ಈ ಆಹಾರಗಳನ್ನು ಫ್ರಿಜ್ ನಲ್ಲಿಟ್ಟರೆಯೇ ಕೆಡುತ್ತದೆ ! ನೀವೂ ಈ ವಸ್ತುಗಳಿಗಾಗಿ ರೆಫ್ರಿಜರೇಟರ್ ಬಳಸುತ್ತೀರಾ ?
Foods You Should Never Refrigerate : ಕೆಲವೊಂದು ವಸ್ತುಗಳು ಫ್ರಿಜ್ ನಲ್ಲಿ ಇಟ್ಟರೆಯೇ ಹಾಳಾಗಿ ಬಿಡುತ್ತದೆ. ಆದರೆ ಹೆಚ್ಚಿನವರಿಗೆ ಈ ಬಗ್ಗೆ ತಿಳಿದಿರುವುದಿಲ್ಲ.
Foods You Should Never Refrigerate : ದೀರ್ಘಕಾಲದವರೆಗೆ ಆಹಾರ ಪದಾರ್ಥಗಳನ್ನು ಸುರಕ್ಷಿತವಾಗಿಡಲು ಅಥವಾ ಅವು ಹಾಳಾಗುವುದನ್ನು ತಡೆಯಲು ರೆಫ್ರಿಜರೇಟರ್ ಅನ್ನು ಬಳಸಲಾಗುತ್ತದೆ. ಒಂದು ಕಾಲದಲ್ಲಿ ಬೇಯಿಸಿದ ಮತ್ತು ಹಸಿ ತರಕಾರಿಗಳನ್ನು ಸಂಗ್ರಹಿಸಲು ಬಳಸುತ್ತಿದ್ದ ಫ್ರಿಜ್‌ಗಳು, ಈಗ ಮನೆಗಳ ಬೀರುಗಳಂತೆ ಗೋಚರಿಸುತ್ತವೆ. ಅದರಲ್ಲಿ ಮಸಾಲೆಗಳಿಂದ ಹಿಡಿದು ಒಣ ಹಣ್ಣುಗಳು, ಬೀಜಗಳು, ಹಣ್ಣುಗಳು ಹೀಗೆ ಯಾವುದು ಕೈಗೆ ಸಿಗುತ್ತದೆಯೋ ಎಲ್ಲವನ್ನೂ ಇಡಲಾಗುತ್ತದೆ. ಆದರೆ ಹೀಗೆ ಮಾಡುವುದು ತಪ್ಪು. ಕೆಲವೊಂದು ವಸ್ತುಗಳು ಫ್ರಿಜ್ ನಲ್ಲಿ ಇಟ್ಟರೆಯೇ ಹಾಳಾಗಿ ಬಿಡುತ್ತದೆ. ಆದರೆ ಹೆಚ್ಚಿನವರಿಗೆ ಈ ಬಗ್ಗೆ ತಿಳಿದಿರುವುದಿಲ್ಲ.
ಫ್ರಿಜ್ ನಲ್ಲಿ ಇಡಬಾರದ ವಸ್ತುಗಳು :
ಆಲೂಗಡ್ಡೆ :
ಹೆಚ್ಚಿನ ಭಾರತೀಯ ಅಡುಗೆಮನೆಗಳಲ್ಲಿ ಆಲೂಗಡ್ಡೆಯನ್ನು ಯಾವಾಗಲೂ ಹೇರಳವಾಗಿ ಬಳಸಲಾಗುತ್ತದೆ. ಕೆಲವರು ಆಲುಗಡ್ಡೆಯನ್ನು ಕೂಡಾ ಫ್ರಿಜ್ ನಲ್ಲಿ ಇಡುತ್ತಾರೆ. ಆದರೆ ಆಲುಗಡ್ಡೆಯನ್ನು ಫ್ರಿಜ್ ನಲ್ಲಿ ಇಟ್ಟರೆ ಆಲೂಗೆಡ್ಡೆ ಪಿಷ್ಟವು ಸಕ್ಕರೆಯಾಗಿ ಪರಿವರ್ತನೆಗೊಳ್ಳುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ಇದನ್ನೂ ಓದಿ : ಮೊಸರಿಗೆ ಕೇವಲ ಎರಡು ಹನಿ ಈ ತರಕಾರಿ ರಸ ಬೆರೆಸಿ ಹಚ್ಚಿದರೆ ಬಿಳಿ ಕೂದಲು ಬುಡದಿಂದಲೇ ಕಪ್ಪಾಗುವುದು!
ಬೆಳ್ಳುಳ್ಳಿ :
ಬೆಳ್ಳುಳ್ಳಿಯನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಅದು ಮೊಳಕೆಯೊಡೆಯುತ್ತದೆ. ಹೀಗಾದಾಗ ಅದರ ರುಚಿ ಬದಲಾಗುತ್ತದೆ. ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ರೆಫ್ರಿಜಿರೇಟರ್ ನಲ್ಲಿಟ್ಟರೆ ಅದರಲ್ಲಿರುವ ಔಷಧೀಯ ಗುಣಗಳು ಕಳೆದು ಹೋಗುತ್ತವೆ.ಆದ್ದರಿಂದ ಬೆಳ್ಳುಳ್ಳಿಯನ್ನು ಪ್ಲಾಸ್ಟಿಕ್ ಚೀಲಗಳ ಬದಲಿಗೆ ಕಾಗದ ಅಥವಾ ಬಟ್ಟೆಯ ಚೀಲಗಳಲ್ಲಿ ಇರಿಸಿ.
ಇಡೀ ಮಸಾಲೆಗಳು :
ಇಡೀ ಮಸಾಲೆಗಳನ್ನು ಸಹ ರೆಫ್ರಿಜರೇಟರ್ ನಿಂದ ದೂರವಿಡಬೇಕು. ಏಕೆಂದರೆ ಅವುಗಳನ್ನು ಫ್ರಿಡ್ಜ್‌ನಲ್ಲಿ ಇಡುವುದರಿಂದ ಅವುಗಳ ರುಚಿ, ಪರಿಮಳ ಮತ್ತು ಗುಣಗಳ ಮೇಲೆ ಪರಿಣಾಮ ಬೀರುತ್ತದೆ.ಇಡೀ ಮಸಾಲೆಗಳು ರೆಫ್ರಿಜರೇಟರ್ ನಿಂದ ತೇವಾಂಶವನ್ನು ಹೀರಿಕೊಳ್ಳುತ್ತವೆ. ಇದರಿಂದಾಗಿ ಅವುಗಳ ನೈಸರ್ಗಿಕ ರುಚಿ ಹಾಳಾಗುತ್ತದೆ.
ಇದನ್ನೂ ಓದಿ : ಬೆಂಡೆಕಾಯಿಯನ್ನು ಇದರ ಜೊತೆಗೆ ಬೆರೆಸಿ ಸೇವಿಸಿ ಸಾಕು.. ರಕ್ತದಲ್ಲಿನ ಸಕ್ಕರೆ ಮಟ್ಟ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತೆ!
ಒಣ ಹಣ್ಣುಗಳು :
ಒಣ ಹಣ್ಣುಗಳಾದ ಗೋಡಂಬಿ, ಒಣದ್ರಾಕ್ಷಿ, ಬಾದಾಮಿ, ವಾಲ್‌ನಟ್ಸ್ ಗಳನ್ನು ರೆಫ್ರಿಜರೇಟರ್‌ನಲ್ಲಿ ಹೆಚ್ಚಿನ ಮನೆಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಆದರೆ ಫ್ರಿಜ್‌ನ ಶೀತ ಉಷ್ಣತೆಯು ಅವುಗಳ ನೈಸರ್ಗಿಕ ಸಕ್ಕರೆ ಮತ್ತು ರುಚಿಯ ಮೇಲೆ ಪರಿಣಾಮ ಬೀರುತ್ತದೆ. ಇವುಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಅದರ ತೇವಾಂಶವು ಹೆಚ್ಚಾಗುತ್ತದೆ. ಇದು ಶಿಲೀಂಧ್ರದ ಅಪಾಯವನ್ನು ಉಂಟು ಮಾಡುತ್ತದೆ. ಅಷ್ಟೇ ಅಲ್ಲ, ಅವುಗಳ ನೈಸರ್ಗಿಕ ತೈಲವೂ ಕಡಿಮೆಯಾಗುತ್ತದೆ.
ಕೇಸರಿ :
ರೆಫ್ರಿಜರೇಟರ್ ನಲ್ಲಿ ಹೆಚ್ಚಿನ ಆರ್ದ್ರತೆ ಇರುತ್ತದೆ. ಇದು ಕೇಸರಿ ಎಳೆಗಳನ್ನು ಮೃದು ಮತ್ತು ಜಿಗುಟಾಗುವಂತೆ ಮಾಡಬಹುದು. ಕೆಲವೊಮ್ಮೆ ಕೇಸರಿ ಒಣಗಿಯೂ ಹೋಗಬಹುದು. ಈ ಎರಡೂ ಸಂದರ್ಭಗಳಲ್ಲಿ ಕೇಸರಿಯ ಸ್ವಾಭಾವಿಕ ರುಚಿ ಮತ್ತು ಪರಿಮಳ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ ರೆಫ್ರಿಜರೇಟರ್ ಬೆಳಕಿನಿಂದ ಕೇಸರಿಯ ಬಣ್ಣವೂ ಮಂಕಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ