ವಾಶಿಂಗ್ಟನ್: ಚರ್ಮ ಕ್ಯಾನ್ಸರ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕ್ಯಾನ್ಸರ್ ಲಸಿಕೆಗೆ ಸೇರಿಸಬಹುದಾದ ಹೊಸ ಅಂಶವೊಂದನ್ನು ವಿಜ್ಞಾನಿಗಳು ಇತ್ತೀಚೆಗೆ ಕಂಡುಹಿಡಿದಿದ್ದಾರೆ. 


COMMERCIAL BREAK
SCROLL TO CONTINUE READING

PNAS ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ, ಡಿಪ್ರೋವೋಸಿಮ್ ಎಂದು ಕರೆಯಲ್ಪಡುವ ಅಣುವನ್ನು ಪ್ರಸ್ತುತ ಲಸಿಕೆಗೆ ಸೇರಿಸುವುದರಿಂದ ಗೆಡ್ಡೆಯ ಬದಲಾಗಿ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಹಾಯ ಮಾಡಲಿದೆ. ಈ ಲಸಿಕೆಯನ್ನು ಚರ್ಮ ಕ್ಯಾನ್ಸರ್(ಮೆಲನೋಮ)ನಿಂದ ಬಳಲುತ್ತಿರುವ ಇಲಿಗಳ ಮೇಲೆ ಪ್ರಯೋಗಿಸಲಾಗಿದ್ದು, ಕೇವಲ ಔಷಧಿಗಳಿಂದ ರೋಗಕ್ಕೆ ಪರಿಹಾರ ದೊರೆಯದ ಸಂದರ್ಭದಲ್ಲಿ ಈ ವ್ಯಾಕ್ಸಿನ್ ರೋಗಿಯ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಹಾಯವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.


ಮೆಲನೋಮ ಎಂಬುದು ಚರ್ಮದ ಕ್ಯಾನ್ಸರ್'ನ ಒಂದು ವಿಧವಾಗಿದ್ದು, ಮೆಲನೋಸೈಟ್ಗಳನ್ನು ಕರೆಯುವ ಪಿಗ್ಮೆಂತ್(ವರ್ಣದ್ರವ್ಯ)ಗಳನ್ನು ಉತ್ಪಾದಿಸುವ ಕೋಶಗಳು ಪರಿವರ್ತಿತವಾಗಿ ಕ್ಯಾನ್ಸರ್ ಆಗುತ್ತದೆ. ಯುಎಸ್ ಸ್ಕ್ರಿಪ್ಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್'ನ ಪ್ರೊಫೆಸರ್ ಡೇಲ್ ಬಾಗ್ನರ್ ಪ್ರಕಾರ, "ಈ ಸಹ-ಚಿಕಿತ್ಸೆಯು ಮೆಲನೋಮವನ್ನು ಸಂಪೂರ್ಣವಾಗಿ ನಿವಾರಿಸಲು ಪರಿಣಾಮಕಾರಿಯಾಗಿದೆ" ಎಂದಿದ್ದಾರೆ.


ಒಂದು ವೇಳೆ ಕ್ಯಾನ್ಸರ್ ಗೆಡ್ಡೆಗಳು ಮತ್ತೆ ಉತ್ಪತ್ತಿಯಾದಲ್ಲಿ, ಈ ವ್ಯಾಕ್ಸಿನ್ ಅದರ ವಿರುದ್ಧ ಇಮ್ಯೂನ್ ಸಿಸ್ಟಂ ಹೋರಾಡುವ ಸಾಮರ್ಥ್ಯ ಒದಗಿಸಲಿದೆ. ಈ ಮೂಲಕ ಕ್ಯಾನ್ಸರ್ ಪುನಃ ಮರುಕಳಿಸದಂತೆ ಈ ವ್ಯಾಕ್ಸಿನ್ ತಡೆಯಲಿದೆ.