ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳ ಸೇವಸಿದರೆ ತಪ್ಪಿದ್ದಲ್ಲ ಸಮಸ್ಯೆ
Things Avoid In Empty Stomach: ಉತ್ತಮ ಆರೋಗ್ಯಕ್ಕೆ ನಮ್ಮ ಮುಂಜಾನೆ ಆಹಾರದ ಬಗ್ಗೆ ವಿಶೇಷ ಕಾಳಜಿ ಅಗತ್ಯವಿದೆ. ಆರೋಗ್ಯ ತಜ್ಞರ ಪ್ರಕಾರ, ಟೀ-ಕಾಫಿ ಮಾತ್ರವಲ್ಲ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇನ್ನೂ ಕೆಲ ಆಹಾರಗಳ ಸೇವನೆಯು ಆರೋಗ್ಯಕ್ಕೆ ಹಾನಿಕರಕ ಎಂದು ಸಾಬೀತುಪಡಿಸಬಹುದು ಎನ್ನಲಾಗುತ್ತದೆ.
Foods Avoid In Empty Stomach: ನಾವು ಮುಂಜಾನೆ ತೆಗೆದುಕೊಳ್ಳುವ ಆಹಾರವು ನಮ್ಮ ಇಡೀ ದಿನಕ್ಕೆ ಶಕ್ತಿಯನ್ನು ತುಂಬುತ್ತದೆ. ಹಾಗಾಗಿ, ನಾವು ಬೆಳಿಗ್ಗೆ ಏನು ತಿನ್ನುತ್ತೇವೆ ಎಂಬ ಬಗ್ಗೆ ವಿಶೇಷ ಗಮನವಿರಬೇಕು. ಸಾಮಾನ್ಯವಾಗಿ ಟೀ-ಕಾಫಿಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬಾರದು, ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುತ್ತದೆ ಎಂದು ನೀವು ಕೇಳಿರಬಹುದು. ಆದರೆ, ಕೇವಲ ಟೀ-ಕಾಫಿ ಮಾತ್ರವಲ್ಲ ಇನ್ನೂ ಕೆಲವು ಆಹಾರಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಇದು ಆರೋಗ್ಯಕ್ಕೆ ತೊಂದರೆಯನ್ನು ಉಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ...
* ಸೋಡಾ:
ಸೋಡಾದಲ್ಲಿ ಹೆಚ್ಚಿನ ಪ್ರಮಾಣದ ಕಾರ್ಬೋನೇಟ್ ಆಮ್ಲ ಕಂಡು ಬರುತ್ತದೆ. ಹಾಗಾಗಿ ಖಾಲಿ ಹೊಟ್ಟೆಯಲ್ಲಿ ಸೋಡಾ ಕುಡಿಯುವುದರಿಂದ ಇದು ತಲೆನೋವು, ವಾಕರಿಕೆಯಂತಹ ಸಮಸ್ಯೆಗಳನ್ನು ಉಂಟು ಮಾಡಬಹುದು.
* ಟೊಮೇಟೊ:
ಟೊಮಾಟೊ ಆರೋಗ್ಯಕ್ಕೆ ಒಳ್ಳೆಯದೇ ಆದರೂ ಸಹ ಇದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಹೊಟ್ಟೆಯಲ್ಲಿ ಕಲ್ಲುಗಳ ರಚನೆಗೆ ಕಾರಣವಾಗಬಹುದು.
ಇದನ್ನೂ ಓದಿ- Junk Food Disadvantages: ಮಕ್ಕಳ ಬೆಳವಣಿಗೆಗೆ ಹಾನಿಕಾರಕ ಈ ಜನಪ್ರಿಯ ಜಂಕ್ ಫುಡ್‌ಗಳು
* ಔಷಧಿಗಳು:
ಗ್ಯಾಸ್ಟ್ರಿಕ್ ಮಾತ್ರೆಯನ್ನು ಹೊರತುಪಡಿಸಿ ಬೇರಾವುದೇ ಔಷಧಿಗಳನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳದಂತೆ ವೈದ್ಯರು ಸಲಹೆ ನೀಡುತ್ತಾರೆ. ಖಾಲಿ ಹೊಟ್ಟೆಯಲ್ಲಿ ಔಷಧಿಯನ್ನು ಸೇವಿಸುವುದರಿಂದ ಹೊಟ್ಟೆಯ ಆಮ್ಲದ ಸಮಸ್ಯೆಗಳು ದೇಹದಲ್ಲಿ ಅಸಮತೋಲನವನ್ನು ಉಂಟುಮಾಡುತ್ತವೆ.
* ಆಲ್ಕೋಹಾಲ್:
ಆಲ್ಕೋಹಾಲ್ ಸೇವನೆಯು ದೇಹಕ್ಕೆ ಹಾನಿಕಾರಕ. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಆಲ್ಕೋಹಾಲ್ ಸೇವಿಸುವುದರಿಂದ ಇದು ಆರೋಗ್ಯ ಸಮಸ್ಯೆಗಳನ್ನು ಉಲ್ಬಣಿಸಬಹುದು.
* ಮಸಾಲೆಯುಕ್ತ ಆಹಾರ:
ಖಾಲಿ ಹೊಟ್ಟೆಯಲ್ಲಿ ಯಾವುದೇ ರೀತಿಯ ಮಸಾಲೆಯುಕ್ತ ಆಹಾರವನ್ನು ಸೇವಿಸಬೇಡಿ. ಇದು ಹೊಟ್ಟೆಯ ಜೀರ್ಣಕ್ರಿಯೆಯನ್ನು ಹಾಳುಮಾಡುವ ನೈಸರ್ಗಿಕ ಆಮ್ಲವನ್ನು ಹೊಂದಿರುತ್ತದೆ. ಕೆಲವೊಮ್ಮೆ ಹೊಟ್ಟೆಯ ಸೆಳೆತವೂ ಸಂಭವಿಸುತ್ತದೆ.
ಇದನ್ನೂ ಓದಿ- Side Effects Of Black Pepper: ಕರಿಮೆಣಸು ಒಂದು ಆಯುರ್ವೇದ ಔಷಧಿ, ಆದ್ರೆ ಮಿತಿಮೀರಿ ಸೇವಿಸಿದರೆ!
* ಟೀ:
ಕಾಫಿ ಕುಡಿಯುವುದು ಎಷ್ಟು ಒಳ್ಳೆಯದಲ್ಲವೋ ಅದೇ ರೀತಿ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಆಮ್ಲೀಯತೆ ಸಮಸ್ಯೆ ಹೆಚ್ಚಾಗಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.