Neem Leaves benefits : ಬೇವು ತುಂಬಾ ಆರೋಗ್ಯಕರ.ಇದು ಬಹಳ ಸುಲಭವಾಗಿ ಲಭ್ಯವಿರುವ ಸಸ್ಯವಾಗಿದ್ದು,ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವ ರಾಸಾಯನಿಕಗಳನ್ನು ಒಳಗೊಂಡಿದೆ. ಇದಲ್ಲದೆ,ಬೇವಿನ ಎಲೆಗಳು ಹುಣ್ಣುಗಳನ್ನು ಗುಣಪಡಿಸುವ ಮತ್ತು ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಬ್ಯಾಕ್ಟೀರಿಯಾವನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿವೆ.ಬೇವಿನ ಎಲೆಗಳನ್ನು ಜಗಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.1 ತಿಂಗಳ ಕಾಲ ನಿರಂತರವಾಗಿ ಬೇವಿನ ಎಲೆಗಳನ್ನು ಜಗಿಯುವುದರಿಂದ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಸಂಭವಿಸುತ್ತವೆ ಎನ್ನುವುದನ್ನು ವಿವರವಾಗಿ ನೋಡೋಣ. 


COMMERCIAL BREAK
SCROLL TO CONTINUE READING

ರಕ್ತ ಶುದ್ಧವಾಗುತ್ತದೆ :
ಬೇವಿನ ಎಲೆಗಳು ಆಂಟಿಮೈಕ್ರೊಬಿಯಲ್ ಮತ್ತು ರಕ್ತವನ್ನು ಶುದ್ಧೀಕರಿಸುವ ಗುಣಗಳನ್ನು ಹೊಂದಿವೆ.ಇದು ಸುಮಾರು 140 ಸಕ್ರಿಯ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ.ಉತ್ಕರ್ಷಣ ನಿರೋಧಕ ಮತ್ತು ನಂಜುನಿರೋಧಕ ಗುಣಲಕ್ಷಣಗಳನ್ನು ಹೊಂದಿದ್ದು, ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : ಸೌತೆಕಾಯಿಯನ್ನು ಈ ಸಮಯದಲ್ಲಿ ಹೀಗೆಯೇ ಸೇವಿಸಿ !ಹೊಟ್ಟೆಯ ಹಠಮಾರಿ ಕೊಬ್ಬು ಕರಗಿ ಸ್ಲಿಮ್ ಆಗುವುದು ಗ್ಯಾರಂಟಿ


ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ : 
ಬೇವಿನ ಎಲೆಗಳನ್ನು ಜಗಿಯುವುದರಿಂದ ಚರ್ಮಕ್ಕೆ ಹೊಳಪು ಬರುತ್ತದೆ. ಬೇವಿನ ಎಲೆಗಳು ನಿರ್ವಿಷಗೊಳಿಸುವ ಗುಣಲಕ್ಷಣಗಳನ್ನು ಹೊಂದಿವೆ.  ಇದರಿಂದ ಚರ್ಮಕ್ಕೆ ಹೊಸ ಹೊಳಪು ಸಿಗುತ್ತದೆ.ಇದು ರಕ್ತವನ್ನು ಶುದ್ಧೀಕರಿಸುವ ಕಾರಣದಿಂದ ಅದರ ಪರಿಣಾಮ ತ್ವಚೆಯ ಮೇಲೆ ಕಾಣಿಸುತ್ತದೆ. 


ರೋಗನಿರೋಧಕ ಶಕ್ತಿ ಹೆಚ್ಚುತ್ತದೆ : 
ಬೇವಿನ ಎಲೆಗಳನ್ನು ಜಗಿಯುವ ಮೂಲಕ ದೇಹದ ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ.ಬೇವಿನಿಂದ ಅನೇಕ ರೀತಿಯ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು.


ಇದನ್ನೂ ಓದಿ : ಎರಡು ಎಸಳು ಬೆಳ್ಳುಳ್ಳಿಗೆ ಈ ಹಣ್ಣನ್ನು ಬೆರೆಸಿ ಮಧ್ಯಾಹ್ನ ಊಟದ ಹೊತ್ತಿಗೆ ಸೇವಿಸಿ !ಸಂಜೆಯ ಒಳಗೆ ಬ್ಲಡ್ ಶುಗರ್ ಆಗುವುದು ನಾರ್ಮಲ್


ಸೋಂಕಿನ ಅಪಾಯ ಕಡಿಮೆಯಾಗುವುದು : 
ಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿವೆ. ಇದು ದೇಹವನ್ನು ಸೋಂಕಿನಿಂದ ರಕ್ಷಿಸುತ್ತದೆ. 


ತೂಕ ಕಡಿಮೆಯಾಗುವುದು : 
ಹಲವಾರು ದಿನಗಳ ಕಾಲ ನಿರಂತರವಾಗಿ ಬೇವಿನ ಎಲೆಗಳನ್ನು ಜಗಿಗು ತಿನ್ನುವ ಮೂಲಕ ದೇಹದ ತೂಕವನ್ನು ತ್ವರಿತವಾಗಿ ಕಡಿಮೆ ಮಾಡಬಹುದು.ಇದು ದೇಹವನ್ನು ನಿರ್ವಿಷಗೊಳಿಸುವ ಗುಣವನ್ನು ಹೊಂದಿದ್ದು, ದೇಹದಿಂದ ತ್ಯಾಜ್ಯ ವಸ್ತುಗಳನ್ನು ತೆಗೆದುಹಾಕುವ ಮೂಲಕ ಹೆಚ್ಚುವರಿ ಕೊಳೆಯನ್ನು ಕಡಿಮೆ ಮಾಡುತ್ತದೆ.


ರಕ್ತದ ಸಕ್ಕರೆ ನಿಯಂತ್ರಣ : 
ಹಲವಾರು ದಿನಗಳವರೆಗೆ ನಿರಂತರವಾಗಿ ಬೇವಿನ ಎಲೆಗಳನ್ನು ಜಗಿಯುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು.ಇದು ರಕ್ತದಲ್ಲಿನ ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. 


ತಿನ್ನಲು ಸರಿಯಾದ ವಿಧಾನ : 
ಖಾಲಿ ಹೊಟ್ಟೆಯಲ್ಲಿ ಬೇವಿನ ಎಲೆಗಳನ್ನು ಜಗಿಯಿರಿ.ಬೇವಿನ ಎಳೆ  ಎಲೆಗಳನ್ನು ಕಿತ್ತು ಅಗಿದು ತಿನ್ನಲು ಪ್ರಯತ್ನಿಸಿ.ಎಲೆ ಎಲೆಗಳು ಅಷ್ಟಾಗಿ ಕಹಿಯಾಗಿರುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.