ಬೆಳಗ್ಗೆ ಎದ್ದ ತಕ್ಷಣ ಹೀಗಾಗುತ್ತಿದ್ದರೆ ನಿಮಗೆ ಮಧುಮೇಹ ಇರುವುದು ಗ್ಯಾರಂಟಿ !ಚೆಕ್ ಮಾಡಿಕೊಳ್ಳಿ
Tingling in hands and feet : ಬೆಳಗ್ಗೆ ಎದ್ದ ತಕ್ಷಣ ಕೈಯಲ್ಲಿ ಜುಮ್ಮೆನಿಸಿದರೆ ಈ 5 ರೋಗಗಳು ನಿಮ್ಮ ದೇಹದಲ್ಲಿ ಅಡಗಿರಬಹುದು.ಪಾದಗಳು ಜುಮ್ಮೆನಿಸುವುದು, ಕೈಗಳಲ್ಲಿ ಸೂಜಿ ಚುಚ್ಚಿದ ಅನುಭವವಾಗುವುದು ಹೀಗೆಲ್ಲಾ ಆಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
Tingling in hands and feet causes: ಅನೇಕ ಬಾರಿ, ದೀರ್ಘಕಾಲದವರೆಗೆ ಕುಳಿತುಕೊಳ್ಳುವುದರಿಂದ,ಪಾದಗಳ ನರಗಳ ಮೇಲೆ ಒತದ ಉಂಟಾಗುತ್ತದೆ.ಆಗ ಪಾದಗಳಲ್ಲಿ ಜುಮ್ಮೆನಿಸುವ ಅಥವಾ ಇರುವೆ ಹರಡಿದಂಥ ಅನುಭವವಗುತ್ತದೆ.ಆದರೆ, ಪಾದಗಳು ಮತ್ತು ಕೈಗಳಲ್ಲಿ ಪದೇ ಪದೇ ಈ ರೀತಿ ಅನುಭವ ಆಗುತ್ತಿದ್ದರೆ ಅದು ನಿಮ್ಮ ದೇಹದಲ್ಲಿ ಅಡಗಿರುವ ಕೆಲವು ಕಾಯಿಲೆಗಳ ಸಂಕೇತವೂ ಆಗಿರಬಹುದು.
ಸೂಜಿ ಚುಚ್ಚಿದ ನೋವು :
ಕೈಕಾಲುಗಳಲ್ಲಿ ಜುಮ್ಮೆನಿಸುವಿಕೆ ಸಮಸ್ಯೆ ಆಗಾಗ ಕಾಡುತ್ತಿದ್ದರೆ ಅದಕ್ಕೆ ಚಿಕಿತ್ಸೆ ಪಡೆಯಬೇಕಾಗಬಹುದು.ಪಾದಗಳು, ಪಾದದ ಅಡಿಭಾಗಗಳು ಮತ್ತು ಕೈಗಳಲ್ಲಿ ಸೂಜಿ ಚುಚ್ಚಿದ ನೋವಿನ ಅನುಭವವಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.ಈ ಸಮಸ್ಯೆಗಳು ಈ 5 ಗಂಭೀರ ಕಾಯಿಲೆಗಳ ಲಕ್ಷಣಗಳಾಗಿರಬಹುದು.
ಇದನ್ನೂ ಓದಿ : ನೀರಿಗೆ ಈ ಪುಟ್ಟ ಬೀಜಗಳನ್ನು ಹಾಕಿ ಕುಡಿದರೆ ಮುಂದಕ್ಕೆ ಚಾಚಿಕೊಂಡಿರುವ ಹೊಟ್ಟೆ ಒಳಗೆ ಹೋಗುವುದು !ಅದು ಕೂಡಾ ಏಳೇ ದಿನಗಳಲ್ಲಿ
ಮಧುಮೇಹ :
ಮಧುಮೇಹದಲ್ಲಿ,ರಕ್ತದ ಸಕ್ಕರೆಯ ಮಟ್ಟ ವಿಪರೀತ ಏರುತ್ತದೆ.ಇದರಿಂದ ನರಮಂಡಲವು ಹಾನಿಗೊಳಗಾಗುತ್ತದೆ.ಹಾಗಾಗಿ ಪದೇ ಪದೇ ಕೈ ಮತ್ತು ಕಾಲುಗಳಲ್ಲಿ ಜುಮ್ಮೆನಿಸುವ ಸಮಸ್ಯೆ ಉಂಟಾಗುತ್ತದೆ.ಅಲ್ಲದೆ ಕೈ ಮತ್ತು ಕಾಲುಗಳಲ್ಲಿ ಮರಗಟ್ಟಿದ ಹಾಗೆ ಕೂಡಾ ಆಗುವುದು.ಅನಿಯಂತ್ರಿತ ಮಧುಮೇಹದಲ್ಲಿ ಈ ಎರಡೂ ಲಕ್ಷಣಗಳು ತುಂಬಾ ಸಾಮಾನ್ಯವಾಗಿದೆ.
ಹಾನಿಗೊಳಗಾದ ನರಗಳು :
ಅನೇಕ ಬಾರಿ,ಸ್ಲಿಪ್ಡ್ ಡಿಸ್ಕ್ ಸಮಸ್ಯೆಯಿಂದಾಗಿ,ಕಾಲುಗಳಿಗೆ ಸಂಪರ್ಕಗೊಂಡಿರುವ ನರಗಳು ಸಂಕುಚಿತಗೊಳ್ಳುತ್ತವೆ.ಇದು ಪಾದಗಳ ಮರಗಟ್ಟುವಿಕೆಗೆ ಕಾರಣವಾಗಬಹುದು ಮತ್ತು ಪಾದಗಳಲ್ಲಿ ಜುಮ್ಮೆನಿಸುವಿಕೆ ಸಮಸ್ಯೆಗಳನ್ನು ಉಂಟುಮಾಡಬಹುದು. ಇದನ್ನು ಕಾರ್ಪಲ್ ಟನಲ್ ಸಿಂಡ್ರೋಮ್ ಎಂದೂ ಕರೆಯುತ್ತಾರೆ.
ಮೂತ್ರಪಿಂಡ ಹಾನಿ :
ವಿಷವನ್ನು ಫಿಲ್ಟರ್ ಮಾಡುವ ಪ್ರಕ್ರಿಯೆಯಲ್ಲಿ ಮೂತ್ರಪಿಂಡಗಳು ಹಾನಿಗೊಳಗಾಗಬಹುದು.ಇದರಿಂದ ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸಲು ತೊಂದರೆಯಾಗುತ್ತದೆ.ಮೂತ್ರಪಿಂಡದ ಕಾರ್ಯಚಟುವಟಿಕೆಯಲ್ಲಿನ ಕ್ಷೀಣತೆಯು ಕೈ ಮತ್ತು ಕಾಲುಗಳಲ್ಲಿ ಜುಮ್ಮೆನಿಸುವಿಕೆಗೆ ಕಾರಣವಾಗಬಹುದು.
ಇದನ್ನೂ ಓದಿ : ಲಿವರ್ ಆರೋಗ್ಯ ಕೆಡುತ್ತಿದೆ ಎನ್ನುವುದನ್ನು ಖಚಿತವಾಗಿ ತೋರಿಸುತ್ತದೆ ಈ ಲಕ್ಷಣಗಳು! ನಿರ್ಲಕ್ಷ್ಯ ಬೇಡವೇ ಬೇಡ
ಪೌಷ್ಟಿಕಾಂಶದ ಕೊರತೆಗಳು :
ವಿಟಮಿನ್ ಇ ಮತ್ತು ವಿಟಮಿನ್ ಬಿ ಕೊರತೆಯಂತಹ ಕೆಲವು ಪೋಷಕಾಂಶಗಳ ಕೊರತೆಯು ದೇಹದಲ್ಲಿ ಜುಮ್ಮೆನಿಸುವಿಕೆಗೆ ಕಾರಣವಾಗಬಹುದು. ದೇಹದಲ್ಲಿ ಪೋಷಕಾಂಶಗಳ ಕೊರತೆಯ ಈ ಲಕ್ಷಣಗಳು ಕಂಡು ಬಂದರೆ ಖಂಡಿತವಾಗಿಯೂ ಪರೀಕ್ಷೆ ಮಾಡಿಸಿಕೊಳ್ಳಲೇ ಬೇಕು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.