Green Leaves Health Benefits: ಇತರ ಋತುಗಳಿಗಿಂತ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಹಾಗಾಗಿಯೇ, ಶೀತ, ನೆಗಡಿ, ಜ್ವರದಂತಹ ಸಾಂಕ್ರಾಮಿಕ ರೋಗಗಳು ಬಹಳ ಸುಲಭವಾಗಿ ಹರಡುತ್ತವೆ. ಇದನ್ನು ತಪ್ಪಿಸಲು ಬಯಸುವವರಿಗೆ ಸೊಪ್ಪುಗಳು ವರದಾನವಿದ್ದಂತೆ ಎನ್ನುತ್ತಾರೆ ಆಯುರ್ವೇದ ತಜ್ಞರು.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ನಮ್ಮಲ್ಲಿ ಕೆಲವರು ಚಳಿಗಾಲದಲ್ಲಿ ಶೀತವಾಗಬಾರದು ಎಂದು ಸೊಪ್ಪುಗಳ ಸೇವನೆಯನ್ನು ತಪ್ಪಿಸುತ್ತಾರೆ. ಆದರೆ, ಆಯುರ್ವೇದ ತಜ್ಞರ ಪ್ರಕಾರ, ಚಳಿಗಾಲದಲ್ಲಿ ಸೊಪ್ಪುಗಳ ಸೇವನೆಯಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುವುದರ ಜೊತೆಗೆ ನಾವು ಹಲವು ಸಾಮಾನ್ಯ ಕಾಯಿಲೆಗಳಿಂದಲೂ ದೂರ ಉಳಿಯಬಹುದು ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಚಳಿಗಾಲದಲ್ಲಿ ಉತ್ತಮ ಆರೋಗ್ಯಕ್ಕಾಗಿ ಯಾವ ಸೊಪ್ಪುಗಳನ್ನು ಸೇವಿಸಬೇಕು ಎಂದು ತಿಳಿಯೋಣ...


ಆರೋಗ್ಯಕರ ಜೀವನಕ್ಕಾಗಿ ಚಳಿಗಾಲದಲ್ಲಿ ಈ ಸೊಪ್ಪುಗಳನ್ನು ತಿನ್ನಲೇಬೇಕು:
ಪುದೀನ ಸೊಪ್ಪು:

ಪ್ರೋಟೀನ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಸಿ ನಂತಹ ಪೋಷಕಾಂಶಗಳ ಆಗರ ಪುದೀನಾ ಸೊಪ್ಪನ್ನು ಚಳಿಗಾಲದಲ್ಲಿ ಹೆಚ್ಚು ಬಳಸುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. 


ಇದನ್ನೂ ಓದಿ- ಚಳಿಗಾಲದಲ್ಲಿ ಉತ್ತಮ ಆರೋಗ್ಯಕ್ಕಾಗಿ ಈ ಆಹಾರಗಳನ್ನು ತಪ್ಪದೇ ಸೇವಿಸಿ


ಕರಿಬೇವಿನ ಸೊಪ್ಪು:
ಚಳಿಗಾಲದಲ್ಲಿ ಮಾತ್ರವಲ್ಲ ಎಲ್ಲಾ ಋತುಗಳಲ್ಲೂ ಕರಿಬೇವಿನ ಸೊಪ್ಪು ಆರೋಗ್ಯಕ್ಕೆ ಪ್ರಯೋಜನಕಾರಿ. ಕರಿಬೇವಿನ ಸೋಪ್ಪಿನಲ್ಲಿರುವ ಆ್ಯಂಟಿ ಆಕ್ಸಿಡೆಂಟ್‌ಗಳು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ರೋಗಗಳನ್ನು ಗುಣಪಡಿಸುವಲ್ಲಿ ಬಹಳ ಪರಿಣಾಮಕಾರಿ. ಮಾತ್ರವಲ್ಲ, ಇದು ಕೂದಲ ಬೆಳವಣಿಗೆ ಮತ್ತು ಕಣ್ಣುಗಳ ಆರೋಗ್ಯಕ್ಕೂ ಪ್ರಯೋಜನಕಾರಿ ಆಗಿದೆ.


ನುಗ್ಗೆ ಸೊಪ್ಪು:
ನುಗ್ಗೆ ಸೊಪ್ಪಿನಲ್ಲಿ ಕಬ್ಬಿಣದ ಅಂಶದ ಜೊತೆಗೆ ಪೋಷಕಾಂಶಗಳು ಹೇರಳವಾಗಿವೆ. ಇದಲ್ಲದೆ, ನುಗ್ಗೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ ಡಿ ಅಂಶ ಹೇರಳವಾಗಿರುತ್ತದೆ. ಇದು ನಿಮ್ಮನ್ನು ಹಲವು ಕಾಯಿಲೆಗಳಿಂದ ದೂರ ಉಳಿಯಲು ಸಹಾಯಕವಾಗಿದೆ.


ದೊಡ್ಡಪತ್ರೆ:
ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ದೊಡ್ಡಪತ್ರೆ ಎಲೆಗಳನ್ನು ನಿಮ್ಮ ಆಹಾರದ ಭಾಗವಾಗಿಸುವುದರಿಂದ ಅದರಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ ವೈರಸ್ ಗುಣಲಕ್ಷಣಗಳು ಹಲವು ಕಾಯಿಲೆಗಳಿಂದ ನಿಮ್ಮನ್ನು ದೂರವಿಡುತ್ತದೆ.


ಇದನ್ನೂ ಓದಿ- Skin Care: ಮೊಡವೆ ಮುಕ್ತ ಕ್ಲಿಯರ್ ಸ್ಕಿನ್ ಪಡೆಯಲು ಕೇಸರಿಯನ್ನು ಈ ರೀತಿ ಬಳಸಿ


ತುಳಸಿ ಎಲೆ:
ಭಾರತೀಯ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನಮಾನವನ್ನು ಹೊಂದಿರುವ ತುಳಸಿ ಎಲೆಗಳು ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಪ್ರಯೋಜನಕಾರಿ ಆಗಿದೆ. ತುಳಸಿ ಎಲೆಗಳಲ್ಲಿ ಸಾಂಕ್ರಾಮಿಕ ರೋಗಗಳನ್ನು ಗುಣಪಡಿಸಬಲ್ಲ ಹಲವು ಔಷಧೀಯ ಗುಣಗಳು ಇದರಲ್ಲಿ ಅಡಕವಾಗಿವೆ. ಹಾಗಾಗಿ, ತುಳಸಿ ಎಲೆಗಳ ಸೇವನೆ ನಿಮ್ಮನ್ನು ಶೀತ, ಜ್ವರದಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.