ನವದೆಹಲಿ: Weight Loss Tips - ತೂಕ ಇಳಿಕೆ ಮಾಡಲು ನೀವು ಬೇವಿನ ಹೂವುಗಳು ಮತ್ತು ನಿಂಬೆಯನ್ನು ಸಹ ಬಳಸಬಹುದು. ಆಯುರ್ವೇದದಲ್ಲಿ ಬೇವಿಗೆ ವಿಶೇಷ ಪ್ರಾಮುಖ್ಯತೆ ಇದೆ ಎಂದು ಎಲ್ಲರಿಗೂ ತಿಳಿದಿದೆ. ಇದರ ಬಳಕೆಯಿಂದ ತ್ವಚೆಯ ಸಮಸ್ಯೆಯಿಂದ ಹಿಡಿದು ತೂಕ  ಹೆಚ್ಚಾಗುವ (Reduce Weight) ಸಮಸ್ಯೆಯನ್ನು ನೀಗಿಸಬಹುದು, ಆದರೆ ನೀವು ಎಂದಾದರೂ ತೂಕ ಇಳಿಸಲು ಬೇವಿನ ಹೂವುಗಳನ್ನು ಬಳಸಿದ್ದೀರಾ? ನೀವು ಬೇವಿನ ಹೂವುಗಳ ಚಹಾವನ್ನು ಸೇವಿಸಿದರೆ, ನಿಮ್ಮ ತೂಕವು ವೇಗವಾಗಿ ಇಳಿಕೆಯಾಗಲು ಆರಂಭಿಸುತ್ತದೆ.

COMMERCIAL BREAK
SCROLL TO CONTINUE READING

ತೂಕ ಇಳಿಸಿಕೊಳ್ಳಲು ಬೇವಿನ ಹೂವಿನ ಚಹಾವನ್ನು ಸೇವಿಸಬಹುದು. ಆದರೆ, ಈ ಚಹಾ ತಯಾರಿಸಲು ನಿಮಗೆ ಹೆಚ್ಚು ಪರಿಶ್ರಮ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಮೊದಲು ನೀವು ತಾಜಾ ಬೇವಿನ ಹೂವುಗಳನ್ನು ತೆಗೆದುಕೊಳ್ಳಿ. ಈಗ ಈ ಹೂವುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಇದರ ನಂತರ ಅದನ್ನು 1 ಕಪ್ ನೀರಿನಲ್ಲಿ ಚೆನ್ನಾಗಿ ಕುದಿಸಿ. ಈ ಚಹಾ ಸಿದ್ಧವಾಗಲಿದೆ. ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಈ ಚಹಾವನ್ನು ಸೇವಿಸುವುದರಿಂದ ದೇಹದ ತೂಕ ಇಳಿಕೆಯಾಗುತ್ತದೆ.


ಇದನ್ನೂ ಓದಿ-Sleeping Tips: ಕೇವಲ 4 ಗಂಟೆಗಳಲ್ಲಿ 8 ಗಂಟೆಗಳ ಸಂಪೂರ್ಣ ಮತ್ತು ಫ್ರೆಶ್ ನಿದ್ರೆ ಪಡೆಯಲು ದಿಗ್ಗಜರು ಬಳಸುವ ಟೆಕ್ನಿಕ್ ಇದು

ಜೇನುತುಪ್ಪದ ಜೊತೆಗೆ ಬೇವಿನ ಹೂವುಗಳನ್ನು ಬಳಸಿ ಹೊಟ್ಟೆ ಕೊಬ್ಬು ಕರಗಿಸಿಕೊಳ್ಳಬಹುದು
ಇದಲ್ಲದೇ ಬೇವಿನ ಹೂವು ಮತ್ತು ಜೇನುತುಪ್ಪವನ್ನು ಒಟ್ಟಿಗೆ ಬಳಸುವುದರಿಂದ ತೂಕವನ್ನು ಇಳಿಕೆ ಮಾಡಿಕೊಳ್ಳಬಹುದು. ಈ ಎರಡರ ಸಂಯೋಜನೆಯು ನಿಮ್ಮ ದೇಹದ ತೂಕವನ್ನು ತ್ವರಿತವಾಗಿ ಕಡಿಮೆ ಮಾಡಲು ತುಂಬಾ ಪರಿಣಾಮಕಾರಿಯಾಗಿದೆ. ಇದನ್ನು ಬಳಸಲು, ಕೆಲವು ಬೇವಿನ ಹೂವುಗಳನ್ನು ತೆಗೆದುಕೊಳ್ಳಿ. ಈಗ ಅವುಗಳನ್ನು ಚೆನ್ನಾಗಿ ಪುಡಿಮಾಡಿ. ಇದರ ನಂತರ 1 ಚಮಚ ಜೇನುತುಪ್ಪವನ್ನು ಮಿಶ್ರಣ ಮಾಡಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಮಿಶ್ರಣವನ್ನು ಸೇವಿಸುವುದರಿಂದ ಹೊಟ್ಟೆಯ ಕೊಬ್ಬು ತ್ವರಿತವಾಗಿ ಕಡಿಮೆಯಾಗುತ್ತದೆ.ಇದರೊಂದಿಗೆ, ನೀವು ಬೇವಿನ ಚಹಾಕ್ಕೆ ನಿಂಬೆಯನ್ನೂ ಸಹ ಸೇರಿಸಬಹುದು.


ಇದನ್ನೂ ಓದಿ-Healthy Heart: Heart Attack ಗೂ ಮುನ್ನ ಕಾಣಿಸಿಕೊಳ್ಳುವ ಈ 6 ಸಂಕೇತಗಳು ನಿಮಗೂ ತಿಳಿದಿರಲಿ, ಇಗ್ನೋರ್ ಮಾಡ್ಬೇಡಿ

(Disclaimer:ಈ ಲೇಖನದಲ್ಲಿ ನೀಡಲಾಗಿರುವ ಮನೆಮದ್ದು ಮಾಹಿತಿ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಲು ಮರೆಯಬೇಡಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.