಲೋಚಿಸುವ, ಏಕಾಗ್ರತೆ ಹೊಂದಿರುವ ಅಥವಾ ಮಾಹಿತಿಯನ್ನು ನೆನಪಿನಲ್ಲಿಟ್ಟುಕೊಳ್ಳುವ ಸಾಮರ್ಥ್ಯವನ್ನು ಬಾಧಿಸಬಹುದು. , ವರ್ಟಿಗೊ, ವ್ಯತಿಯ ಜೀವನದ ಹಲವಾರು ಅಂಶಗಳ ಮೇಲೂ ಪ್ರಭಾವ ಬೀರಿ ಸ್ವಾತಂತ್ರ್ಯದ ನಷ್ಟ ಏರ್ಪಡಿಸುವುದರ ಜೊತೆಗೆ, ದಿನನಿತ್ಯದ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕೂ ತಡೆಯಾಗುತ್ತದೆ. ಈ ಪರಿಸ್ಥಿತಿಯು ಉದ್ಯೋಗಸ್ಥ ಜನಸಂಖ್ಯೆಯನ್ನೂ ಬಾಧಿಸಿ, ನೌಕರಿದಿನಗಳ ನಷ್ಟ, ಉದ್ಯೋಗ ಬದಲಾವಣೆ ಅಥವಾ ಸಂಪೂರ್ಣವಾಗಿ ಕೆಲಸವನ್ನೇ ಬಿಟ್ಟುಬಿಡುವುದು ಮುಂತಾದ ತೊಂದರೆಗಳಿಂದಾಗಿ ಹಣಕಾಸು ತೊಂದರೆಗಳನ್ನೂ ಏರ್ಪಡಿಸುತ್ತದೆ.
ಆದರೆ, ವರ್ಟಿಗೊವನ್ನು ನಿಭಾಯಿಸಬಹುದು. ಒಮ್ಮೆ ಇದರ ಕಾರಣವನ್ನು ತಿಳಿದುಕೊಂಡ ನಂತರ ವೈದ್ಯರು ಇದಕ್ಕೆ ಚಿಕಿತ್ಸೆ ನೀಡುವ ವಿಧಾನಗಳನ್ನು ಶಿಫಾರಸ್ಸು ಮಾಡಿ ದೀರ್ಘಾವಧಿ ಪರಿಹಾರ ಒದಗಿಸಬಹುದು. ಇದು, ಭೌತಿಕ ಚಿಕಿತ್ಸೆ, ಔಷಧ, ಮನೋಚಿಕಿತ್ಸೆ ಅಥವಾ, ರೋಗಲಕ್ಷಣಗಳ ತೀವ್ರತೆಯನ್ನು ಅವಲಂಬಿಸಿ, ಕೆಲವೊಂದು ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಯನ್ನು ಒಳಗೊಂಡಿರಬಹುದು. ವೆರ್ಟಿಗೊವನ್ನು ಉತ್ತಮವಾಗಿ ನಿಭಾಯಿಸಲು ಜನರು ತಮ್ಮ ವೈದ್ಯರ ಸಲಹೆಯನ್ನು ತಪ್ಪದೆ ಅನುಸರಿಸಿ, ಔಷಧಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ತಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಿಕೊಳ್ಳಬಹುದು. ಆಘಾತ ಏರ್ಪಡಿಸುವ ಪ್ರಚೋದಕಗಳನ್ನು ಗುರುತಿಸಿ ಜೀವನಶೈಲಿ ಬದಲಾವಣೆಗಳನ್ನು, ಅಂದರೆ, ದೇಹ ಅಥವಾ ಕುತ್ತಿಗೆಯ ಕೆಲವು ಇದ್ದಕ್ಕಿದ್ದಂತೆ ಮಾಡುವ ಚಲನೆಗಳನ್ನು ತಪ್ಪಿಸುವ ಮೂಲಕ, ಅವುಗಳನ್ನು ನಿಭಾಯಿಸುವುದರಿಂದ ಜನರು ಮತ್ತು ಅವರ ಪ್ರೀತಿಪಾತ್ರರಿಗೆ ನೆರವಾಗುತ್ತದೆ.
ಇದನ್ನೂ ಓದಿ: ಊಟದ ನಂತರ ಬೆಲ್ಲ ತಿನ್ನಲೇಬೇಕು..! ಪೂರ್ವಜರ ಮಾತಿನ ರಹಸ್ಯ ಏನು ಗೊತ್ತಾ..?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ