Rice Water Benefits: ಅಕ್ಕಿ ತೊಳೆದ ನೀರನ್ನು ಎಂದಿಗೂ ಚೆಲ್ಲಬೇಡಿ: ಇದರಲ್ಲಿದೆ ಈ ರೋಗವನ್ನು ಬುಡಸಮೇತ ಕಿತ್ತುಹಾಕುವ ಗುಣ
Rice Water Benefits: ಅಕ್ಕಿ ನೀರನ್ನು ಕೆಲವು ಪ್ರದೇಶಗಳಲ್ಲಿ ಗಂಜಿ ಎಂದೂ ಕರೆಯುತ್ತಾರೆ, ಇದು ಅಕ್ಕಿಯನ್ನು ತಯಾರಿಸಿದ ನಂತರ ಅಥವಾ ಅದರಲ್ಲಿ ನೆನೆಸಿದ ನಂತರ ಉಳಿದಿರುವ ನೀರು. ಇದು ಹಲವಾರು ಆರೋಗ್ಯಕರ ಅಮೈನೋ ಆಮ್ಲಗಳು, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ, ಇದು ದೇಹಕ್ಕೆ ಪ್ರಯೋಜನಕಾರಿ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದು ವಿಟಮಿನ್ ಬಿ, ವಿಟಮಿನ್ ಸಿ ಮತ್ತು ನಿಮ್ಮ ದೇಹಕ್ಕೆ ಪ್ರಯೋಜನಕಾರಿಯಾದ ಬಹಳಷ್ಟು ಖನಿಜಗಳನ್ನು ಒದಗಿಸುತ್ತದೆ.
Rice Water Benefits: ಭಾರತದಲ್ಲಿ ಹೆಚ್ಚಾಗಿ ಅಕ್ಕಿಯನ್ನು ಬೆಳೆಯಲಾಗುತ್ತದೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಅನ್ನ ಹೆಚ್ಚು ಸೇವನೆ ಮಾಡಲಾಗುತ್ತಿದೆ. ಇದು ರುಚಿ ಮಾತ್ರವಲ್ಲ ಉತ್ತಮ ಪೋಷಕಾಂಶಗಳಿಂದ ಕೂಡಿರುವ ಆಹಾರವಾಗಿದೆ. ಇಂದು ನಾವು ಅಕ್ಕಿ ತೊಳೆದ ನೀರಿನಿಂದ ನಮಗೆ ಸಿಗುವ ಪ್ರಯೋಜನ್ ಬಗ್ಗೆ ತಿಳಿಸಿಕೊಡಲಿದ್ದೇವೆ.
ಇದನ್ನೂ ಓದಿ: 35 ವರ್ಷದ ನಂತರ ಈ ಲಕ್ಷಣಗಳು ಕಂಡು ಬಂದರೆ ದೇಹದಲ್ಲಿ ಕ್ಯಾಲ್ಷಿಯಂ ಕೊರತೆಯಾಗಿದೆ ಎಂದರ್ಥ
ಅಕ್ಕಿ ನೀರನ್ನು ಕೆಲವು ಪ್ರದೇಶಗಳಲ್ಲಿ ಗಂಜಿ ಎಂದೂ ಕರೆಯುತ್ತಾರೆ, ಇದು ಅಕ್ಕಿಯನ್ನು ತಯಾರಿಸಿದ ನಂತರ ಅಥವಾ ಅದರಲ್ಲಿ ನೆನೆಸಿದ ನಂತರ ಉಳಿದಿರುವ ನೀರು. ಇದು ಹಲವಾರು ಆರೋಗ್ಯಕರ ಅಮೈನೋ ಆಮ್ಲಗಳು, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ, ಇದು ದೇಹಕ್ಕೆ ಪ್ರಯೋಜನಕಾರಿ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದು ವಿಟಮಿನ್ ಬಿ, ವಿಟಮಿನ್ ಸಿ ಮತ್ತು ನಿಮ್ಮ ದೇಹಕ್ಕೆ ಪ್ರಯೋಜನಕಾರಿಯಾದ ಬಹಳಷ್ಟು ಖನಿಜಗಳನ್ನು ಒದಗಿಸುತ್ತದೆ.
ಜೀರ್ಣಕಾರಿ ಪ್ರಕ್ರಿಯೆಗಳಿಗೆ ಸಹಾಯಕ:
ಫುಡ್ ಪಾಯಿಸನಿಂಗ್, ಅತಿಸಾರ ಮತ್ತು ಅಜೀರ್ಣದಂತಹ ಕಾಯಿಲೆಗಳನ್ನು ಶಮನಗೊಳಿಸಲು ಅಕ್ಕಿ ನೀರನ್ನು ಕುಡಿಯಲು ತಜ್ಞರು ಶಿಫಾರಸು ಮಾಡುತ್ತಾರೆ. ಗಂಜಿ ಎಂಬುದು ಸಾಂಪ್ರದಾಯಿಕ ಪಾನೀಯವಾಗಿದ್ದು, ಇದು ಶಾಶ್ವತವಾಗಿ ಚಾಲ್ತಿಯಲ್ಲಿರುವಂತಹದ್ದು. ಅತಿಸಾರದಿಂದ ಬಳಲುತ್ತಿರುವಾಗ ಮಕ್ಕಳಿಗೆ ಈ ಗಂಜಿಯನ್ನು ನೀಡಿದರೆ ಶೀಘ್ರ ಪರಿಹಾರ ಸಿಗುತ್ತದೆ.
ಶಕ್ತಿ-ಸಾಮಾರ್ಥ್ಯ ನೀಡುವುದು:
ಅಕ್ಕಿಯು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಕುದಿಸಿದ ಅಥವಾ ನೆನೆಸಿದ ಅಕ್ಕಿಯ ನೀರನ್ನು ಕುಡಿದರೆ ದೇಹದ ಶಕ್ತಿಯ ಮಟ್ಟವನ್ನು ಪುನಃ ತುಂಬಿಸಲು ಮತ್ತು ಮನಸ್ಥಿತಿಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಕೇರಳದಂತಹ ಅನೇಕ ದಕ್ಷಿಣ ರಾಜ್ಯಗಳಲ್ಲಿ, ಜನರು ರಾತ್ರಿಯ ಉಪವಾಸದ ನಂತರ ಬೆಳಿಗ್ಗೆ ಗಂಜಿ ನೀರನ್ನು ಕುಡಿಯುತ್ತಾರೆ. ಈ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ.
ಹೈಡ್ರೇಟೆಡ್ ಆಗಿರಲು ಸಹಾಯ:
ಬೇಸಿಗೆಯ ತಿಂಗಳಲ್ಲಿ ಅಕ್ಕಿ ನೀರನ್ನು ಕುಡಿದರೆ ದೇಹ ಹೈಡ್ರೇಟೆಡ್ ಆಗಿರುತ್ತದೆ. ವಾಂತಿ ಅಥವಾ ಜ್ವರದಂತಹ ಯಾವುದೇ ರೀತಿಯ ಸೋಂಕನ್ನು ದೂರ ಮಾಡಲು ಗಂಜಿ ಕುಡಿಯಿರಿ.
ಕೂದಲು ಬೆಳವಣಿಗೆಗೆ ಒಳ್ಳೆಯದು:
ಆಗ್ನೇಯ ಏಷ್ಯಾದ ಭಾಗಗಳಲ್ಲಿ ಅನಾದಿ ಕಾಲದಿಂದಲೂ ಅಕ್ಕಿ ನೀರನ್ನು ಕೂದಲು ಬೆಳವಣಿಗೆಯ ಉತ್ಪನ್ನದಂತೆ ಬಳಸಲಾಗುತ್ತದೆ. ಅಕ್ಕಿ ನೀರಿನಲ್ಲಿ ಕೂದಲನ್ನು ತೊಳೆದರೆ, ನಯವಾಗಿರುವಂತೆ ಸಹಾಯ ಮಾಡುತ್ತದೆ.
ಆರೋಗ್ಯಕರ ಮತ್ತು ಮೃದುವಾದ ಚರ್ಮ:
ಒಣ ಚರ್ಮ, ತೆರೆದ ರಂಧ್ರಗಳು ಮತ್ತು ಮೊಡವೆಗಳಂತಹ ಸಮಸ್ಯೆಗಳನ್ನು ನಾವು ರೋಗದಂತೆ ಎದುರಿಸುತ್ತೇವೆ. ಇಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಅಕ್ಕಿ ನೀರನ್ನು ಬಳಸುವುದು ಉತ್ತಮ ಎಂದು ಪೌಷ್ಟಿಕತಜ್ಞರು ಶಿಫಾರಸು ಮಾಡುತ್ತಾರೆ. ಐಸ್ ಟ್ರೇಗೆ ಅಕ್ಕಿ ನೀರನ್ನು ಹಾಕಿ, ಫ್ರೀಜ್ ಮಾಡಿ. ಇದಕ್ಕೆ ಸೌತೆಕಾಯಿಯನ್ನು ಕೂಡ ಸೇರಿಸಿ. ಈ ಐಸ್ ಕ್ಯೂಬ್ಗಳನ್ನು ಟೋನರ್ ಆಗಿ ಮುಖದ ಮೇಲೆ ಅನ್ವಯಿಸಿ. ಈ ಐಸ್ ಕ್ಯೂಬ್ಗಳು ತುಂಬಾ ಪೋಷಣೆ ನೀಡುತ್ತವೆ.
ಇದನ್ನೂ ಓದಿ: ಬಾಯಲ್ಲಿ ಹುಣ್ಣು ಉಂಟಾಗಲೂ ಇವೇ ಪ್ರಮುಖ ಕಾರಣಗಳು
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.