ನವದೆಹಲಿ: Disadvantages Of Drinking More Milk - ಅತಿಯಾಗಿ ಏನನ್ನೂ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಸಂಗತಿ ಎಲ್ಲರಿಗೂ ತಿಳಿದೇ ಇದೆ. ಒಂದು ವೇಳೆ ನೀವು ಹೋದ ಅಗತ್ಯಕ್ಕಿಂತ ಹೆಚ್ಚು ಹಾಲನ್ನು ಸೇವಿಸುತ್ತಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಏಕೆಂದರೆ ಅದು ಹಲವು ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಲು, ಕೂದಲು, ಚರ್ಮ ಹಾಗೂ ಹಲ್ಲುಗಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಒಳಗೊಂಡಿದೆ. ಆದರೆ, ಹೆಚ್ಚು ಹಾಲು ಕುಡಿಯುವುದರಿಂದ ಆರೋಗ್ಯಕ್ಕೆ (Health Tips) ಪ್ರಯೋಜನ ಉಂಟಾಗುವ ಬದಲಿಗೆ ಹಾನಿ ಉಂಟಾಗುತ್ತದೆ. 

COMMERCIAL BREAK
SCROLL TO CONTINUE READING

ಸ್ಕಿನ್ ಅಲರ್ಜಿಗೆ ಕಾರಣ (Skin Infection Due To Drinking More Milk, )
ಹಾಲಿನ ಅತಿಯಾದ ಸೇವನೆಯಿಂದ ಅನೇಕ ಬಾರಿ ಚರ್ಮದ ಅಲರ್ಜಿ ಉಂಟಾಗುತ್ತದೆ. ಇದರ ಅತಿಯಾದ ಸೇವನೆಯಿಂದ ದೇಹದಲ್ಲಿ ಎಲ್ಲೆಂದರಲ್ಲಿ ಮೊಡವೆಗಳು ಮತ್ತು ದದ್ದುಗಳು ಕಾಣಿಸಿಕೊಳ್ಳುತ್ತವೆ. ಇದಲ್ಲದೆ, ಇದರಿಂದ ಹಲವಾರು ರೀತಿಯ ಅನಾನುಕೂಲತೆಗಳಿವೆ. ಹೆಚ್ಚು ಹಾಲು ಕುಡಿಯುವುದರಿಂದ ಆಗುವ ಇತರ ಅನಾನುಕೂಲಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ದಣಿವಿನ ಅನುಭವ ಉಂಟಾಗುತ್ತದೆ
ಅತಿಯಾದ ಹಾಲು ಸೇವನೆಯಿಂದ ಸುಸ್ತು ಹಾಗೂ ದಣಿವಾದ ಅನುಭವ ಉಂಟಾಗುತ್ತದೆ. ಏಕೆಂದರೆ ಹಲವರಿಗೆ ಹಾಲು ಜೀರ್ಣವಾಗುವುದಿಲ್ಲ. ಇದರಿಂದ ಅವರಿಗೆ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಈ ಅವಧಿಯಲ್ಲಿ ಅಪಚನ ಹಾಗೂ ವಾಂತಿ ಸಮಸ್ಯೆ ಮುಖ್ಯವಾಗಿ ಕಾಣಿಸಿಕೊಳ್ಳುತ್ತದೆ.

ಹೃದಯ ಸಮಸ್ಯೆಗೆ ಕಾರಣ (Heart Attack Risk Due To Drinking More Milk)
ದಿನದಲ್ಲಿ ಮೂರು ಗ್ಲಾಸ್ ಗೂ ಅಧಿಕ ಹಾಲನ್ನು ಸೇವಿಸಿದರೆ, ನಿಮ್ಮಲ್ಲಿ ಹೃದಯಕ್ಕೆ ಸಂಬಂಧಿಸಿದ ಅಪಾಯ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಸೀಮಿಯ ಪ್ರಮಾಣದಲ್ಲಿ ಹಾಲನ್ನು ಸೇವಿಸಲು ಪ್ರಯತ್ನಿಸಿ.


ಇದನ್ನೂ ಓದಿ-Belly Fat ಕಡಿಮೆಯಾಗುತ್ತಿಲ್ಲವೇ? ಹಾಗಿದ್ರೆ, ಈ 3 ಸಲಹೆಗಳನ್ನು ಅನುಸರಿಸಿ

ಹೊಟ್ಟೆ ಉಬ್ಬರಕ್ಕೆ ಕಾರಣ
ಇದಲ್ಲದೆ, ಹೆಚ್ಚಿನ ಹಾಲು ಸೇವನೆ ಹೊಟ್ಟೆಉಬ್ಬರದ ಸಮಸ್ಯೆಗೆ ಕಾರಣವಾಗಬಹುದು. ಇದರ ಜೊತೆಗೆ ಗ್ಯಾಸ್ ಸಮಸ್ಯೆ ಕಾಣಿಸಿಕೊಳ್ಳಬಹುದು. ಹೀಗಾಗಿ ದೇಹಕ್ಕೆ ಅಗತ್ಯವಿರುವಷ್ಟು ಮಾತ್ರ ಹಾಲನ್ನು ಸೇವಿಸಿದರೆ ಉತ್ತಮ.


ಇದನ್ನೂ ಓದಿ-Summer Health Tips : ಬೇಸಿಗೆಯಲ್ಲಿ ಪ್ರತಿದಿನ ಸೇವಿಸಿ ಮೊಸರು : ಇದರಿಂದ ಆರೋಗ್ಯಕ್ಕಿದೆ ಈ 4 ಪ್ರಯೋಜನಗಳು

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮನೆಮದ್ದು ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.