Best Drink for Cholesterol : ಕೊಲೆಸ್ಟ್ರಾಲ್ ಎಂದರೆ ನಮ್ಮ ದೇಹದಲ್ಲಿ ಇರುವ ಮೇಣದಂತಹ ಜಿಗುಟಾದ ವಸ್ತುವಾಗಿದೆ.ಇದು ದೇಹದ ಅನೇಕ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಆದರೆ, ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದರೆ ಹಲವು ಸಮಸ್ಯೆಗಳು ಕೂಡಾ ಎದುರಾಗುವ ಅಪಾಯವಿರುತ್ತದೆ.ಮುಖ್ಯವಾಗಿ ಕೆಟ್ಟ ಕೊಲೆಸ್ಟ್ರಾಲ್ ಅಂದರೆ ಎಲ್ ಡಿಎಲ್ ಮಟ್ಟ ಹೆಚ್ಚಾದರೆ ಹೃದಯಾಘಾತ, ಪಾರ್ಶ್ವವಾಯು ಮುಂತಾದ ಕಾಯಿಲೆಗಳ ಅಪಾಯ ಕಾಡುತ್ತದೆ.ಹಾಗಾಗಿ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬೇಕಾಗುತ್ತದೆ.ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು, ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಇದಲ್ಲದೆ, ಕೆಲವು ಆರೋಗ್ಯಕರ ಪಾನೀಯಗಳನ್ನು ಸೇವಿಸುವ ಮೂಲಕವೂ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು. 


COMMERCIAL BREAK
SCROLL TO CONTINUE READING

ನುಗ್ಗೆ ಸೊಪ್ಪಿನ ರಸ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಅನ್ನು ನೈಸರ್ಗಿಕವಾಗಿ ಕಡಿಮೆ ಮಾಡಬೇಕಾದರೆ ನುಗ್ಗೆ ಸೊಪ್ಪನ್ನು ಸೇವಿಸಬೇಕು. ನುಗ್ಗೆಸೊಪ್ಪಿನಲ್ಲಿರುವ ಒಲಿಫೆರಾ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.ಇದು ಕೊಲೆಸ್ಟ್ರಾಲ್ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. 


ಇದನ್ನೂ ಓದಿ : ವೀಳ್ಯದೆಲೆಯನ್ನು ಹೀಗೆ ಸೇವಿಸಿದರೆ ಗಂಟುಗಳಲ್ಲಿ ಕಲ್ಲು ಕಟ್ಟಿರುವ ಯೂರಿಕ್ ಆಸಿಡ್ ಕರಗುವುದು!ಆದರೆ ಇದೇ ಹೊತ್ತಿನಲ್ಲಿ ಸೇವಿಸಿದರೆ ಮಾತ್ರ !


ನುಗ್ಗೆಸೊಪ್ಪಿನ ರಸವನ್ನು ತಯಾರಿಸುವುದು ಹೇಗೆ ? : 
ದೇಹದಲ್ಲಿ ಹೆಚ್ಚುತ್ತಿರುವ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನುಗ್ಗೆ ಸೊಪ್ಪಿನ ರಸವು ತುಂಬಾ ಪ್ರಯೋಜನಕಾರಿ. ಈ ಜ್ಯೂಸ್ ಅನ್ನು ಮನೆಯಲ್ಲಿಯೇ  ತುಂಬಾ ಸುಲಭವಾಗಿ ತಯಾರಿಸಬಹುದು. 


ಇದಕ್ಕೆ ಬೇಕಾಗುವ ಅಗತ್ಯ ಪದಾರ್ಥಗಳು : 
ನುಗ್ಗೆ ಸೊಪ್ಪು - 1 ಹಿಡಿ
ನೀರು - 1 ಗ್ಲಾಸ್
ಜೇನುತುಪ್ಪ - 1 ಟೀಸ್ಪೂನ್
ಬ್ಲಾಕ್ ಸಾಲ್ಟ್ - 1 ಟೀಸ್ಪೂನ್


ತಯಾರಿಸುವ ವಿಧಾನ :
-ಮೊದಲನೆಯದಾಗಿ ನುಗ್ಗೆ ಸೊಪ್ಪನ್ನು ಸ್ವಚ್ಛಗೊಳಿಸಿ ಅವುಗಳನ್ನು ಚೆನ್ನಾಗಿ ತೊಳೆಯಿರಿ.
-ಈಗ ಅದನ್ನು ಮಿಕ್ಸರ್ ಸಹಾಯದಿಂದ ರುಬ್ಬಿಕೊಂಡು ಪೇಸ್ಟ್ ಮಾಡಿ. 
-ಈ ಪೇಸ್ಟ್ ಅನ್ನು 1 ಗ್ಲಾಸ್ ನೀರಿನಲ್ಲಿ ಹಾಕಿ ಮಿಶ್ರಣ ಮಾಡಿ.
-ಈಗ ಅದಕ್ಕೆ ಜೇನುತುಪ್ಪ ಅಥವಾ ಬ್ಲಾಕ್ ಸಾಲ್ಟ್ ಬೆರೆಸಿ ಸೇವಿಸಿ.
-ಅಗತ್ಯ ಎಂದೆನಿಸಿದರೆ ಸ್ವಲ್ಪ ನಿಂಬೆ ರಸವನ್ನು ಕೂಡಾ ಬೆರೆಸಬಹುದು.


ಇದನ್ನೂ ಓದಿ : ಈ ಎಲೆಗಳನ್ನು ಜಗಿದು ತಿಂದರೆ ʼಮಧುಮೇಹʼ 500 ಪ್ರಮಾಣದಲ್ಲಿದ್ದರೂ ವಾಸಿಯಾಗುತ್ತೆ..! ನಿಜ


ನುಗ್ಗೆ ಸೊಪ್ಪಿನ ರಸವನ್ನು ಯಾವಾಗ ಸೇವಿಸಬೇಕು?:
ಈ ರಸವನ್ನು ಯಾವಾಗ ಬೇಕಾದರೂ ಸೇವಿಸಬಹುದು. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಉತ್ತಮ ಫಲಿತಾಂಶ ಸಿಗಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.