Surya Namaskar Benefits: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, ಸೂರ್ಯೋದಯದ ಸಮಯದಲ್ಲಿ ಸೂರ್ಯ ನಮಸ್ಕಾರ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. 12 ಶಕ್ತಿಯುತ ಯೋಗ ಭಂಗಿಗಳ ಅನುಕ್ರಮವೇ ಸೂರ್ಯ ನಮಸ್ಕಾರ. ಸೂರ್ಯ ಮಾಡುವುದರಿಂದ ದೇಹಕ್ಕಷ್ಟೇ ಅಲ್ಲ ಮನಸ್ಸಿನ ಆರೋಗ್ಯಕ್ಕೂ ಪ್ರಯೋಜನಕಾರಿ ಆಗಿದೆ. 


COMMERCIAL BREAK
SCROLL TO CONTINUE READING

ಸೂರ್ಯ ನಮಸ್ಕಾರದಲ್ಲಿ (Surya Namaskar) ಮಾಡುವ ಆಸನಗಳು ದೇಹ, ಉಸಿರು ಮತ್ತು ಮನಸ್ಸು ಎಲ್ಲವನ್ನೂ ಒಟ್ಟಿಗೆ ತರುವ ಮೂಲಕ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ. ಸೂರ್ಯ ನಮಸ್ಕಾರದಿಂದ ಆರೋಗ್ಯಕ್ಕೆ ಸಿಗುವ ಐದು ಪ್ರಮುಖ ಪ್ರಯೋಜನಗಳು ಯಾವುವು ಎಂದು ನೋಡುವುದಾದರೆ... 


1) ತೂಕ ನಷ್ಟ: 
ಸೂರ್ಯ ನಮಸ್ಕಾರದಲ್ಲಿ ಮಾಡಲಾಗುವ ಕೆಲವು ಭಂಗಿಗಳು ಕಿಬ್ಬೊಟ್ಟೆಯ ಸ್ನಾಯುಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯ ಸುತ್ತಲೂ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಿ, ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು (Weight Loss) ಸಹಾಯಕವಾಗಿದೆ. 


ಇದನ್ನೂ ಓದಿ- ತೆಂಗಿನಕಾಯಿಯ ಈ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ?


2)  ಸ್ನಾಯು ಶಕ್ತಿ: 
ನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ಇದು  ಸ್ನಾಯುಗಳು, ಕೀಲುಗಳು, ಅಸ್ಥಿರಜ್ಜು ಮತ್ತು ಅಸ್ಥಿಪಂಜರದ ವ್ಯವಸ್ಥೆಯನ್ನು ಬಳಪಡಿಸಲು ಹಾಗೂ  ಬೆನ್ನುಮೂಳೆಯ ನಮ್ಯತೆಯನ್ನು ಸುಧಾರಿಸಲು ಪ್ರಯೋಜನಕಾರಿ ಆಗಿದೆ. 


3) ಚರ್ಮದ ಆರೋಗ್ಯ: 
ಸೂರ್ಯ ನಮಸ್ಕಾರ ಮಾಡುವುದರಿಂದ ಇದು ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಈ ಮೂಲಕ ಮುಖದಲ್ಲಿ ನೈಸರ್ಗಿಕ ಹೊಳಪನ್ನು ತರುತ್ತದೆ. ಅಷ್ಟೇ ಅಲ್ಲ, ಚರ್ಮದ ಸುಕ್ಕುಗಳಾಗದಂತೆ ತಡೆಯುತ್ತದೆ. 


4) ಋತುಚಕ್ರ: 
ಅನಿಯಮಿತ ಋತುಚಕ್ರ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ನಿತ್ಯ ಸೂರ್ಯ ನಮಸ್ಕಾರ ಮಾಡುವುದು ಹೆಚ್ಚು ಪ್ರಯೋಜನಕಾರಿ ಆಗಿದೆ. 


ಇದನ್ನೂ ಓದಿ- ಮೈಗ್ರೇನ್ ತಲೆನೋವಿಗೆ ತಕ್ಷಣ ಪರಿಹಾರಕ್ಕಾಗಿ ಮನೆಮದ್ದು


5) ಮಾನಸಿಕ ಆರೋಗ್ಯ: 
ಸೂರ್ಯ ನಮಸ್ಕಾರ ಮಾಡುವುದರಿಂದ ಮನಸ್ಸು ಶಾಂತಗೊಳ್ಳುತ್ತದೆ. ಇದರಿಂದ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.