Nipah Virus: ನಿಫಾ ವೈರಸ್ Vs ಕರೋನಾ ವೈರಸ್, ಯಾವ ವೈರಸ್ ಹೆಚ್ಚು ಅಪಾಯಕಾರಿ ಎಂದು ತಿಳಿದಿದೆಯೇ?
Nipah Virus Vs Corona Virus: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಪ್ರಕಾರ, ನಿಫಾ ವೈರಸ್ ಅತ್ಯಂತ ಅಪಾಯಕಾರಿ ವೈರಸ್ ಆಗಿದ್ದು, ಇದು ಪ್ರಾಣಿಗಳು ಮತ್ತು ಮಾನವರಲ್ಲಿ ಗಂಭೀರ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ.
Nipah Virus Vs Corona Virus: ಒಂದೆಡೆ ಕರೋನಾವೈರಸ್ ಸಾಂಕ್ರಾಮಿಕದಿಂದಾಗಿ ಇಡೀ ವಿಶ್ವವೇ ತತ್ತರಿಸಿದೆ. ಈ ಮಧ್ಯೆ ದೇಶದಲ್ಲಿ ಕರೋನಾ ಮೂರನೇ ಅಲೆಯ ಆತಂಕ (Corona Third Wave) ಮನೆಮಾಡಿದೆ. ಅದರಲ್ಲೂ ಮುಖ್ಯವಾಗಿ ಕೇರಳದಲ್ಲಿ ಗರಿಷ್ಠ ಕರೋನಾ ಪ್ರಕರಣಗಳು ದಿನ ನಿತ್ಯ ವರದಿಯಾಗುತ್ತಿವೆ. ಇನ್ನೊಂದೆಡೆ ಕೇರಳದಲ್ಲಿ ಮತ್ತೆ ನಿಫಾ ವೈರಸ್ (Nipah Virus) ಪ್ರಕರಣಗಳು ಪತ್ತೆಯಾಗಿದ್ದು ಅದು ಜನರ ನಿದ್ದೆಗೆಡಿಸಿದೆ.
ಕೇರಳ ರಾಜ್ಯದಲ್ಲಿ 251 ಜನರಲ್ಲಿ ನಿಫಾ ವೈರಸ್ (Nipah Virus) ಪತ್ತೆಯಾಗಿದ್ದು ಅವರಲ್ಲಿ 129 ಮಂದಿ ಆರೋಗ್ಯ ಕಾರ್ಯಕರ್ತರಿದ್ದಾರೆ ಎಂದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೋಮವಾರ ಮಾಹಿತಿ ನೀಡಿದ್ದಾರೆ. ಈ ಪೈಕಿ 38 ಜನರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಇವರಲ್ಲಿ 30 ಜನರು ಆರೋಗ್ಯ ಕಾರ್ಯಕರ್ತರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಮಧ್ಯೆ ನಿಫಾ ವೈರಸ್ Vs ಕರೋನಾ ವೈರಸ್ ಇವೆರಡರಲ್ಲಿ ಯಾವುದು ಹೆಚ್ಚು ಅಪಾಯಕಾರಿ ವೈರಸ್ ಎಂಬ ವಿಷಯವೂ ಭಾರೀ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ- Ganesh Chaturthi: ಕರ್ನಾಟಕದಲ್ಲಿ ಗಣೇಶ ಚತುರ್ಥಿ ಮೆರವಣಿಗೆ ನಿಷೇಧ
ನಿಫಾ ವೈರಸ್ Vs ಕರೋನಾ ವೈರಸ್ ಇವೆರಡರಲ್ಲಿ ಯಾವುದು ಹೆಚ್ಚು ಆಪಾಯಕಾರಿ?
ವಿಶ್ವ ಆರೋಗ್ಯ ಸಂಸ್ಥೆ (World Health Organization) ಪ್ರಕಾರ, ನಿಫಾ ವೈರಸ್ ಅತ್ಯಂತ ಅಪಾಯಕಾರಿ ವೈರಸ್ ಆಗಿದ್ದು, ಇದು ಪ್ರಾಣಿಗಳು ಮತ್ತು ಮಾನವರಲ್ಲಿ ಗಂಭೀರ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ. ಆಘಾತಕಾರಿ ವಿಷಯವೆಂದರೆ, ಇತ್ತೀಚಿಗೆ ನಿಫಾ ವೈರಸ್ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದು ಸಹ ದೃಢಪಟ್ಟಿದೆ.
ನಿಪಹಾಲ್ ವೈರಸ್ ಒಂದು ಜೂನೋಟಿಕ್ ಸೋಂಕು. ನಿಪಾಹ್ ವೈರಸ್ ನಾಯಿ, ಹಂದಿ, ಮೇಕೆ, ಕುರಿ ಮೊದಲಾದ ಪ್ರಾಣಿಗಳಿಂದ ಹರಡುತ್ತದೆ ಎಂದು ನಂಬಲಾಗಿದೆ. ನಿಪಾ ವೈರಸ್‌ಗೆ ಪ್ರಸ್ತುತ ಯಾವುದೇ ಚಿಕಿತ್ಸೆ ಇಲ್ಲ. ಅದೇ ಸಮಯದಲ್ಲಿ, ಅದಕ್ಕೆ ಯಾವುದೇ ಆಂಟಿವೈರಲ್ ಔಷಧವನ್ನು ಸಹ ತಯಾರಿಸಲಾಗಿಲ್ಲ.
ಇದನ್ನೂ ಓದಿ- ಕೊರೊನಾ 3ನೇ ಅಲೆ ಮನೆ ಬಾಗಿಲಿನಲ್ಲೇ ಇದೆ: ಹಬ್ಬದಾಚರಣೆಗೆ ಉದ್ಧವ್ ಠಾಕ್ರೆ ಎಚ್ಚರಿಕೆ
ನಿಫಾ ಸೋಂಕಿನ ಲಕ್ಷಣಗಳು:
- ನಿಫಾ ವೈರಸ್ ಎಂಬ ರೋಗವು 1998-99ರಲ್ಲಿ, ಕೇರಳದಲ್ಲಿ ವೇಗವಾಗಿ ಹರಡಿತು
- ಈ ಸಮಯದಲ್ಲಿ, 265 ಜನರು ಅದರ ಹಿಡಿತಕ್ಕೆ ಒಳಗಾದರು.
- ಸುಮಾರು 40 ಪ್ರತಿಶತದಷ್ಟು ರೋಗಿಗಳು ನರ ರೋಗವನ್ನು ಹೊಂದಿದ್ದರು ಮತ್ತು ಅದರಿಂದಾಗಿ ಸಾವನ್ನಪ್ಪಿದರು ಎಂದು ವರದಿಗಳು ತಿಳಿಸಿವೆ.
- ನಿಫಾ ವೈರಸ್ ಸೋಂಕಿಗೆ ಒಳಗಾದ ವ್ಯಕ್ತಿಯಲ್ಲಿ ಉಸಿರಾಟದ ತೊಂದರೆ ಉಂಟಾಗಬಹುದು.
- ಇದಲ್ಲದೇ ನರಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಉಂಟಾಗಬಹುದು.
- ನಿಫಾ ವೈರಸ್ ಸೋಂಕಿಗೆ ಒಳಗಾದ ನಂತರ, ರೋಗಿಯು 24-48 ಗಂಟೆಗಳಲ್ಲಿ ಕೋಮಾಕ್ಕೆ ಹೋಗಬಹುದು ಎಂದೂ ಕೂಡ ಹೇಳಲಾಗುತ್ತದೆ.
- ಈ ರೋಗವು ಬಾವಲಿಗಳು, ಹಂದಿಗಳು ಅಥವಾ ಮಾನವರ ಮೂಲಕ ಮಾತ್ರ ಮಾನವರಲ್ಲಿ ಹರಡುತ್ತದೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.